About Us Advertise with us Be a Reporter E-Paper

Breaking Newsದೇಶಪ್ರಚಲಿತ

ಚಿತ್ರ ಸಂಭಾಷಣಾಗಾರನಿಂದ ಮುಖ್ಯಮಂತ್ರಿವರೆಗೂ….

ತಮಿಳುನಾಡು ರಾಜಕೀಯದಲ್ಲಿ ಏಳು ದಶಕಗಳಿಗೂ ಹೆಚ್ಚು ಕಾಲ ತನ್ನ ಹೆಗ್ಗುರುತನ್ನು ಮೂಡಿಸಿದ್ದ ಮುತ್ತುವೇಲ್ ಕರುಣಾನಿಧಿ ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಾಜಕೀಯ ಪ್ರವೇಶ ಮಾಡಿದ್ದಾಗಿನಿಂದ ಮರಣಹೋಂದುವವವರೆಗೂ ಸಕ್ರೀಯ ರಾಜಕಾರಣಿಯಾಗಿದ್ದ ಕರುಣಾನಿಧಿಗೆ ವಯಸ್ಸು ಕೇವಲ ಸಂಖ್ಯೆ ಮಾತ್ರವಾಗಿತ್ತು. ಆನಾರೋಗ್ಯದಿಂದ ಗಾಲಿ ಕುರ್ಚಿಗೆ ಅಂಟಿಕೊಂಡಿದ್ದರೂ, ಪಾದರಸದಂತೆ ಚುರುಕಾಗಿದ್ದ ಅವರು ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಅಭಿಮಾನಿಗಳ ಪ್ರೀತಿಯ ಕಲೈನಾರ್ ಆಗಿದ್ದ ಕರುಣಾನಿಧಿ ತಮಿಳು ಚಿತ್ರರಂಗದಲ್ಲೂ ಕೂಡ ತಮ್ಮದೇ ಛಾಪನ್ನು ಮೂಡಿಸಿದ್ದರು.

ತಮಿಳು ಕತೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆಯುವ ಮೂಲಕ ಪ್ರಸಿದ್ಧರಾದ ಅವರು, ಬಳಿಕ ತಮ್ಮ ಅಪ್ರತಿಮ ವಾಕ್ಚಾತುರ್ಯದಿಂದಾಗಿ ರಾಜಕೀಯದಲ್ಲೂ ಕೂಡ ಸಂಚಲನ ಮೂಡಿಸಿದರು. ಕೇವಲ ತಮಿಳು ನಾಡಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಪ್ರಭಾವಿ ರಾಜಕಾರಣಿಗಳಲ್ಲಿ ಓರ್ವರಾಗಿದ್ದ ಅವರು, ತಮಿಳು ಚಿತ್ರರಂಗದಲ್ಲಿ ಗಳಿಸಿದ ಹೆಸರು ಅವರನ್ನು ರಾಜಕೀಯವಾಗಿ ಎತ್ತರಕ್ಕೆ ಏರಿಸಿತು. ಐವತ್ತು ವರ್ಷಕ್ಕೂ ಹೆಚ್ಚು ಕಾಲ ಡಿಎಂಕೆ ಅಧ್ಯಕ್ಷರಾಗಿದ್ದ ಕರುಣಾನಿಧಿ, ಅನಾರೋಗ್ಯ ಕಾರಣದಿಂದಾಗಿ 50 ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಕೆಲದಿನಗಳ ಹಿಂದೆ ಮೂತ್ರಕೋಶದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅನಾರೋಗ್ಯ ಉಲ್ಬಣಿಸಿದ್ದರಿಂದ ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಂಜೆ 6.10 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಕೇವಲ ಗಾಲಿ ಕುರ್ಚಿಯಲ್ಲೇ ಕುಳಿತು ಇಡೀಯ ತಮಿಳುನಾಡಿನ ರಾಜಿಕೀಯವನ್ನು ನಿಯಂತ್ರಿಸುತ್ತಿದ್ದ ಮುತ್ತುವೇಲ್ ಕರುಣಾನಿಧಿ ಬಗೆಗಿನ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

– ಜುಲೈ 27 ರಂದು ಡಿಎಂಕೆ ಮುಖ್ಯಸ್ಥನಾಗಿ 50 ವರ್ಷಗಳನ್ನು ಪೂರೈಸಿದ್ದ ಕರುಣಾನಿಧಿ, 1969 ಜುಲೈ 27 ರಂದು ಡಿಎಂಕೆಯ ಅಧ್ಯಕ್ಷರಾಗಿ ಡಿಎಂಕೆ ಸ್ಥಾಪಕ ಸಿ.ಎನ್ ಅನ್ನಾದುರೈ ನಿಧನದ ಬಳಿಕ 1969 ಫೆಬ್ರವರಿ 10 ರಂದು ಮೊದಲ ಬಾರಿಗೆ ತಮಿಳು ನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

– 1977-78 ರ ಸಮಯದಲ್ಲಿ ಡಿಎಂಕೆ ಪಕ್ಷ ಎರಡು ಹೋಳಾದರೂ, ಕರುಣಾನಿಧಿ ಡಿಎಂಕೆ ಮೇಲೆ ಪ್ರಬಲ ಹಿಡಿತ ಹೊಂದಿದ್ದರು.

– ತಾಂಜಾವೂರಿನ ತಿರುಕ್ಕುವಲೈ ಎಂಬಲ್ಲಿ 1924 ಜೂನ್ 3 ರಂದು ಜನಿಸಿದ ಕರುಣಾನಿಧಿ 12 ಬಾರಿ ವಿಧಾನಸಭೆ ಸದಸ್ಯರಾಗಿ ಹಾಗೂ 1 ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

– ಕರುಣಾನಿಧಿ ತಂದೆ ಮುತ್ತುವೇಲ್ ಹಾಗೂ ತಾಯಿ ಅಂಜುಗಂ. ಬಾಲ್ಯದ ಹೆಸರು ದಕ್ಷಿಣಮೂರ್ತಿಯಲ್ಲಿ ಬ್ರಾಹ್ಮಣತ್ವದ ಛಾಯೆ ಇದೆ ಎಂದು ಹೇಳಿ, ಅಚ್ಚ ತಮಿಳಿನಲ್ಲಿ ಕರುಣಾನಿಧಿ ಎಂದು ಹೆಸರು ಬದಲಿಸಿಕೊಳ್ಳುತ್ತಾರೆ.

– ದ್ರಾವಿಡ ಕಾಳಗಂನ ಮುಖ್ಯಸ್ಥರಾಗಿದ್ದ, ರಾಮಸ್ವಾಮಿ ಪೆರಿಯಾರ್‌ರವರ ಚಳುವಳಿಯಿಂದ ಪ್ರೇರೇಪಿತರಾಗಿ 14ನೇ ವಯಸ್ಸಿಗೆ ರಾಜಕೀಯ ಪ್ರವೇಶ ಮಾಡಿ, ದ್ರಾವಿಡ ಚಳವಳಿಯಲ್ಲಿ ಯುವಕರನ್ನು ಭಾಗವಹಿಸುವಂತೆ ಪ್ರೇರೇಪಿಸುತ್ತಾರೆ.

– ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿರುವ ಕರುಣಾನಿಧಿ, ಮೊದಲ ಬಾರಿ ವಿಧಾನಸಭೆ ಚುನಾವಣೆಗೆ ಕುಲಿಥಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ಒಟ್ಟು 13 ಬಾರಿ ಸ್ಪರ್ಧೆ ಮಾಡಿರುವ ಕರುಣಾನಿಧಿ ಒಮ್ಮೆ ಮಾತ್ರ ಸೋಲು ಕಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close