About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮರೀನಾ ಬೀಚ್‌ನಲ್ಲಿ ಕರುಣಾ ಅಂತ್ಯಸಂಸ್ಕಾರ

ಚೆನ್ನೈ: ರಾಜಕಿಯ ಮೇಲಾಟಕ್ಕೆ ಕಾರಣಾವಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಸಂಬಂಧಪಟ್ಟ ಕಲಹಕ್ಕೆ ಕೊನೆಗೂ ಬ್ರೇಕ್‌ ಬಿದ್ದಿದೆ.

ಚೆನ್ನೈನ ಖ್ಯಾತ ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ನೆರವೇರಿಸಲು ಮದ್ರಾಸ್‌ ಹೈಕೋರ್ಟ್ ಕೊನೆಗೂ ಅನುಮತಿ ನೀಡಿದೆ. ತಮ್ಮ ರಾಜಕೀಯ ಗುರು ಸಿ ಎನ್‌ ಅಣ್ಣಾದುರೈ ಸಮಾಧಿ ಸ್ಥಳದಲ್ಲೇ ಕರುಣಾನಿಧಿ ಅಂತಿಮ ಸಂಸ್ಕಾರ ನೆರವೇರಲಿದೆ.

ಈ ಮೂಲಕ, ಮರೀನಾ ಬೀಚ್‌ ಬಳಿ ಅಂತ್ಯಸಂಸ್ಕಾರಕ್ಕೆ ಒಳಗಾದ ತಮಿಳುನಾಡಿದ ನಾಲ್ಕನೇ ಮುಖ್ಯಮಂತ್ರಿ ಕರುಣಾನಿಧಿಯಾಗಿದ್ದಾರೆ. ಅಲ್ಲದೇ ಈ ಪ್ರದೇಶದಲ್ಲಿ ಚಿರನಿದ್ರೆಗೆ  ಜಾರಿದ ರಾಜ್ಯದ ಮೊದಲ ಮಾಜಿ ಮುಖ್ಯಮಂತ್ರಿ ಕರುಣಾ ಆಗಿದ್ದಾರೆ.

ಈ ಮುನ್ನ ಸಿ ಎನ್‌ ಅಣ್ಣಾದುರೈ, ಎಂ ಜಿ ರಾಮಚಂದ್ರನ್‌ ಹಾಗು ಜಯಲಲಿತಾ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಕೊನೆಯುಸಿರೆಳೆದಿದ್ದರು. ಕರುಣಾ ನಿಧಿ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್‌ನಲ್ಲಿ ನಡೆಸಲು ಅನುಮತಿ ಕೋರಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ಎಐಎಡಿಎಂಕೆ ಸರಕಾರ ತಿರಸ್ಕರಿಸಿ, ನಗರದ ಗಾಂಧಿ ಮಂಡಪಮ್‌ ಬಳಿ ನೆರವೇರಿಸಲು ಸೂಚಿಸಿತ್ತು. ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

Tags

Related Articles

Leave a Reply

Your email address will not be published. Required fields are marked *

Language
Close