ಕಾಶ್ಮೀರದ ಕಳವಳ

Posted In : ಸಂಪಾದಕೀಯ-1

ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರ ನುಸುಳು ದಾಳಿ ಅವ್ಯಾಹತವಾಗಿ ಮುಂದುವರಿದಿರುವುದು ಕಳವಳಕ್ಕೆ ಎಡೆಮಾಡಿ ಕೊಟ್ಟಿದೆ. ಎರಡು ದಿನಗಳ ಹಿಂದಷ್ಟೇ ಸುನ್‌ಜ್ವಾನ ಸೇನಾ ಶಿಬಿರದ ಮೇಲ ದಾಳಿಗೈದು ಐವರು ಭಾರ ತೀಯ ಯೋಧರನ್ನು ಹತ್ಯೆ ಮಾಡಿದ ಬೆನ್ನಲ್ಲಿಯೇ ಹಲವು ಕಡೆಗಳಲ್ಲಿ ಸೇನೆಯನ್ನು ಕೆಣಕುವ ಪ್ರಯತ್ನದಲ್ಲಿ ಉಗ್ರರು ನಿರತರಾಗಿ ದ್ದಾರೆ.

ಕಳೆದ ವರ್ಷವಷ್ಟೇ ಪಾಕ್‌ನ ನಿರ್ದಿಷ್ಟ ದಾಳಿ ಮೂಲಕ ಉಗ್ರ ಸಂಘಟನೆಗಳ ಹುಟ್ಟಡಗಿಸಲಾಗಿತ್ತಾದರೂ ಪಾಕಿಸ್ತಾನ ಇದರಿಂದ ಯಾವುದೇ ಪಾಠ ಕಲಿತಂತೆ ಕಾಣುತ್ತಿಲ್ಲ. ಭಾರತದ ಗಡಿಯನ್ನು ಪ್ರಕ್ಷುಬ್ದವಾಗಿಸುವ ಅದರ ಹವಣಿಕೆ ಇನ್ನೂ ನಿಂತಿಲ್ಲ. ಸಹಜ ವಾಗಿಯೇ ಕೇಂದ್ರ ಈ ದಾಳಿಗಳನ್ನು ತೀರಾ ಗಂಭೀರವಾಗಿ ಪರಿಗಣಿಸಿದೆ. ಗೃಹ ಸಚಿವ ರಾಜನಾಥ ಸಿಂಗ್ ಅವರು ಉನ್ನತ ಅಧಿ ಕಾರಿಗಳೊಂದಿಗೆ ಪರಿಸ್ಥಿತಿ ಯ ಅವಲೋಕನ ನಡೆಸಿದ್ದಾರೆ. ಇದರ ಬೆನ್ನಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಖುದ್ದು ಸುನ್‌ಜ್ವಾನ ಸೇನಾ ಶಿಬಿರಕ್ಕೆ ಭೇಟಿ ನೀಡಿ ವಿವರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ತಡೆಯಲು ಸರಕಾರ ರಾಜ ತಾಂತ್ರಿಕ ಮಟ್ಟದಲ್ಲಿ ಏನೆಲ್ಲ ಒತ್ತಡ ಹಾಕಲು ಸಾಧ್ಯವೋ ಅದನ್ನು ಜರೂರಾಗಿ ಮಾಡಬೇಕಿದೆ.

ಅಮೆರಿಕ ಸಹ ತನ್ನ ಪಾಕಿಸ್ತಾನ ಪರವಾದ ಧೋರಣೆಯಲ್ಲಿ ಭಾರೀ ಬದಲಾವಣೆ ತಂದಿರುವ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಪರಿಸ್ಥಿತಿಯನ್ನು ಭಾರತ ಗರಿಷ್ಠ ಲಾಭಕ್ಕೆ ಬಳಸಿಕೊಳ್ಳಬೇಕಿದೆ. ಈಗಾಗಲೇ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗಡಿಯಾಚೆ ಯಿಂದ ಒಂದು ಗುಂಡು ಬಂದರೆ ನಮ್ಮಿಂದ ನೂರು ಗುಂಡು ಹಾರುತ್ತವೆ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಒಂದು ರೀತಿಯಲ್ಲಿ ಇದು ಸರಕಾರದ ನಿಲುವೇ ಆಗಿದೆ. ಕೇಂದ್ರದ ಈ ಗಟ್ಟಿ ನಿಲುವನ್ನು ರಾಜ್ಯ ಸರಕಾರವೂ ತೋರಬೇಕಿದೆ. ಕಾಶ್ಮೀರದಲ್ಲಿ ಆಡಳಿತದಲ್ಲಿರುವ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಸರಕಾರ ಪ್ರತ್ಯೇಕತಾವಾದಿಗಳ ಪರ ಮೃದು ಧೋರಣೆ ಹೊಂದಿರುವುದು ಬಹಿರಂಗ ಸತ್ಯ.

ಈ ಮಧ್ಯೆ ಭಾರತದ ಪ್ರತಿದಾಳಿ ಸಾಮರ್ಥ್ಯ ಅರಿತಿರುವ ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈಹಾಕದಂತೆ ಎಚ್ಚರಿಕೆ ನೀಡಿದೆ. ಆದರೆ ಈ ಎಚ್ಚರಿಕೆಯನ್ನು ಭಾರತ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಏಕೆಂದರೆ ಆ ದೇಶದ ಕುಯುಕ್ತಿ ಜಗತ್ತಿಗೇ ಇದಕ್ಕಾಗಿ ವಿಶ್ವಸಂಸ್ಥೆಯಂತಹ ಜಾಗತಿಕ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಾಕಿಸ್ತಾನದ ಬಣ್ಣ ಇನ್ನಷು ಬಯಲು ಮಾಡುವ ಅಥವಾ ಅಲ್ಲಿನ ಉಗ್ರ ಶಿಬಿರಗಳ ಮೇಲೆ ಸಂಘಟಿತ ದಾಳಿಗೆ ಇರಬಹುದಾದ ಅವಕಾಶಗಳನ್ನು ಪರಾಂಬರಿಸುವುದು ಒಳಿತು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಉಪೇಕ್ಷೆ ಸಲ್ಲ.

Leave a Reply

Your email address will not be published. Required fields are marked *

14 − 12 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top