ನನಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಇದೆ: ಕಥುವಾ ಸಂತ್ರಸ್ತೆ ಪರ ವಕೀಲೆ

Posted In : ದೇಶ

ಶ್ರೀನಗರ: ಜಮ್ಮುವಿನ ಕಥುವಾದಲ್ಲಿ ನರ ರಾಕ್ಷಸರ ಅಟ್ಟಹಾಸಕ್ಕೆ ಬಲಿಯಾದ ಎಂಟರ ಬಾಲಕಿಯ ಕುಟುಂಬದ ಪರ ವಾದಿಸುತ್ತಿರುವ ವಕೀಲೆ ದೀಪಿಕಾಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಇದ್ದು, ರಕ್ಷಣೆ ಕೋರಿ ಸುಪ್ರಿಂ ಕೋರ್ಟ್ ಹೋಗಿದ್ದಾರೆ.
ನಾನು ಎಷ್ಟು ದಿನ ಬದುಕಿರುತ್ತೇನೆ ನನಗೆ ಗೊತ್ತಿಲ್ಲ. ನನ್ನನ್ನು ಅತ್ಯಾಚಾರ ಮಾಡಲೂಬಹುದು. ನನ್ನನ್ನು ಕೊಲ್ಲಲೂಬಹುದು. ನನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯೂ ಇದ್ದು, ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಅದಕ್ಕಾಗಿ ರಕ್ಷಣೆ ಕೋರಿ ಸುಪ್ರಿಂ ಕೋರ್ಟ್ ಮೊರೆ ಹೋಗಲಿದ್ದೇನೆ ಎಂದು ದೀಪಿಕಾ ರಜಾವತ್ ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ವಾದದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಬೆಳಿಗ್ಗೆ ಸಂತ್ರಸ್ತೆಯ ತಂದೆ, ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ಪ್ರಕರಣವನ್ನು ಚಂಢೀಗಡಕ್ಕೆ ವರ್ಗಾಯಿಸಬೇಕು ಎಂದು ಕೋರಿ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಕಥುವಾದಲ್ಲಿ ಮುಂದುವರಿಸಲು ಪೂರಕ ವಾತಾವರಣ ಇಲ್ಲ ಎಂದು ವಕೀಲೆ ರಜವತ್ ಹೇಳಿದ್ದಾರೆ.

ಈ ಪ್ರಕರಣ ರಾಷ್ಟ್ರಾದ್ಯಂತ ಆಘಾತ ಹಾಗೂ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ನಿವೃತ್ತ ಕಂದಾಯ ಅಧಿಕಾರಿ, ಇಬ್ಬರು ಪೊಲೀಸರು ಹಾಗೂ ಒಬ್ಬ ಅಪ್ರಾಪ್ತ ಸೇರಿ ಒಟ್ಟು ಆರು ಮಂದಿ ಬಾಲಕಿಗೆ ಮಾದಕ ವಸ್ತು ಕೊಟ್ಟು. ಚಿತ್ರ ಹಿಂಸೆ ನೀಡಿ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಂದಿದ್ದರು.

Leave a Reply

Your email address will not be published. Required fields are marked *

6 + four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top