ವಿಶ್ವವಾಣಿ

ವಿಡಿಯೋ:- ಕಾವೇರಿ ರಭಸಕ್ಕೆ ಕೊಚ್ಚಿಹೋದ ಬ್ರಿಟೀಷರ ಕಾಲದ ವೆಸ್ಲಿ ಸೇತುವೆ

ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆಯಾಗುತ್ತಿರುವ ಕಾರಣ ಕೃಷ್ಣರಾಜ ಸಾಗರ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಈ ಕಾರಣ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪಿದೆ.

ನದಿಯಲ್ಲಿ ನೀರಿನ ಮಟ್ಟ ಹಾಗು ರಭಸ ಹೆಚ್ಚಾದ ಕಾರಣ ಶಿವನ ಸಮುದ್ರದ ಬಳಿ ಇರುವ ಬ್ರಿಟೀಷರ ಕಾಲದ ವೆಸ್ಲಿ ಸೇತುವೆ ಕೊಚ್ಚಿಹೋಗಿದೆ. ಈ ದೃಶ್ಯವನ್ನು ಸೆರೆಹಿಡಿದು ವಾಟ್ಸಾಪ್‌ನಲ್ಲಿ ಹಾಕಲಾಗಿದ್ದು ಎಲ್ಲೆಡೆ ಹಂಚಿಕೆಯಾಗಿ, ನದಿಯ ವೈಭವವನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದೇ ವೇಳೆ, ಶಿವನ ಸಮುದ್ರದ ಶಿಂಷಾ ಜಲಪಾತ ತನ್ನ ವೈಭವದ ದಿನಗಳನ್ನು ಕಾಣುತ್ತಿದ್ದು, ಕಣ್ತುಬಿಕೊಳ್ಳಲು ಸಾಕಷ್ಟು ಜನ ಭೇಟಿ ನೀಡುತ್ತಿದ್ದಾರೆ.