About Us Advertise with us Be a Reporter E-Paper

ಯಾತ್ರಾಯಾತ್ರಾ panel2

Kaza ಟಿಬೆಟ್-ಲಡಾಖಿನ ರೆಪ್ಲಿಕಾ

ಸುಧೀರ್ ಸಾಗರ್

ಲಾಹುಲ್ ಸ್ಪಿತೀ ವ್ಯಾಲಿಯಲ್ಲಿ ನೋಡಲೇಬೇಕಾದ ಪಟ್ಟಿಯಲ್ಲಿನ ತೊಂಬತ್ತು ಪ್ರತಿ ಶತವನ್ನು ತನ್ನೊಡಲಲ್ಲಿ ಆಶ್ರಯವನ್ನಿತ್ತು ಪೋಷಿಸು ತ್ತಿರುವ, ಬೌದ್ಧ ಸಂಪ್ರದಾಯದಲ್ಲಿ ಟಿಬೆಟ್ ಹಾಗೂ ಲಡಾಖಿನ ರೆಪ್ಲಿಕಾದಂತೆ ಕಂಡುಬರುವ, ಸಮುದ್ರ ಮಟ್ಟದಿಂದ ಸುಮಾರು 12000 ಅಡಿ ಎತ್ತರದಲ್ಲಿದ್ದು ಇಡೀ ಪ್ರಾಂತ್ಯದಲ್ಲಿಯೇ ಅತ್ಯಂತ ಶೀತಪ್ರದೇಶವಾಗಿ ಗುರುತಿಸಿಕೊಂಡಿರುವ ಪುಟ್ಟ ನಗರವೇ ಕಾಜಾ.

ಹೊರ ಜಗತ್ತಿಗೆ ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ತೆರೆದುಕೊಳ್ಳುವ ಕಾಜಾ, ತನ್ನಲ್ಲಿ ಜರುಗುವ ಟ್ರೈಬಲ್ ಫೇರ್, ಪೌರೀ ಉತ್ಸವ ಸೇರಿದಂತೆ ಹಲವು ಉತ್ಸವಗಳು, ಆ ಸಮಯದಲ್ಲಷ್ಟೇ ವಿಶಿಷ್ಟ ಧಿರಿಸುಗಳು, ನೃತ್ಯ ಪ್ರಕಾರಗಳು ಹಾಗೂ ತಿಂಡಿ ತಿನಿಸುಗಳಿಗೆ ಜಗದ್ವಿಖ್ಯಾತ. ಅದ ರಲ್ಲೂ ಆಗಸ್‌ಟ್ ತಿಂಗಳಿನಲ್ಲಿ ನಡೆಯುವ ಲಾದಚಾರ್ ಉತ್ಸವದಲ್ಲಿ ಬೆಂಕಿಯ ನಡುವಿನ ಚಾಮ್ ನೃತ್ಯವಂತೂ ನೋಡುಗರನ್ನು ಮಂತ್ರಮುಗ್ಧಗೊಳಿ ಸುತ್ತದೆ. ಇನ್ನೊಂದು ವಿಶೇಷವೆಂದರೆ ಜಗತ್ತಿ ನಲ್ಲಿಯೇ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್ ಕೂಡಾ ಇಲ್ಲಿಯೇ ಇರೋದು.

ಸಕ್ಯಾ ಥಾಂಗ್ಯೂಂಡ್ ಮೊನಾಸ್ಟರಿ

ಕಾಜಾ ಪಟ್ಟಣದಿಂದ ಕೇವಲ ನಾಲ್ಕು ಕಿಮೀ ದೂರದಲ್ಲಿರುವ ಹದಿನಾಲ್ಕನೇ ಶತಮಾನಕ್ಕೆ ಸೇರಿದ ಬೌದ್ಧ ದೇವಾಲಯವಿದು. ಹೊರಾವರಣವೂ ಒಳಾವರಣದ ತುಂಬೆಲ್ಲಾ ಬಣ್ಣದ ಚಿತ್ತಾರಗಳಿಂದ ಮೈದುಂಬಿ ಅತ್ಯಾಕರ್ಷಕವಾಗಿ ಕಾಣುವ ಮೊನಾಸ್ಟರಿಯ ಮತ್ತೊಂದು ಆಕರ್ಷಣೆ ಅಲ್ಲಿನ ಪುಟ್ಟ ಬಾಲಭಿಕ್ಷುಗಳು. ಪ್ರತಿ ದಿನ ಬೆಳಗ್ಗೆ ನಡೆಯುವ ವಿಶೇಷ ಪ್ರಾರ್ಥನೆಯಲ್ಲಿ ಎಲ್ಲರೂ ಭಾಗವಹಿಸಬಹುದಾಗಿದ್ದು, ತದನಂತರ ನೀಡುವ ಟೀ ಬ್ರೆಡ್ ಹಾಗೂ ಬೆಣ್ಣೆಯನ್ನು ಪುಟ್ಟ ದೇವತೆಗಳಂತಹ ಬಾಲಭಿಕ್ಷುಗಳೊಂದಿಗೆ ಕುಳಿತು ಸವಿಯುವುದು ವಿಶಿಷ್ಟ ಅನುಭವ.

ಗ್ವಿಯು

ಈಜಿಪ್ಟಿನ ಮಮ್ಮಿಗಳು ಚಿರಪರಿಚಿತ. ಆದರೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೆ ಸ್ವಾಭಾವಿಕವಾಗಿ ಸಂರಕ್ಷಿಸಲ್ಪಟ್ಟಿರುವ ಮಮ್ಮಿಯೊಂದು ಭಾರತದಲ್ಲಿದೆ ಎಂಬುದು ಬಹುತೇಕರಿಗೆ

ಕಾಜಾದಿಂದ ಟಾಬೂ ಮಾರ್ಗದಲ್ಲಿ, ಕೇವಲ ಐವತ್ತು ಮನೆಗಳಿರುವ, ಆಧುನೀಕತೆಯ ಓಟದಲ್ಲಿ ಬಹಳ ಹಿಂದೆಯೇ ಉಳಿದಿರುವ ಪುಟ್ಟ ಹಳ್ಳಿ ಗ್ವಿಯು. ಊರಿನ ಗುಡ್ಡದ ಮೇಲಿರುವ ಪುಟ್ಟ ದೇಗುಲ ದೊಳಗಿನ ಗಾಜಿನ ಪೆಟ್ಟಿಗೆಯೊಳಗೆ ಸಂರಕ್ಷಿಸ ಲಾಗಿರುವ ಚಾಕಲೇಟ್ ಬ್ರೌನ್ ಬಣ್ಣದಲ್ಲಿರುವ ಮಮ್ಮಿಯೊಂದು ಪ್ರವಾಸಿಗರನ್ನಷ್ಟೇ ಅಲ್ಲದೆ ಜಗತ್ತಿನ ಸಂಶೋಧಕರನ್ನೆಲ್ಲಾ ತನ್ನತ್ತ ಸೆಳೆಯುತ್ತಿದೆ. ಸಾಂಘಾ ಟೆನ್ಝಿನ್ ಎಂಬ ಬೌದ್ಧ ಭಿಕ್ಷುವಿನ ಕಳೇಬರ ಇದಾಗಿದ್ದು, ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಈ ಮಮ್ಮಿಯ ವಿಶೇಷವೆಂದರೆ ಧ್ಯಾನಭಂಗಿಯಲ್ಲಿ ಕುಳಿತಿರುವ ಭಿಕ್ಷುವಿನ ದೇಹ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕವಾಗಿಯೇ ಮಮ್ಮಿಯಾಗಿ ಪರಿವರ್ತನೆಯಾಗಿದ್ದು ಈಗಲೂ ಇದರ ಕಣ್ಣು ತಲೆಗೂದಲು ಹಾಗೂ ಉಗುರುಗಳು ಜೀವಂತ ವಾಗಿರುವಂತೆ ಕಂಡು ಬರುತ್ತವೆ.

ಹಿನ್ನಲೆಯ ಕುರಿತಾಗಿ ಹಲವಾರು ವಾದಗಳು ಚಾಲ್ತಿಯಲ್ಲಿದ್ದು ನಿಖರವಾದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ರಸ್ತೆ ಕಾಮಗಾರಿ ಮಾಡುವ ಸಮಯದಲ್ಲಿ ಹಿಮವನ್ನು ಅಗೆಯುತ್ತಿದ್ದಾಗ ದೊರೆಯಿತೆನ್ನಲಾಗುವ ಈ ಮಮ್ಮಿಯನ್ನು ಗ್ವಿಯುವಿನಲ್ಲಿ ಗುಡಿಯೊಂದನ್ನು ನಿರ್ಮಿಸಿ ಡಲಾಗಿದೆ.

ವಿಯೆನ್ನಾದ ಸಂಸ್ಥೆಯೊಂದು ಈ ದೇಹದ ಅಧ್ಯಯನ ನಡೆಸಿ ಕಾರ್ಬನ್ ಮ್ಯಾಪಿಂಗ್ ಮಾಡಲಾಗಿ ಐನೂರು ವರ್ಷ ಹಳೆಯ ದೆಂಬ ಸಂಗತಿ ಬಯಲಾಗಿದೆ.

ಧಂಕರ್ ಮೊನಾಸ್ಟರಿ

ಕಾಜಾ ಹಾಗೂ ಟಾಬೋ ನಡುವಿನ ಹಾದಿಯಲ್ಲಿ ಸುಮಾರು 35 ಕಿಮೀ ದೂರದಲ್ಲಿರುವ ಶಿಚಿಲ್ಲಿಂಗ್ ಎಂಬ ಹಳ್ಳಿಯ ನೆತ್ತಿಯ ಮೇಲೆ ಸಮುದ್ರ ಮಟ್ಟ ದಿಂದ ಸರಿಸುಮಾರು 13000 ಅಡಿಗಳ ಎತ್ತರದಲ್ಲಿ ನಿರ್ಮಾಣವಾಗಿರುವ 1200 ವರ್ಷಗಳಷ್ಟು ಪುರಾತನ ಧಂಕರ್ ಬೌದ್ಧ ದೇವಾಲಯ ಮೊದಲ ನೋಟಕ್ಕೇ ಬೆರಗುಗೊಳಿಸುತ್ತದೆ. ಶಿಲಾಯುಗ ಕಾಲದ ಪಳಯುಳಿಕೆಯಂತೆ ಕಾಣುವ ಈ ಮೊನಾಸ್ಟರಿ ಯಾವುದೋ ಹಾಲಿವುಡ್ ಮೂವಿ ಯೊಂದರ ನಂತೆ ಭಾಸವಾಗಿಸುತ್ತದೆ. ಕಡಿದಾದ ಬಂಡೆಗಳಿಂದ ಕೂಡಿದ ಪರ್ವತದ ಅಂಚಿನಲ್ಲಿ ನಿರ್ಮಿಸಲಾಗಿದ್ದ ಕೋಟೆಯನ್ನೇ ತದನಂತರದಲ್ಲಿ ಮೊನಾಸ್ಟರಿಯಾಗಿ ಪರಿವರ್ತಿಸಲಾಗಿದ್ದು,ಪ್ರಕೃತಿಯ ಆರ್ಭಟಗಳಿಗೆ ಸಿಲುಕಿ ತೀರಾ ಶಿಥಿಲಾವಸ್ಥೆಗೆ ತಲುಪಿದ್ದು,ಜಗತ್ತಿನ ವಿನಾಶದಂಚಿನಲ್ಲಿರುವ ಸ್ಮಾರಕಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಧಂಕರ್ ಸರೋವರ

ನೀವು ಧಂಕರ್ ಮೊನಾಸ್ಟರಿ ವೀಕ್ಷಣೆಗೆ ಹೋಗಿದ್ದೇ ಹೌದಾದಲ್ಲಿ ಮೊನಾಸ್ಟರಿಯಿಂದ ಕೇವಲ ಒಂದು ಗಂಟೆಯ ತೀರಾ ಕಷ್ಟಕರವೇನೂ ಅಲ್ಲದ ಚಾರಣದ ನಂತರ ಸಿಗುವ ಧಂಕರ್ ಸರೋವರವನ್ನು ನೋಡಲು ಮಾತ್ರ ಮರೆಯದಿರಿ. ಸಮುದ್ರ ಮಟ್ಟದಿಂದ 14000 ಅಡಿಗಳ ಹಸಿರು ಮತ್ತು ನೀಲಿ ಬಣ್ಣಗಳ ಜುಗಲ್ ಬಂಧಿಯ ನಡುವೆ ಕಂಗೊಳಿಸೋ ಸಿಹಿ ನೀರಿನ ಸರೋವರ ಚಾರಣದ ಆಯಾಸವನ್ನೆಲ್ಲಾ ಅರೆ ಕ್ಷಣದಲ್ಲಿ ಮರೆಯಾಗಿಸಿ ಬಿಡುತ್ತದೆ.

ಪಿನ್ ವ್ಯಾಲಿ ನ್ಯಾಶನಲ್ ಪಾರ್ಕ್

ಕಾಜಾದಿಂದ 30ಕಿಮೀ ದೂರದಲ್ಲಿ ಧಂರ್ಕ ಮೊನಾಸ್ಟರಿಯ ದಕ್ಷಿಣಕ್ಕೆ ಟಿಬೆಟ್ ಗಡಿಗೆ ಅಂಟಿಕೊಂಡಂತೆ ಪಿನ್ ನದಿಯ ತಪ್ಪಲಿನ ಭೂ ಪ್ರದೇಶ ಪಿನ್ ವ್ಯಾಲಿ ನಾಶನಲ್ ಪಾರ್ಕ್. ತನ್ನ ಕೊರೆಯೋ ಚಳಿಯ ವಾತಾವರಣದಿಂದಾಗಿ ಹಿಮಚಿರತೆ ಸೈಬೇರಿಯನ್ ಫಾಕ್ಸ್ ಮುಂತಾದ ಅತೀ ವಿರಳ ಪ್ರಭೇದಗಳ ವಾಸ ಸ್ಥಾನವಾಗಿದ್ದ ಈ ವ್ಯಾಲಿ ಬೇಟೆಗಾರರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕಾರಣ 1987 ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಿ ಸಂರಕ್ಷಿಸಲಾಯ್ತು.ಸದಾ ಹಿಮ ಂದಾ ವೃತವಾದ ಪ್ರದೇಶವಾದ ಕಾರಣ ತೀರಾ ವಿರಣ ಸಸ್ಯ ಸಂಕುಲವನ್ನು ಹೊಂದಿರೋ ಪಿನ್‌ವ್ಯಾಲಿ ಹಿಮ ಚಿರತೆ ಹಾಗೂ ಅದರ ಆಹಾರವಾದ ಐಬೆಕ್‌ಸ್ಗಳ ತವರೂರಿದು.

Tags

Related Articles

Leave a Reply

Your email address will not be published. Required fields are marked *

Language
Close