About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಹಜ್ಜ್ ಯಾತ್ರಿಗಳ ಸೇವೆಯಲ್ಲಿ ಕನ್ನಡಿಗರು!

 ದಮಾಮ್‌ (ಸೌದಿ ಅರೇಬಿಯಾ): ಮುಸ್ಲಿಮರ ಪವಿತ್ರ ಹಜ್ಜ್ ಯಾತ್ರೆ ಸಂದರ್ಭ ಯಾತ್ರಗಳಿಗೆ ಸಹಾಯ ಮಾಡಲು ಕನ್ನಡಿಗರ ಅನಿವಾಸಿ ಸಂಘಟನೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಕಲ್ಚರಲ್‌ ಫೌಂಡೇಶನ್‌ ಎಂಬ ಅನಿವಾಸಿ ಕನ್ನಡಿಗರ ಸಂಘಟನೆ ಕಳೆದ ನಾಲ್ಕು ವರ್ಷಗಳಿಂದ ಹಜ್ಜ್ ಯಾತ್ರಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಕನ್ನಡಿಗರು ಸಹಿತ ಜಗತ್ತಿನ ವಿವಿಧ ಕಡೆಯಿಂದ ಬರುವ ಯಾತ್ರಿಗಳಿಗೆ ಈ ಸಂಘಟನೆ ಸಹಾಯ ಹಸ್ತ ಚಾಚುತ್ತಿದ್ದು ಸೌದಿ ಅರೇಬಿಯಾ ಸರಕಾರದ ಪ್ರಶಂಸೆಗೂ ಪಾತ್ರವಾಗಿದೆ.  ಎರಡು ತಂಡಗಳನ್ನು ರಚಿಸಿಕೊಂಡು ಒಂದು ತಿಂಗಳಿನಾದ್ಯಂತ ಮಕ್ಕಾದಲ್ಲಿ ಹಜ್ಜ್ ಯಾತ್ರಿಗಳ ಸೇವೆಯಲ್ಲಿ ತೊ

ಡಗಿಸಿಕೊಳ್ಳುತ್ತಿದೆ.
ಈ ಸಂಘಟನೆಯ ಅಧೀನದಲ್ಲಿ ಎಚ್‌ಸಿವಿ (Hajj volunteer core) ಎಂಬ ತಂಡ ರಚಿಸಿಕೊಂಡು ಲಕ್ಷಾಂತರ ಮಂದಿಗೆ ಸಹಾಯ ಹಸ್ತ ಚಾಚುತ್ತಿದೆ. ಕೆಲಸಕ್ಕೆಂದು ವಿದೇಶಕ್ಕೆ ತೆರಳಿ, ಅಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಕನ್ನಡಿಗರ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಮಿನಾ,ಮುಝ್ದಲಿಫದಲ್ಲಿ ಹಜ್ಜ್‌ನ ಪ್ರಧಾನ ಕರ್ಮಗಳನ್ನು ಮುಗಿಸಿ ಹಿಂತಿರುಗುವಾಗ ಜನ ನಿಬಿಡತೆಯ ನೂಕು ನುಗ್ಗಲಿಗೆ ಯಾತ್ರಿಗಳು ತಮ್ಮ ಪರಿಚಾರಕರನ್ನು ಕಳಕೊಳ್ಳುವುದು ಅಲ್ಲಿ ಸರ್ವೇಸಾಮಾನ್ಯ. ಅಲ್ಲಿ ಅವರಿಗೆ ಸಹಾಯ ಮಾಡುವುದರಿಂದ ಹಿಡಿದು, ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಾವೇ ಮಾಡಿಕೊಡುತ್ತೇವೆ. ಇಲ್ಲಿ ಬಂದು ಪಾಸ್‌ಪೋರ್ಟ್ ಹಣ ಕಳೆದುಕೊಂಡವರಿಗೆ ನಾವೇ ತವರಿಗೆ ಕಳುಹಿಸುವ ಕೆಲಸ ಮಾಡಿದ್ದೇವೆ. ಇಲ್ಲಿ ಮರಣ ಹೊಂದಿದವರ ಅಂತಿಮ ವಿಧಿ ವಿಧಾನಗಳನ್ನು ಕೆ.ಸಿ.ಎಫ್‌ನ ಸದಸ್ಯರೇ ಮಾಡಿದ್ದಾರೆ.
                                                  – ಸಿ.ಐ ಇಸ್ಹಾಖ್‌ ಫಜೀರ್‌, ಕೆ.ಸಿ.ಎಫ್‌ ಕಾರ್ಯಕರ್ತ
Tags

Related Articles

Leave a Reply

Your email address will not be published. Required fields are marked *

Language
Close