About Us Advertise with us Be a Reporter E-Paper

ಅಂಕಣಗಳು

ಕಣ್ಗಾವಲು ಇರಲಿ

ಬಡವರು ಮತ್ತು  ಗಮನದಲ್ಲಿಟ್ಟುಕೊಂಡು ಸರಕಾರಗಳು ರೂಪಿಸುತ್ತಿರುವ ಯೋಜನೆಗಳು ಅಧಿಕಾರಶಾಹಿಯ ಭ್ರಷ್ಟಾಚಾರದ ಕಾಮಧೇನುವಾಗಿ ಪರಿವರ್ತನೆ ಆಗಿರುವುದನ್ನು ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅನೇಕ ಪ್ರಕರಣಗಳು ಮತ್ತೆ ಮತ್ತೆ ಸಾರುತ್ತಿವೆ. ಹಿಂದಿನ ಸರಕಾರದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಸರಕಾರದ ಆದೇಶ ಹೊರಡುವ ಮೊದಲೇ ಮೈಸೂರು ಸೇಲ್‌ಸ್ ಇಂಟರ್‌ನ್ಯಾಷನಲ್ ಸಂಸ್ಥೆಯು (ಎಂಎಸ್‌ಐಎಲ್) ಒಂದು ಲಕ್ಷ ಸ್ಟೌವ್‌ಗಳನ್ನು ಖರೀದಿಸಿ, ಕಮಿಷನ್ ನುಂಗಿರುವುದರ ಜತೆಗೆ ತಮಗೆ ಬೇಕಾದವರಿಗೆ ವಿತರಿಸಿ ಅರ್ಹರನ್ನು ಅವಕಾಶ ವಂಚಿತರನ್ನಾಗಿ ಮಾಡಿರುವುದು ಒಂದು ಕಡೆಯಾದರೆ,  ಇಂದಿರಾ ಕ್ಯಾಂಟಿನ್ ಬಾಗಿಲು ಎಳೆದಿದ್ದ ದಿನವೂ ಸುಮಾರು ಎರಡು ಲಕ್ಷ ಮಂದಿ ಊಟ ಮಾಡಿದರೆಂದು ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರುಪಾಯಿ ಲಪಟಾಯಿಸಿರುವುದು ಇನ್ನೊಂದು ಕಡೆ. ಇಂಥ ಅನೇಕ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಆಡಳಿತದ ಚುಕ್ಕಾಣಿ ಹಿಡಿದವರೇನೊ ಜನರಿಗೆ ಅನುಕೂಲವಾಗಲೆಂದು ಎಂದು ಇಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಉಳಿಸಿಕೊಂಡರೆ ವೈಯಕ್ತಿಕವಾಗಿ ತಮಗೂ, ತಮ್ಮ ಪಕ್ಷಕ್ಕೂ ಚುನಾವಣೆ ವೇಳೆ ಲಾಭ ಆಗುತ್ತದೆಂಬುದು ಅವರ  ಎನ್ನುವುದು ಬೇರೆ ಮಾತು. ಕಾರಣ ಏನೇ ಇರಲಿ ಉದ್ದೇಶ ಒಳ್ಳೆಯದೇ ಇರುತ್ತದೆ. ಆದರೆ ಇಂಥ ಯೋಜನೆಗಳು ಯಾರಿಗೆ ತಲುಪಬೇಕೋ ಅವರನ್ನು ತಲುಪದೆ ಅಧಿಕಾರಿಗಳ ಜೇಬು ತುಂಬಿಸುವ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗುತ್ತಿರುವುದು ದುರಂತ. ಯೋಜನೆ ರೂಪಿಸಿದವರು ಅದರ ಜಾರಿಗೂ ಅಷ್ಟೇ ಒತ್ತು ಕೊಡಬೇಕು, ಅದು ಕ್ರಮಬದ್ಧವಾಗಿ ನಡೆಯುತ್ತಿದೆಯೇ ಎಂಬುದರ ಮೇಲೇ ನಿಗಾ ಇಟ್ಟಿರಬೇಕು. ಇಲ್ಲದಿದ್ದರೆ ಅದು ಯಾವುದೇ ಯೋಜನೆ ಆದರೂ ‘ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ’ ಆಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close