About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮತ್ತೊಂದು ದಾಖಲೆ ಬರೆದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆ ಸೃಷ್ಟಿಸಿದೆ. ಈ ಸಾಲಿನ ಮೊದಲ ಮೂರು ತಿಂಗಳಲ್ಲಿ ಬರೋಬ್ಬರಿ 80 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. ಈ ಹಿಂದಿನ ಮೂರು ತಿಂಗಳಲ್ಲಿ 66 ಲಕ್ಷ ಮಂದಿ ಪ್ರಯಾಣಿಸಿದ್ದರು, ಒಟ್ಟು ಪ್ರಯಾಣಿಕರಲ್ಲಿ .32.9ರ ಏರಿಕೆ ಕಂಡಿದೆ.

ಅದೇ ರೀತಿ ಕಾರ್ಗೋ ನಿರ್ವಹಣೆಯಲ್ಲೂ ಶೇ.16.6ರಷ್ಟು ಏರಿಕೆಯಾಗಿದೆ. ಈ ಬಾರಿ 69 ಲಕ್ಷ ದೇಶೀಯ ಹಾಗೂ 11 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಸಕರು ಸೇರಿ 80 ಮಂದಿ ಪ್ರಯಾಣ ಮಾಡಿದ್ದಾರೆ. ಅದರಲ್ಲೂ ಜೂನ್ 30ರಂದು ಒಂದೇ ದಿನ 98,869 ಮಂದಿ ಈ ಏರ್ಪೋರ್ಟ್ ಮೂಲಕ ಪ್ರಯಾಣಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಏರ್ಲೈನ್ಸ್ ಕಂಪನಿಗಳು ಅನೇಕ ಕೊಡುಗೆಗಳನ್ನು ನೀಡಿದ್ದವು, ಹೀಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎನ್ನಲಾಗಿದೆ. ಕಾರ್ಗೋ ಸಾಗಣೆಯಲ್ಲೂ ಏರಿಕೆ ಕಂಡಿದ್ದು, 3 ತಿಂಗಳಲ್ಲಿ 97,486 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದೆ. ಕಳೆದ ಸಾಲಿನಲ್ಲಿ 83,584 ಮೆಟ್ರಿಕ್ ಟನ್ ಇತ್ತು. ಇದೇ ವೇಳೆ ರ್ಏ ಮೂವ್ಮೆಂಟ್ನಲ್ಲೂ ಶೇ.32.9ರಷ್ಟು ಪ್ರಗತಿ ಕಂಡಿದೆ. 58,054 ವಿಮಾನಗಳು ಟೇಕ್ ಆಫ್, ಲ್ಯಾಂಡಿಂಗ್ ಆಗಿವೆ. ಹೊಸ ತಂತ್ರಜ್ಞಾನದ ಮೂಲಕ ನಿರ್ವಹಣೆಯನ್ನು ಸರಳಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದೇವೆ ಎಂದು ಏರ್ಪೋರ್ಟ್ ಸಿಇಒ ಹರಿ ಮರ್ರಾ ತಿಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2017-18ನೇ ಸಾಲಿನಲ್ಲಿ 2.69ಕೋಟಿ ಪ್ರಯಾಣಿಕರು ಬಳಸಿದ್ದು, ವಾರ್ಷಿಕ ಶೇ.17.6ರಷ್ಟು ಪ್ರಗತಿ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದೆ. ವಿಮಾನಗಳ ಹಾರಾಟದಲ್ಲಿಯೂ ಶೇ.10.8ರಷ್ಟು ಬೆಳವಣಿಗೆ ಕಂಡಿದ್ದು, ಒಟ್ಟು 1,97,330 ಹಾರಾಟ ನಡೆಸಿವೆ. 3,48,403 ಮೆಟ್ರಿಕ್ ಟನ್ ಸರಕು ಸಾಗಾಣಿಕೆ ಮೂಲಕ ಕಾರ್ಗೋ ವಿಭಾಗವು ಶೇ.9.1ರಷ್ಟು ಬೆಳವಣಿಗೆ ಸಾಧಿಸಿದೆ.

ವಿಮಾನ ನಿಲ್ದಾಣವು ದೇಶಿಯ 46 ಸ್ಥಳಗಳು ಹಾಗೂ ಅಂತಾರಾಷ್ಟ್ರೀಯ ಮಾರ್ಗದಲ್ಲಿ 21 ಜಾಗಕ್ಕೆ ಸೇರಿ ಒಟ್ಟು 67 ಸ್ಥಳಗಳಿಗೆ 44 ವಿಮಾನಯಾನ ಸಂಸ್ಥೆಗಳ ಮೂಲಕ ವಿಮಾನ ಸಂಪರ್ಕ ಹೊಂದಿದೆ. ಫೆ.19ರಂದು ಒಂದೇ ದಿನ 91,339 ಪ್ರಯಾಣಿಕರು ಹಾರಾಟ ನಡೆಸಿದ್ದು ಹೊಸ ದಾಖಲೆ, ಅಲ್ಲದೇ, ಮಾ.17ರಂದು ಒಂದೇ ದಿನ ಟೇಕಾಫ್ ಮತ್ತು ಸೇರಿ 664 ವಿಮಾನಗಳು ಕೆಐಎನಿಂದ ಹಾರಾಟ ನಡೆಸಿದೆ. 2008ರಲ್ಲಿ ಕಾರ್ಯಾಚರಣೆ ಆರಂಭದ ನಂತರ ಇದುವರೆಗೂ 150 ದಶಲಕ್ಷಕ್ಕೂ ಅಧಿಕ ಪ್ರಯಾಣಿಕರು ಕೆಐಎ ಬಳಕೆ ಮಾಡಿದ್ದಾರೆ. ಮಾರ್ಚ್ ತಿಂಗಳೊಂದರಲ್ಲೇ 25,49,523 ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಕೆ ಮಾಡಿದ್ದೂ ಈ ವರ್ಷದ ದಾಖಲೆಯಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close