About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕೇರಳ ಬ್ಯಾಂಕ್ ಶೀಘ್ರದಲ್ಲೇ ಆರಂಭ

ಕಾಸರಗೋಡು: ಸಹಕಾರಿ ಕ್ಷೇತ್ರ ಒಂದುಗೂಡಿಸಲು ಮಾರ್ಗದರ್ಶಿಯಾಗುವ ಕೇರಳ ಬ್ಯಾಂಕ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಕೇರಳ ಬ್ಯಾಂಕ್ ಮೂಲಕ ಸಣ್ಣ, ಮಧ್ಯಮ ಹೂಡಿಕೆದಾರರು ಎಲ್ಲ ಸ್ತರದ ನಾಗರಿಕರಿಗೆ ಸಹಾಯವಾಗಲಿದೆ. ಹಲವು ದೇಶಗಳಲ್ಲಿ ದುಡಿಯುತ್ತಿರುವ ಅನಿವಾಸಿ ಕೇರಳೀ ಸಮೂಹಕ್ಕೆ ಕೇರಳ ಬ್ಯಾಂಕ್ ವರದಾನವಾಗಲಿದ್ದು, ಅವರು ತಮ್ಮ ಹಣ ನಿಕ್ಷೇಪ ಮಾಡಬಹುದಾಗಿದೆ.

ದೇಶಕ್ಕೆ ಮಾದರಿಯಾಗಲಿರುವ ಕೇರಳ ಬ್ಯಾಂಕ್ ಆರ್ಥಿಕ ಅಭಿವೃಧ್ಧಿಗೆ ಮಾದರಿಯಾಗಲಿದ್ದು, ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಮತ್ತಷ್ಟು ಪ್ರಯೋಜನಕಾರಿಯಾಗಲಿದೆ. ರಾಜ್ಯದ 14 ಜಿಲ್ಲೆಗಳಲ್ಲಿರುವ ಪ್ರಮುಖ 800 ಸಹಕಾರಿ ಜಿಲ್ಲಾ ಬ್ಯಾಂಕ್‌ಗಳು ಕೇರಳ ಬ್ಯಾಂಕ್ ಅಧೀನಕ್ಕೊಳಪಡುವ ಮೂಲಕ ಕಾರ್ಯಾಚರಿಸಲಿವೆ ಎಂದು ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close