About Us Advertise with us Be a Reporter E-Paper

Breaking Newsದೇಶಪ್ರಚಲಿತ

ಯುಎಇಯಿಂದ 700 ಕೋಟಿ ರು. ಸಿಗುವ ವಿಶ್ವಾಸ ಇದೆ!

ದೆಹಲಿ: ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ 700 ಕೋಟಿ ರು. ಅನುದಾನ ಕೊಡುವ ಭರವಸೆ ಇದೆ ಎಂದು ಕೇರಳ ಮುಖ್ಯಮಂತ್ರಿ ವಿಜಯನ್‌ ಪುನರುಚ್ಛರಿಸಿದ್ದಾರೆ.

ಪ್ರವಾಹದ ವೇಳೆ ರಕ್ಷಣಾ ಕಾರ್ಯದಲ್ಲಿ ಅವಿರತವಾಗಿ ದುಡಿದು ಜನರ ಕಷ್ಟಗಳಿಗೆ ಸ್ಪಂದಿಸಿದ ಐಎಎಸ್ ಅಧಿಕಾರಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ವಿದೇಶಿ ರಾಷ್ಟ್ರಗಳು ಕೇರಳಕ್ಕೆ ನೆರವು ನೀಡಲು ಮುಂದೆ ಬಂದಿದೆ. ಯುಎಇ ನೀಡಲು ಮುಂದಾಗಿರುವ 700 ಕೋಟಿಯನ್ನು ಸ್ವೀಕರಿಸಲು ಕೇಂದ್ರ ಸರಕಾರ ನಿರಕಾರಿಸಿದ್ದು, ಕೇಂದ್ರದ ಈ ನಿಲುವು ತಾತ್ಕಾಲಿಕ ಎಂದು ಭಾವಿಸಿದ್ದೇನೆ. ಇದನ್ನು ಕೇಂದ್ರ ಸ್ವೀಕರಿಸುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

ದೇಶ ವಿದೇಶಗಳಿಂದ ಹಲವು ಮಂದಿ ಕೇರಳಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಎಲ್ಲರೂ ಕೊಟ್ಟ ಹಣವನ್ನು ವ್ಯವಸ್ಥಿತವಾಗಿ ಪೋಲಾಗದಂತೆ ಬಳಸಲಾಗುತ್ತದೆ. ಕೇಂದ್ರ ಸರಕಾರ ಪರಿಸ್ಥಿತಿಯನ್ನ ಅವಲೋಕಿಸಿ ಇನ್ನು ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close