About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕೇರಳ ಪ್ರವಾಹಕ್ಕೆ ತಮಿಳುನಾಡು ಕಾರಣ….!?

ದೆಹಲಿ: ಕೇರಳದಲ್ಲಿ  ಭಾರಿ ಪ್ರವಾಹ ಉಂಟಾಗಲು ತಮಿಳುನಾಡು ಸರಕಾರವೇ ಕಾರಣ ಎಂದು ಕೇರಳ ಸರಕಾರ ಆರೋಪಿಸಿದೆ. ಅಲ್ಲದೇ 373 ಮಂದಿ ಸಾವಿಗೂ ಕಾರಣ ಎಂದು ದೂಷಿಸಿದೆ.

ಇಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಕೇರಳ, ಮುಂಜಾಗೃತ ಕ್ರಮವಿಲ್ಲದೇ ಮುಲ್ಲಾಪೆರಿಯಾರ್‌ ಜಲಾಶಯದಿಂದ ಸಡನ್‌ ಆಗಿ ನೀರನ್ನು ಬಿಟ್ಟಿದ್ದೇ ಪ್ರವಾಹದ ಮಟ್ಟ ಹೆಚ್ಚಳವಾಗಲಿಕ್ಕೆ ಪ್ರಮುಖ ಕಾರಣ ಎಂದು ಅರ್ಜಿಯಲ್ಲಿ ತಿಳಿಸಿದೆ.

ಅಲ್ಲದೇ ಜಲಾಶಯದ ಎತ್ತರವನ್ನು 142 ಅಡಿಯಿಂದ 139 ಅಡಿಗೆ ಇಳಿಸಲು ತಮಿಳುನಾಡು ಸರಕಾರ ತಿರೆಸ್ಕರಿಸಿರುವುದನ್ನು ಅರ್ಜಿಯಲ್ಲಿ ತಿಳಿಸಿದೆ. ಮುಲ್ಲಾಪೆರಿಯಾರ್‌ ಜಲಾಶಯ ಕೇರಳದಲ್ಲಿದ್ದರೂ, ತಮಿಳುನಾಡಿನ ನಿಯಂತ್ರಣದಲ್ಲಿದೆ. ಹಲವು ವರ್ಷಗಳಿಂದ ಕೇರಳ ಜಲಾಶಯವನ್ನು ತನ್ನ ಸುರ್ಪದಿಗೆ ಕೊಡಬೇಕೆಂದು ವಾದಿಸುತ್ತಿದೆ.

ಇಡುಕ್ಕಿ ಪ್ರದೇಶದಲ್ಲಿ ಭಾರಿ ಮಳೆಯಾಗಿ ಗರಿಷ್ಟ ಮಟ್ಟ ತಲುತಿದ ನಂತರ ಜಲಾಶಯದ ನಾಲ್ಕೂ ಗೇಟ್‌ ಮೂಲಕ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿದ್ದು ಪ್ರವಾಹದ ಭೀಕರತೆ ಉಲ್ಬಣವಾಗಲು ಕಾರಣ ಎಂದಿದೆ. 

Tags

Related Articles

Leave a Reply

Your email address will not be published. Required fields are marked *

Language
Close