ವಿಶ್ವವಾಣಿ

ಸರಣಿ ಅತ್ಯಾಚಾರ ಮಾಡಿದ ಬಿಷಪ್ ಫ್ರಾಂಕೋ: ಅಫಿಡವಿಟ್‌

ಕೊಚ್ಚಿ:  ಜಲಂಧರ್‌ನ ಬಿಷಪ್‌ ಫ್ರಾಂಕೋ ಮುಲಕ್ಕಳ್‌ ಚರ್ಚ್‌ವೊಂದರ ದಾದಿ ಮೇಲೆ ಸರಣಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಕೇರಳ ದಾದಿ ಅತ್ಯಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಅಫಿಡವಿಟ್‌ನಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಆಗಸ್ಟ್‌ 10ರಂದು ಕೇರಳ ಹೈಕೋರ್ಟ್‌‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, “ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷಿಗಳ ಪ್ರಕಾರ, ಬಿಷಪ್‌ ಫ್ರಾಂಕೋ ಸಾಕಷ್ಟು ಅನೇಕ ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ” ಎಂದು ತಿಳಿಸಲಾಗಿತ್ತು.

2014 ಹಾಗು 2016ರ ನಡುವಿನ ಅವಧಿಯಲ್ಲಿ ತನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರಗೈಯ್ಯಲಾಗಿದೆ ಎಂದು 54ರ ಬಿಷಪ್‌ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.