About Us Advertise with us Be a Reporter E-Paper

Breaking Newsದೇಶಪ್ರಚಲಿತ

ಜಡಿ ಮಳೆಗೆ ನಲುಗಿದ ಕೇರಳ: ಒಟ್ಟು 39 ಜನರ ಸಾವು

ನಿರಾಶ್ರಿತರ ಶಿಬಿರದಲ್ಲಿ 1.18 ಲಕ್ಷ ಜನ ದಾಖಲು

ತಿರುವನಂತಪುರ: ಕೇರಳದ ಬಹುತೇಕ ಭಾಗಗಳಲ್ಲಿ ಜಡಿ ಮಳೆಯಾಗುತ್ತಿದ್ದು ಸುಮಾರು 1.18 ಲಕ್ಷ ಜನ ರಾಜ್ಯಾದ್ಯಂತದ ನಿರಾಶ್ರಿತರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ರಾಜ್ಯದ ನಾನಾಕಡೆಗಳಲ್ಲಿ ಹವಮಾನದಲ್ಲಿನ ವ್ಯತ್ಯಯದಿಂದಾಗಿ ಭಾರೀ ಮಳೆಯಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂಗಾರು ಮಳೆ ಕೇರಳಕ್ಕೆ ಕಳೆದ ಮೇ 29ರಂದೇ ಅಪ್ಪಳಿಸಿತ್ತು. ಆದರೆ ಜುಲೈ 9ರಿಂದ ಆರಂಭವಾಗಿರುವ ಎರಡನೇ ಹಂತದ ಜಡಿಮಳೆಗೆ ಈವರೆಗೂ 39 ಜನರು ಮೃತಪಟ್ಟಿದ್ದಾರೆ.

ಪ್ರಸ್ತುತ 50,836 ಜನರು ಅಲಪ್ಪುಳದಲ್ಲಿನ 212 ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ನೆರೆಯ ಕೋಟ್ಟಯಂನ 164 ಶಿಬಿರಗಳಲ್ಲಿ 37,657 ಜನ ಆಸರೆ ಪಡೆದಿದ್ದಾರೆ. ಮುಂಗಾರು ಮಳೆಯ ಆರ್ಭಟಕ್ಕೆ ಈ ಎರಡು ಜಿಲ್ಲೆಗಳು ತತ್ತರಿಸಿದ್ದು, ಇಲ್ಲಿ ಅತ್ಯಧಿಕ ಹಾನಿಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close