Breaking Newsಪ್ರಚಲಿತಸಿನಿಮಾಸ್
ಟ್ರೋಲಿಗರ ಕೆಂಗಣ್ಣಿಗೆ ‘ಕೆಜಿಎಫ್’ ಸಾಂಗ್…

‘ಕೆಜಿಎಫ್’ ಚಿತ್ರದ ‘ಸಲಾಮ್ ರಾಕಿ ಭಾಯ್’ ಲಿರಿಕಲ್ ಹಾಡು ರಿಲೀಸ್ ಆದ ಕೆಲ ಗಂಟೆಗಳಲ್ಲಿಯೇ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದು 75% ಹಿಂದಿಯಲ್ಲಿರುವುದೇ ಇದಕ್ಕೆ ಕಾರಣ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ಶುರುವಾಗಿದ್ದು, ಯಶ್ಗೆ ಕೆಟ್ಟ ಪದ ಬಳಕೆ ಮಾಡಿ ಕಮೆಂಟ್ ಮಾಡಿದ್ದಾರೆ.
ಅಲ್ಲದೇ ಕನ್ನಡದಲ್ಲಿ ಹಿಂದಿ ಹಾಡು ತುರುಕಿದ್ದು, ತಮಿಳಿನಲ್ಲಿ ಇದೇ ಲಿರಿಕ್ಕು ಹಿಂದಿಯಲ್ಲಿರದೇ ತಮಿಳಿನಲ್ಲಿಯೇ ಇರುವುದು ಟ್ರೋಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಭಾಷೆಯ ಮೇಲಿರುವ ಭಯ ಭಕ್ತಿ ಕನ್ನಡದ ಮೇಲೆ ಯಾಕಿಲ್ಲ ಎಂದು ಖಾರವಾಗಿ ಬರೆದುಕೊಂಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಕಮೆಂಟ್ಗಳು ಬರುತ್ತಿದ್ದಂತೆ, ‘ಸಲಾಮ್ ರಾಕಿ ಭಾಯ್’ ಹಾಡಿನ ಸಾಹಿತ್ಯ ಬರೆದಿರುವ ವಿ.ನಾಗೇಂದ್ರ ಪ್ರಸಾದ್, ಡಾ. ರಾಜ್ ಕುಮಾರ್ ಅವರ ‘ಆಪರೇಶನ್ ಡೈಮಂಡ್ ರಾಕೆಟ್’ ಚಿತ್ರದ ‘ಇಫ್ ಯೂ ಕಮ್ ಟುಡೆ’ ಹಾಡನ್ನು ಹಾಕುವ ಮೂಲಕ ಟ್ರೋಲಿಗರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಏನೇ ಟ್ರೋಲ್ ಆದರೂ ಯಶ್ ಹವಾ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಯೂಟ್ಯೂಬ್ನಲ್ಲಿ ಸಖತ್ ಟ್ರೆೆಂಡಿಂಗ್ನಲ್ಲಿದ್ದು, 1 ಮಿಲಿಯನ್ ವೀಕ್ಷಣೆ ದಾಟಿ ಮುನ್ನುಗ್ಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಟ್ವಿಟರ್ ಹ್ಯಾಂಡಲ್ನಲ್ಲಿ ಇಲ್ಲಿಯವರೆಗೂ ‘ನಿಮ್ಮ ಯಶ್’ ಎಂದಿತ್ತು. ಆದರೆ ಈಗ ’ದಿ ನೇಮ್ ಈಸ್ ಯಶ್’ ಎಂದು ಬದಲಾಗಿದೆ. ಇದು ಸಹಜವಾಗಿ ಚರ್ಚೆಗೆ ಕಾರಣವಾಗಿದ್ದು, ನಿಮ್ಮ ಯಶ್ ಎಂದು ಕನ್ನಡದಲ್ಲಿ ಹೆಸರಿಟ್ಟುಕೊಂಡಿದ್ದ ಯಶ್, ಈಗ ಇಂಗ್ಲಿಷ್ನಲ್ಲಿ ಬರೆದುಕೊಂಡಿರುವುದು ಯಾಕೆ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಎದ್ದಿದೆ.