About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್

KGF ಎರಡನೇ ಟ್ರೈಲರ್‌ ಇಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ರಿಲೀಸ್

ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಅಭಿಯದ ಕೆಜಿಎಫ್‌ ಚಿತ್ರದ ಅಭಿಮಾನಿಗಳಿಗೆ ಇವತ್ತು ಹಬ್ಬವೋ ಹಬ್ಬ. ಇವತ್ತು ಬೆಳಿಗ್ಗೆಯಷ್ಟೇ​ ಕೆಜಿಎಫ್ ಎರಡನೇ ಹಿಂದಿ ಟ್ರೈಲರ್ ರಿಲೀಸ್​ ಆಗಿದೆ. ಹಿಂದಿಯಲ್ಲಿ ತೆರೆಕಂಡ ಈ 2ನೇ ಟ್ರೈಲರ್‌ ಇವತ್ತು ಸಂಜೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಆಗಲಿದೆ. ಈ ಕುರಿತು ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟರ್‌ನಲ್ಲಿ ಅನೌನ್ಸ್ ಮಾಡಿದ್ದಾರೆ.

ಸದ್ಯ ರಿಲೀಸ್ ಆಗಿರೋ 2ನೇ ಟ್ರೈಲರ್​ನಲ್ಲಿ ಯಶ್ ಎಂಟ್ರಿನೇ ಆ್ಯಕ್ಷನ್‌ನಿಂದ ಕೂಡಿದ್ದು ಜಬರ್ದಸ್ತ್‌ ಆಗಿದೆ, ಪ್ರತಿ ಎಂಟ್ರಿಗೆ ತಕ್ಕಂತ ಮಾಸ್ ಡೈಲಾಗ್ಸ್ ಸಖತ್‌ ಕಿಕ್ ಕೊಡ್ತಿವೆ. ಹೀಗಾಗೇ ಉಳಿದ ಭಾಷೆಗಳಲ್ಲಿ ಈ ಗ್ಯಾಂಗ್ ಲೇಕರ್ ಆನೆವಾಲೇ ಹೋಥೆ ಹೇ ಗ್ಯಾಂಗ್‌ಸ್ಟರ್, ಓ ಅಕೇಲೇ ಆಥಾ ಥಾ.! ಮಾನ್ಸ್‌ಟರ್‌ ..ಇಂಥಾ ಡೈಲಾಗ್‌ಗಳು ಹೇಗೆ ಕೇಳಿಬರಬಹುದು ಅಂತಾ ಆಯಾ ಭಾಷೆಯ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.ಕೆಜಿಎಫ್‌ ಚಿತ್ರ ಡಿಸೆಂಬರ್​​ 21ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಕೆಜಿಎಫ್​ ರಿಲೀಸ್​ ಆಗಲಿದ್ದು ಟ್ರೈಲರ್‌ಗಳು ನಿರೀಕ್ಷೆ ಹೆಚ್ಚಿಸುತ್ತಿವೆ.

Tags

Related Articles

Leave a Reply

Your email address will not be published. Required fields are marked *

Language
Close