About Us Advertise with us Be a Reporter E-Paper

Breaking Newsಪ್ರಚಲಿತಲೈಫ್ ಸ್ಟೈಲ್

ಕೀಕಿ ಪೀಡೆ ಹೋಯ್ತು…. ಈಗ ಬರ್ಡ್ ಬಾಕ್ಸ್ ಚಾಲೆಂಜ್ ಬಂತು….!

ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯುವಕರನ್ನು ಸೆಳೆದು ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದ ಕೀಕಿ ಚಾಲೆಂಜ್ ಬಹುತೇಕ ಕಣ್ಮರೆಯಾಗಿದ್ದು, ಈಗ ಬರ್ಡ್ ಬಾಕ್ಸ್ ಚಾಲೆಂಜ್ ಎಂಬ ಹೊಸ ಚಾಲೆಂಜ್ ಮಾರಿಯಾಗಿ ಕಾಡಲು ಶುರು ಮಾಡಿದೆ.

ಹೌದು, 2018ರ ನವೆಂಬರ್‌ನಲ್ಲಿ ನೆಟ್‌ಫ್ಲಿಕ್‌ಸ್ನಲ್ಲಿ ಬಿಡುಗಡೆಯಾದ ಚಿತ್ರ. ಇದರಲ್ಲಿ ಖ್ಯಾತ ನಟಿ ಸ್ಯಾಂಡ್ರಾ ಬುಲ್ಲಾಕ್ ಅವರು ಅಭಿನಯಿಸಿದ್ದು, ಇದರಲ್ಲಿ ಸ್ಯಾಂಡ್ರಾ ತನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ತನ್ನ ದಿನನಿತ್ಯದ ಜೀವನವನ್ನು ನಡೆಸುತ್ತಾಳೆ. ಜನರು ಇದನ್ನೇ ಸ್ಫೂರ್ತಿಯನ್ನಾಗಿ ತೆಗೆದುಕೊಂಡು ತಮ್ಮ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ನಿತ್ಯ ಮಾಡುವ ಕಾರ್ಯಗಳನ್ನು ಮಾಡುವ ಸವಾಲು ಮತ್ತೆ ಕೆಲವರಂತೂ ದಿನದ 24 ಗಂಟೆಗಳ ಕಾಲ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವ ಸವಾಲು ಪಡೆದು, ಅದನ್ನು ಮಾಡಲು ಹೋಗಿ ಜೀವಕ್ಕೆ ಆಪಾಯ ತಂದುಕೊಳ್ಳುತ್ತಿದ್ದಾರೆ.

ಈ ಬರ್ಡ್ ಬಾಕ್ಸ್ ಚಾಲೆಂಜ್ ಹುಚ್ಚಾಟ ವಿದೇಶಗಳಲ್ಲಿ ಹೆಚ್ಚಾಗಿದ್ದು, ಭಾರತಕ್ಕೆ ಯಾವಗ ಕಾಲಿಡುತ್ತದೋ ಎಂಬ ಆತಂಕ ಸೃಷ್ಟಿಸಿದೆ. ಈ ಸವಾಲಿನಲ್ಲಿ ವ್ಯಕ್ತಿ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೆಟ್ಟಿಲು ಏರುವುದು, ರಸ್ತೆಯಲ್ಲಿ ನಡೆಯುವುದು ಮಾತ್ರವಲ್ಲ, ಕಾರನ್ನೂ ಕೂಡ ಚಾಲಾಯಿಸುತ್ತಿದ್ದಾರೆ. ಇವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ.

17 ವರ್ಷದ ಯುವತಿ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಟ್ರಕ್ ಚಾಲನೆ ಮಾಡಿ ಒಂದು ಕಾರಿಗೆ ಡಿಕ್ಕಿ ಹೊಡೆದಿದ್ದಾಳೆ. ಹೀಗೆ ಇನ್ನು ಇಂತಹ ಅನೇಕ ಅವಾಂತರ ಪ್ರಕರಣಗಳು ದಾಖಲಾಗುತ್ತಿವೆ.

ಭಾರತದಲ್ಲಿ ಈ ಬರ್ಡ್ ಬಾಕ್ಸ್ ಚಾಲೆಂಜ್ ಹವಾ ಆರಂಭವಾಗುವ ಮುನ್ನವೇ ಪೊಲೀಸರು ಯುವಕರಿಗೆ ಸಂದೇಶ ತಲುಪಿಸಬೇಕಿದೆ. ಕೀಕಿ ಚಾಲೆಂಜ್ ಅನ್ನು ನಿಯಂತ್ರಿಸಲು ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದಂತೆ ಬರ್ಡ್ ಬಾಕ್ಸ್ ಚಾಲೆಂಜ್ ಮಾಡಲು ಉತ್ಸುಕರಾಗುವವರಿಗೆ ಎಚ್ಚರಿಕೆ ರವಾನಿಸುವ ಅಗತ್ಯವಿದೆ.

Tags

Related Articles

Leave a Reply

Your email address will not be published. Required fields are marked *

Language
Close