About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಮತ್ತೆ ಕಿಮ್ ‘ಕಿರಿಕ್’, ಟ್ರಂಪ್‌ಗೆ ಬೆದರಿಕೆ….!

ಸಿಯೋಲ್: ಅಣ್ವಸ್ತ್ರ ಸಜ್ಜಿತ ದೇಶದ ಮೇಲೆ ದಿಗ್ಬಂಧನ ಹೇರುವ ಅಮೆರಿಕದ ಧೋರಣೆ ಬದಲಾಗದಿದ್ದರೆ ನಮ್ಮ ಕಾರ್ಯತಂತ್ರವನ್ನು ಬದಲಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್,  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷದ ಅಂಗವಾಗಿ ದೇಶದ ಜನತೆಗೆ ಶುಭ ಸಂದೇಶ ನೀಡಿದ ಸಂದರ್ಭದಲ್ಲಿ ಕಿಮ್ ಅಮೆರಿಕ ವಿರುದ್ಧ ಕಿಡಿ ಕಾರಿದರು. ಇಡೀ ವಿಶ್ವದ ಮುಂದೆ ಅಮೆರಿಕ ನೀಡಿರುವ ತನ್ನ ವಾಗ್ವಾದವನ್ನು ಉಳಿಸಿಕೊಳ್ಳದಿದ್ದರೆ ಹಾಗೂ ನಮ್ಮ ಗಣರಾಜ್ಯದ ಮೇಲೆ ದಿಗ್ಬಂಧನ /ಒತ್ತಡ ಹೇರುವುದನ್ನು ಮುಂದುವರೆಸಿದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ.

ಅಲ್ಲದೆ ನಮ್ಮ ಸಾರ್ವಭೌತ್ವ ಮತ್ತು ಹಿತಾಸಕ್ತಿಗಳ ರಕ್ಷಣೆಗಾಗಿ ಹೊಸ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಳೆದ ವರ್ಷ ಜೂನ್‍ನಲ್ಲಿ ಅಮೆರಿಕ ಅಧ್ಯಕ್ಷರು ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿಯ ನಡುವೆ ಸಿಂಗಾಪುರದಲ್ಲಿ ನಡೆದ ಶೃಂಗಸಭೆ ಫಲಪ್ರದವಾಗಿತ್ತು.

ತನ್ನ ದೇಶದಲ್ಲಿರುವ ಎಲ್ಲ ಅಣ್ವಸ್ತ್ರ ನೆಲೆಗಳನ್ನು ನಾಶಗೊಳಿಸುವುದಾಗಿ ಕಿಮ್ ಭರವಸೆ ನೀಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಆದರೆ ಅಮೆರಿಕ ಕೆಲವು ಷರತ್ತುಗಳೊಂದಿಗೆ ದಿಗ್ಬಂಧನ ಕ್ರಮಕ್ಕೆ ಮುಂದಾಗಿರುವುದರಿಂದ ಉಭಯ ದೇಶಗಳ ನಡುವಣ ಸಂಬಂಧ ಅಳಸುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close