About Us Advertise with us Be a Reporter E-Paper

ಅಂಕಣಗಳು

ದಯೆಯ ಸಣ್ಣ ಕೆಲಸಗಳು ಬಹಳ ಪರಿಣಾಮಕಾರಿ

- ಅಚ್ಯುತ ಸಮಂತಾ

ಮಾನವತ್ವ ಎನ್ನುವುದು ಸಣ್ಣ ಪದ ಅದರ ಅರ್ಥ ವಿವರಣೆ ಎಂದಿಗೂ ಅದರ ಹಿಂದಿನ ಪ್ರಾಮುಖ್ಯ ಮತ್ತು ಭಾವನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ನಾಗರಿಕತೆಯ ಪ್ರಗತಿ ಹಾಗೂ ಮಾನವ ಕುಲದ ಹಿಂದಿನ ಪ್ರಮುಖ ಮೌಲ್ಯವಾಗಿದೆ. ಇದು ಎಲ್ಲರಿಗೂ ಸಹಜ ಹಾಗೂ ಸ್ವಾಭಾವಿಕವಾಗಿದೆ. ಸರಳ ಮತ್ತು ಸಾಂಪ್ರದಾಯಿಕ ಸಮಾಜದಲ್ಲಿ ಮಾನವ ಜೀವನ ಬಹಳ ಕಡಿಮೆ ಸಂಕೀರ್ಣತೆ ಹೊಂದಿದೆ ಮತ್ತು ಮಾನವ ಬಂಧುತ್ವಗಳು ಸದೃಢವಾಗಿರುತ್ತವೆ. ಮುಗ್ಧ ಜೀವನದಿಂದ ಆಧುನಿಕ ಮತ್ತು ಜೀವನದೆಡೆಗೆ ಮತ್ತು ಅತ್ಯಾಧುನಿಕ ಯುಗಕ್ಕೆ ಪರಿವರ್ತನೆ ಮತ್ತು ಜೀವನಶೈಲಿಗಳಿಂದ ಮಾನವತ್ವಕ್ಕೆ ಗೌರವ ಕುಸಿಯುತ್ತಿದೆ. ಮನುಷ್ಯ ಎತ್ತರಕ್ಕೆ ಏರಿದಂತೆಲ್ಲಾ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ನಮ್ಮ ಕಾಲಘಟ್ಟದ ಮಾನವೀಯತೆ ಆದ್ಯತೆ ನೀಡಬೇಕಾದ ಮೌಲ್ಯವಾಗಿದೆ. ಸಣ್ಣ ಪ್ರಮಾಣದ ದಯೆಯ ಕ್ರಮ ಅಪಾರ ಬದಲಾವಣೆಯ ಪರಿಣಾಮಗಳನ್ನು ತರುತ್ತದೆ. ಇದು ಕಣ್ಣೀರು ಅಳಿಸಲು, ಆನಂದ ಮತ್ತು ಸಂತೋಷವನ್ನು ಹರಡಲು ನೆರವಾಗುತ್ತದೆ.

ಇದು ಕೊಡುವವರಿಗೆ ಹಾಗೂ ಪಡೆಯುವವರಿಗೆ ಅಪಾರ ಸಂತೋಷ ನೀಡುತ್ತದೆ. ಕರುಣೆ ಮತ್ತು ದಯೆಯ ಸಣ್ಣ ಕೆಲಸಗಳ ಮೂಲಕ ಸಂತೃಪ್ತಿ ಪಡೆಯಬಹುದು, ಅದು ಮಾನವೀಯತೆಯೇ ಅಲ್ಲದೆ ಬೇರೇನೂ ಅಲ್ಲ. ದುಃಖ ಮತ್ತು ಸಂಕಟವನ್ನು ಮಾನವೀಯವಾಗಿ ಇರುವುದರ ಮೂಲಕ ನಿವಾರಿಸಬಹುದು. ನಾನು ಮಾನವತೆ ಸೇವೆಯ ಕೇಂದ್ರ ಮೌಲ್ಯಗಳನ್ನು ಕಲಿಯುತ್ತಲೇ ಬೆಳೆದಿದ್ದೇನೆ. ಇವು ನನ್ನ ಜೀವನದ ತತ್ವಗಳಾಗಿವೆ. ನಾನು ದುರ್ಬಲ ಹಾಗೂ ಅಗತ್ಯವಿರುವವರಿಗೆ ಬೆಂಬಲ ವಿಸ್ತರಿಸುತ್ತಿದ್ದೇನೆ. ಕಳೆದ 30 ವರ್ಷಗಳಲ್ಲಿ ನಾನು ಕೈಗೊಂಡ ಸೇವಾ ಕಾರ್ಯಗಳ ಕೆಲ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಕಳೆದ ತಿಂಗಳು ನಾನು ಒಡಿಯಾ ಪತ್ರಿಕೆಯಲ್ಲಿ ಅನಾಥ ಹೆಣ್ಣುಮಕ್ಕಳು ಮತ್ತು ಅವರ ಸಂಕಷ್ಟದ ಕುರಿತು ಸುದ್ದಿ ಓದಿದೆ. ಈ ಅಸಹಾಯಕ ಅವರ ತಂದೆಯನ್ನು ಇತ್ತೀಚೆಗೆ ಕಳೆದುಕೊಂಡಿದ್ದರು. ತಾಯಿಯನ್ನು ಐದು ವರ್ಷಗಳ ಕಳೆದುಕೊಂಡಿದ್ದರು. ಅವರ ಕುಟುಂಬದ ಏಕೈಕ ದುಡಿಮೆಯ ಕೈಯಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಅವರಿಗೆ ತಿನ್ನಲೂ ಏನೂ ಇರಲಿಲ್ಲ. ಅವರಲ್ಲಿ ಹಿರಿಯ ಹುಡುಗಿ ಪದವಿ ಓದುತ್ತಿದ್ದಳು, ಇತರೆ ಮೂವರು ಹುಡುಗಿಯರು ಶಾಲೆಯಲ್ಲಿ ಕಲಿಯುತ್ತಿದ್ದರು. ಅವರಿಗೆ ನಾವು ಕೂಡಲೇ ಸ್ವಲ್ಪ ನಗದು ಸಹಾಯ ಕಳುಹಿಸಿ ಪ್ರತಿ ತಿಂಗಳೂ ಹಣಸಹಾಯ ಮಾಡುವುದಾಗಿ ಭರವಸೆ ನೀಡಿದೆವು. ಪದವಿ ಮುಗಿಸಿದ ನಂತರ ಹಿರಿಯ ಹುಡುಗಿಗೆ ಪುರಿಯ ಕೆಐಎಸ್‌ಎಸ್ ಉದ್ಯೋಗವನ್ನೂ ನೀಡಿದೆವು. ಉಳಿದ ಮೂವರಲ್ಲಿ ಇಬ್ಬರು ಮುಂದಿನ ವರ್ಷದಿಂದ ಕೆಐಎಸ್‌ಎಸ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದೆವು. ಕಿರಿಯ ಹುಡುಗಿಯನ್ನು ಕೇಂದ್ರೀಯ ವಿದ್ಯಾಲಯಕ್ಕೆ ಸೇರಿಸಿದೆವು. ಇದು ಕೆಲಸದಲ್ಲಿ ಮಾನವೀಯತೆಯ ಒಂದು ಹೆಜ್ಜೆಯಾಗಿದೆ.

ಕಟಕ್-ಪ್ಯಾರಾದೀಪ್ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಸ್ಥಳದಲ್ಲಿಯೇ ಮಡಿದ ಕುಟುಂಬಕ್ಕೆ ನೆರವನ್ನು ವಿಸ್ತರಿಸಿದೆ. ನಾವು ತಕ್ಷಣದ ನೆರವಿಗೆ ನಗದು ನೀಡಿದೆವು ಮತ್ತು ಮಡಿದ ಕುಟುಂಬದ ಮೂವರು ಸದಸ್ಯರಿಗೆ ಉದ್ಯೋಗಾವಕಾಶ ನೀಡುವ ಮೂಲಕ ಅವರಿಗೆ ಆಗಿರುವ ಸರಿಪಡಿಸಲಾಗದ ನಷ್ಟದ ಸಂದರ್ಭದಲ್ಲಿ ದೈನಂದಿನ ಜೀವನಕ್ಕೆ ಸಂಕಷ್ಟ ಅನುಭವಿಸದಂತೆ ಮಾಡಿದೆವು. ಶಕ್ತಿಮೀರಿ ನಾನು ಕುಟುಂಬಕ್ಕೆ ಮತ್ತು ಅವರ ಮುಂದಿನ ತಲೆಮಾರಿಗೆ ಸಂತೋಷಕರ ಜೀವನ ನಡೆಸಲು ನೆರವಾಗಿದ್ದೇನೆ.

ಎರಡೂ ಪ್ರಕರಣಗಳಲ್ಲಿ, ನಾನು ತಕ್ಷಣದ ನೆರವನ್ನು ನೀಡಿದ್ದೇನೆ ಹಾಗೂ ಶಾಶ್ವತ ಪರಿಹಾರವನ್ನೂ ಒದಗಿಸಿದ್ದೇನೆ. ಸಮಾಜದಲ್ಲಿ ನೋವು, ಸಂಕಟ ಮತ್ತು ದುಃಖಗಳಿಗೆ ಕೊನೆಯೇ ಇಲ್ಲ. ಆದರೆ ನಾವು ನಮ್ಮ ಕೈಲಾದಷ್ಟು ನೆರವು ನೀಡಬಹುದು. ನಾನು ನನ್ನ ಕುಟುಂಬ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವಾಗ ನೆರವಾದ ಜನರನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ಅದು ಈಗ ಪೂರ್ಣ ವೃತ್ತವಾಗಿರುವುದನ್ನು ಕಂಡಿದ್ದೇನೆ. ನನ್ನ ತಂದೆ ಏಳು ಮಕ್ಕಳನ್ನು ಬಿಟ್ಟು ಕಿಂಚಿತ್ತು ಭೂಮಿ, ಮನೆ ಅಥವಾ ಹಣ ಇಲ್ಲದಂತೆ ನನ್ನ ತಾಯಿಯನ್ನು ವಿಧವೆಯಾಗಿಸಿ ಅಕಾಲಿಕವಾಗಿ ಮರಣಿಸಿದ ಬಾಲ್ಯದ ಅತ್ಯಂತ ನೋವನ್ನು ಈಗಲೂ ನೆನೆಸಿಕೊಳ್ಳುತ್ತೇನೆ.

ಆಗ ನನಗೆ ನಾಲ್ಕು ವರ್ಷ, ನನ್ನ ಕಿರಿಯ ಸೋದರಿಗೆ ಒಂದು ತಿಂಗಳು, ಆಗ ನನ್ನ ಹಿರಿಯ ಸೋದರನಿಗೆ ನನ್ನ ತಂದೆ ರೈಲು ಅಪಘಾತದಲ್ಲಿ ಮಡಿದ ಸುದ್ದಿ ಬೆಳಗಿನ ಜಾವ 5 ಗಂಟೆಗೆ ತಲುಪಿತು. ನನ್ನ ಸೋದರ ಆಗ 16 ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಓಡಿದ. ನನ್ನ ತಂದೆಯ ದೇಹವನ್ನು ಬಿಳಿಯ ಹಾಳೆಯಿಂದ ಮುಚ್ಚಿದ್ದನ್ನು ಕಂಡಾಗ ಇನ್ನೇನೂ ಉಳಿದಿಲ್ಲವೆಂದು ಅವನು ಅತ್ಯಂತ ದುಃಖ ಮತ್ತು ಪರಿತಾಪಕ್ಕೆ ಸಿಲುಕಿದ. ಆತ ಅಲ್ಲಿಂದ ಮನೆಗೆ ಹಿಂದಿರುಗಿ ಅಂತಿಮ ಸಂಸ್ಕಾರಕ್ಕೆ ದೇಹವನ್ನು ಪಡೆಯಲು ನನ್ನ ತಾಯಿಯ ಅನುಮತಿ ಕೇಳಲು ಬಂದ. ನನ್ನ ತಾಯಿ ಕಷ್ಟದಲ್ಲಿ ಮೌನವಾಗಿ ತಲೆಯಾಡಿಸಿದರು.

ನನ್ನ ತಾಯಿ ಅಂದು 40 ವರ್ಷದವರಾಗಿದ್ದು ಈ ದುರಂತವನ್ನು ಎದುರಿಸುವ ಯಾವುದೇ ಸ್ಥಿತಿಯಲ್ಲಿರಲಿಲ್ಲ. ಆಕೆ ಕುಸಿದುಹೋಗಿದ್ದರು. ದಿಢೀರನೆ ಆಕೆಯ ಮೇಲೆ ಹೊರೆ ಬಿದ್ದಿತು. ಅತ್ಯಂತ ಕಡುಬಡತನ ಹಸಿವು ಮತ್ತು ಅವಮಾನ ಹಾಗೂ ಇತರರ ಯಾವುದೇ ಬೆಂಬಲವಿಲ್ಲದೇ ಇರುವಾಗ ನಡುವೆಯೂ ಮಕ್ಕಳನ್ನು ದೊಡ್ಡವರಾಗಿಸುವ ಬೃಹತ್ ಗುರಿ ಆಕೆಯ ಮುಂದೆ ಇತ್ತು. ವಿಧಿ ನೀಡಿದ ಏಟಿನಿಂದ ಆಕೆಯ ಬದುಕು ಸರ್ವನಾಶವಾಗಿತ್ತು. ಕೆಲಬಂಧುಗಳು ಆಕೆಗೆ ಸಮಾಧಾನ ಹೇಳಿದರೂ ಅಂತಹ ನಷ್ಟದ ಕಾಲದಲ್ಲಿ ಯಾವುದೂ ಆಕೆಯನ್ನು ಸಮಾಧಾನಗೊಳಿಸಲು ಸಾಧ್ಯವಿರಲಿಲ್ಲ.

ನನ್ನ ತಂದೆಯ ಸಾವಿನ ಸುದ್ದಿಯನ್ನು ಕೇಳಿದ ನಂತರ ಕೆಲ ಕಾಬೂಲಿವಾಲಾಗಳು(ಸಾಂಪ್ರದಾಯಿಕ ವ್ಯಾಪಾರಿಗಳು) ನಮ್ಮ ತಂದೆ ತೆಗೆದುಕೊಂಡ ಸಾಲ ಹಿಂಪಡೆಯಲು ಮನೆಗೆ ಬಂದರು. ನನ್ನ ತಂದೆ ಪಡೆದ ಅಂತಹ ಸಾಲಗಳ ಬಗ್ಗೆ ನನ್ನ ತಾಯಿಗೆ ತಿಳಿದೇ ಇರಲಿಲ್ಲ. ಅವರು ಸಾಲ ನೀಡುವಾಗ ಬಹಳ ಸ್ನೇಹಮಯವಾಗಿರುತ್ತಿದ್ದರು. ಆದರೆ ಸಾಲ ವಾಪಸು ನೀಡದಿದ್ದರೆ ನಿರ್ದಯರಾಗಿರುತ್ತಿದ್ದರು. ಕಾಬೂಲಿವಾಲಾಗಳು ಕುಟುಂಬದ ಏಕೈಕ ಆಧಾರಸ್ಥಂಭವನ್ನು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ನಮ್ಮ ಪರಿಸ್ಥಿತಿಯನ್ನು ನೋಡಿ ನಮ್ಮಿಂದ ಏನೂ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲವೆಂದು ಹೊರಟುಹೋದರು. ನನ್ನ ಜೀವನದ ಪ್ರಾರಂಭಿಕ ಹಂತದಲ್ಲಿ ನಾನು ಮಾನವೀಯತೆಯ ಉದಾಹರಣೆ ಇದು.

ನನ್ನ ತಂದೆಯ ಕೆಲ ಸಹೋದ್ಯೋಗಿಗಳು ನಮ್ಮನ್ನು ಸಮಾಧಾನಪಡಿಸಲು ಬಂದರು. ಅವರಿಗೆ ಗೊತ್ತಿತ್ತು, ನನ್ನ ತಂದೆ ಒಳ್ಳೆಯ ವ್ಯಕ್ತಿ ಆದರೆ ಬಹಳ ಬಡವ ಎಂದು ಬಲ್ಲವರಾಗಿದ್ದರು. ನನ್ನ ತಂದೆಯ ಮರಣಾನಂತರ ಕುಟುಂಬಕ್ಕೆ ತಿನ್ನಲೂ ಗತಿಯಿಲ್ಲ ಎಂದು ತಿಳಿದಿದ್ದರು. ನನ್ನ ತಂದೆಯ ನಾಲ್ವರು ಸಹೋದ್ಯೋಗಿಗಳು ಮನೆಗೆ ಅಗತ್ಯವಿದ್ದ ದಿನಸಿ ಮತ್ತು ತರಕಾರಿಗಳನ್ನು ತಂದುಕೊಡುವ ಮೂಲಕ ಕುಟುಂಬ ಹಸಿವಿನಿಂದ ಸಾಯದಂತೆ ಬೆಂಬಲಿಸಿದರು. ಇಂದು ನಾವು ಉಳಿದಿದ್ದೇವೆ ಮತ್ತು ಎತ್ತರಕ್ಕೇರಿದ್ದೇವೆ ಕಾರಣ ನಮಗೆ ಅವರು ತೋರಿದ ಮಾನವೀಯತೆ. ನನ್ನ ತಂದೆಯ ಅಪಘಾತದ ನಂತರ ಠೇವಣಿಗಳು ಮತ್ತು ವಿಮೆ ಪಡೆಯಬೇಕೆಂದರೆ ಕಂಪನಿಯ ಸಿಬ್ಬಂದಿಯ ವಸತಿಗೃಹ ಖಾಲಿ ಮಾಡಲು ನನ್ನ ತಾಯಿಗೆ ಸೂಚಿಸಿದರು. ನಾವು ಬೀದಿಗೆ ಬೀಳುತ್ತೇವೆ ಎಂದುಕೊಂಡೆವು.

ಆದರೆ ಒಂದೇ ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದ ನಮ್ಮ ದೂರದ ಸಂಬಂಧಿಯೊಬ್ಬರು ಅವರ ಮನೆಯ ವರಾಂಡಾ ಮತ್ತು ಅಡುಗೆಮನೆಯನ್ನು ನಮಗಾಗಿ ಬಿಟ್ಟುಕೊಟ್ಟರು. ನಾವು ಅಲ್ಲಿಗೆ ಹೋದೆವು ಮತ್ತು ಆರು ತಿಂಗಳು ಅಲ್ಲಿಯೇ ಉಳಿದಿದ್ದೆವು. ನಮ್ಮ ಅರ್ಥ ಕಳೆದುಕೊಂಡಿರುವಾಗ ನಮಗೆ ಸೂರು ನೀಡಲಾಗಿತ್ತು. ಈ ಬಗೆಯ ಮಾನವೀಯತೆಯೇ ನಮಗೆ ಸಂಕಷ್ಟ ಮತ್ತು ಭ್ರಮನಿರಸನಗೊಂಡ ಸಂದರ್ಭದಲ್ಲಿ ನೆರವಾಗಿತ್ತು. ನಾನು ಈ ಬಗೆಯ ಮಾನವೀಯತೆಯನ್ನು 1970ರಿಂದಲೂ ಕಾಣುತ್ತಿದ್ದೇನೆ ಮತ್ತು ಅನುಭವಿಸುತ್ತಿದ್ದೇನೆ. ಮಾನವೀಯತೆ ಇಲ್ಲದೆ ಎಂಟು ಜನರ ಈ ಕುಟುಂಬ ಯಾರಿಗೂ ಗೊತ್ತಿಲ್ಲದಂತೆ ನಾಶವಾಗಿಬಿಡುತ್ತಿತ್ತು. ಹಿಂದೆ ನಮಗೆ ತೋರಿಸಲಾದ ಸಹಾನುಭೂತಿಯಿಂದ ನಾವು ಇಲ್ಲಿದ್ದೇವೆ ಮತ್ತು ನಾವು ಸದಾ ಭೂತದಲ್ಲಿ ಬೇರೂರಿದ್ದು ಅದೇ ಕರುಣೆ, ಪ್ರೀತಿ ಮತ್ತು ಸಹಾನುಭೂತಿಯನ್ನು ವಿಸ್ತರಿಸುತ್ತಿದ್ದೇವೆ.

ನನ್ನ ಮಾನವೀಯತೆ ಪ್ರಮುಖ ಪಾತ್ರ ವಹಿಸದೇ ಇದ್ದಲ್ಲಿ ಸಮಾಜ, ರಾಜ್ಯ ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಶ್ರೇಷ್ಠ ವ್ಯಕ್ತಿಗಳು ಮಹತ್ತರ ಕಾರ್ಯಗಳನ್ನು ಮಾಡಲು ಅವರ ಜೀವಿತಕಾಲದಲ್ಲಿ ಅವರು ಮಾನವೀಯತೆಯ ಸ್ಪರ್ಶ ಅನುಭವಿಸಿದ್ದರಿಂದ ಸಾಧ್ಯವಾಯಿತು. ಅವರು ಶ್ರೇಷ್ಠರಾಗಿಯೇ ಉಳಿಯಲು ಅವರ ಕಾರ್ಯಗಳು ಮತ್ತು ಮಾತುಗಳಲ್ಲಿ ಅದು ಪ್ರತಿಫಲಿಸುತ್ತಿರುವುದು. ನಾನು ಅದರ ಶಕ್ತಿಯನ್ನು ನಾಲ್ಕನೇ ವಯಸ್ಸಿನಿಂದ ಅನುಭವಿಸಿದ್ದೇನೆ ಮತ್ತು ಅದರೊಂದಿಗೆ ಜೀವಿಸಿದ್ದೇನೆ. ಅದಕ್ಕೆ ಹೆಚ್ಚೇನೂ ಖರ್ಚಾಗುವುದಿಲ್ಲ, ಆದರೆ ಅದರ ಫಲಿತಾಂಶ ಆತ್ಮಕ್ಕೆ ಸಮಾಜಕ್ಕೆ ಹಲವು ಪಟ್ಟು ಇರುತ್ತದೆ. ಡೆಸ್ಮಂಡ್ ಟುಟು ಹೇಳಿದ ಮಾತು: ‘ನೀವು ಎಲ್ಲಿರುವಿರೋ ಅಲ್ಲಿ ಸಾಧ್ಯವಿರುವಷ್ಟು ಒಳ್ಳೆಯದನ್ನು ಮಾಡಿರಿ; ಆ ಪುಟ್ಟ ಒಳ್ಳೆಯ ಕೆಲಸಗಳು ಒಟ್ಟಾಗಿ ಸೇರಿ ವಿಶ್ವಾದ್ಯಂತ ವಿಸ್ತರಿಸುತ್ತವೆ’. ಇದನ್ನು ನಿಮ್ಮ ಜೀವನದ ನಿಯಮವನ್ನಾಗಿಸಿ ಮತ್ತು ವಿಶ್ವ ಜೀವಿಸಲು ಉತ್ತಮ ತಾಣವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close