About Us Advertise with us Be a Reporter E-Paper

Uncategorizedಸಿನಿಮಾಸ್

‘ಕೆಜಿಎಫ್’ ಮೂಲಕ ಹೊಂಬಾಳೆ ದಾಖಲೆ!

ಇಂದು ಟ್ರೇಲರ್.. ಡಿ. 21ಕ್ಕೆ ರಿಲೀಸ್..

‘ಸಂತು ಸ್ಟ್ರೇಟ್ ಫಾರ್‌ವರ್ಡ್’ ಚಿತ್ರದ ಬಳಿಕ ಸ್ಟಾರ್ ಯಶ್ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಯಶ್ ಮುಂದಿನ ಚಿತ್ರ ಕೆಜಿಎಫ್ ಎಂದು ಘೋಷಣೆಯಾದ ಮೇಲಂತು ಅಭಿಮಾನಿಗಳಲ್ಲಿ ಕಾತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಹೊಂಬಾಳೆ ಪ್ರೊಡಕ್ಷನ್ ಸಂಸ್ಥೆಯಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಚಿತ್ರ ಬಾಲಿವುಡ್ ಚಿತ್ರಗಳನ್ನೇ ಹಿಂದಿಕ್ಕಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿರುವುದು ವಿಶೇಷ. ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿ, ಪೋಸ್‌ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದರೂ, ಒಂದಲ್ಲ ಒಂದು ಕಾರಣಕ್ಕೆ ದಿನಾಂಕವನ್ನು ಮುಂದೂಡುತ್ತಲೇ ಇತ್ತು. ಕಡೆಗೆ ಸುದ್ದಿಗೋಷ್ಠಿಯಲ್ಲಿ ರಾಕಿಂಗ್ ಸ್ಟಾರ್ ಮಾತನಾಡಿ, ಡಿಸೆಂಬರ್ 21ಕ್ಕೆ ‘ಕೆಜಿಎಫ್’ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿ ಅಭಿಮಾನಿಗಳ ಬೇಸರಕ್ಕೆ ಪುಲ್‌ಸ್ಟಾಪ್ ಇಟ್ಟಿದ್ದರು.

ಟ್ರೇಲರ್ ರಿಲೀಸ್‌ಗೆ ಭಾರತೀಯ ಮಾಧ್ಯಮಗಳು ಸಾಕ್ಷಿ!
ಸದ್ಯದ ಹಾಟ್ ನ್ಯೂಸ್ ಏನಪ್ಪ ಅಂದ್ರೆ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್‌ಗೂ ಮುಹೂರ್ತ ಫಿಕ್‌ಸ್ ಆಗಿದ್ದು, ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಬಗ್ಗೆ ರಾಷ್ಟ್ರಾದ್ಯಂತ ಕುತೂಹಲ ಮನೆ ಮಾಡಿದೆ.

ಕಾಮನ್ನಾಗಿ ನಿರೀಕ್ಷಿತ ಅನ್ಯ ಭಾಷೆಗಳ ಚಿತ್ರದ ಪ್ರಚಾರಕ್ಕೆ ಕನ್ನಡ ಮಾಧ್ಯಮಗಳನ್ನು ಆಹ್ವಾನಿಸೋದು ರೂಢಿ. ಆದರೆ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರವು ಭಾರತದ ವಿವಿಧ ಮಾಧ್ಯಮ ಪ್ರತಿನಿಧಿಗಳನ್ನು ಬೆಂಗಳೂರಿಗೆ ಆಹ್ವಾನಿಸಲಿದೆ. ಹೌದು ಕೆಜಿಎಫ್ ಚಿತ್ರದ ಸಮಾರಂಭರಕ್ಕೆ ಮುಂಬೈ, ಕೇರಳ, ಆಂದ್ರ ಮತ್ತು ತಮಿಳುನಾಡು ಸೇರಿದಂತೆ ಭಾರತದ ಎಲ್ಲ ರಾಜ್ಯಗಳ ಮಾಧ್ಯಮದವರನ್ನು ಆಹ್ವಾನಿಸಿರುವುದು ಹೊಂಬಾಳೆ ಸಂಸ್ಥೆಯ ಹೆಗ್ಗಳಿಕೆ. ಈ ಮೂಲಕ ಇಡೀ ಭಾರತೀಯ ಕನ್ನಡದತ್ತ ಬೆರಗುಗಣ್ಣಿನಿಂದ ನೋಡುವಂತ ಕೆಲಸ ಹೊಂಬಾಳೆ ಪ್ರೊಡಕ್ಷನ್ ಸಂಸ್ಥೆಯ ವತಿಯಿಂದ ಆಗಿರುವುದು ನಿಜಕ್ಕೂ ಕನ್ನಡಿಗರು ಹೆಮ್ಮೆಪಡುವಂತದ್ದು.

ಕನ್ನಡದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನಿರ್ಮಾಣ, ವಿತರಣೆ ಮಾಡುತ್ತಿರುವುದು ಹೊಂಬಾಳೆ ಸಂಸ್ಥೆಯ ವಿಶೇಷತೆ. ಜತೆಯಲ್ಲಿ ಪ್ರತಿಭಾವಂತ ಯುವ ನಿರ್ದೇಶಕರು, ಹೊಸ ಪ್ರತಿಭೆಗಳಿಗೂ ಅವಕಾಶ ನೀಡುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಸ್ಯಾಂಡಲ್‌ವುಡ್‌ನ ಘನತೆಯನ್ನು ಚಿರಸ್ಥಾಯಿಯಾಗಿ ಉಳಿಸಬೇಕೆನ್ನುವ ಮಹದಾಸೆಯನ್ನು ಹೊಂಬಾಳೆ ಹೊಂದಿದೆ. ಅದು ಕೆಜಿಎಫ್ ಸಿನಿಮಾದ ಮೂಲಕ ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಅವಿಸ್ಮರಣೀಯ.

‘ಉಗ್ರಂ’ ಖ್ಯಾತಿಯ ನೀಲ್ ‘ಕೆಜಿಎಫ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣದ ಜವಾಬ್ದಾರಿ ವಹಿಸಿದ್ದು, ಶ್ರೀಕಾಂತ್ ಸಂಕಲನ, ಶಿವ ಕುಮಾರ್ ಕಲಾ ನಿರ್ದೇಶನ, ರಾಜನ್ ಧ್ವನಿ ಗ್ರಹಣ, ಆನಂದ್ ಸೌಂಡ್ ಡಿಸೈನ್ ಮಾಡಿದ್ದಾರೆ. ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ಮಾಳವಿಕಾ, ನಾಗಾಭರಣ, ಬಿ. ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ದಿನೇಶ್ ಮಂಗಳೂರು, ಸೇರಿದಂತೆ ಪ್ರಧಾನ ತಾರಾಗಣವೇ ಇದೆ.

Tags

Related Articles

Leave a Reply

Your email address will not be published. Required fields are marked *

Language
Close