ವಿಶ್ವವಾಣಿ

ನೀ ಕೊಟ್ಟಿದ್ದನ್ನೇ ನೀ ಪಡೆಯೋದು ಎಂಬ ಸತ್ಯದ ಅರಿವಾಯಿತು

2018ರ ಜುಲೈ 30, 31 ನನ್ನ ಬದುಕಿನ ಮಹತ್ವದ ದಿನಗಳು. ತಾಲೂಕಾ ಸಾಹಿತ್ಯ ಪರಿಷತ್ತು ನನ್ನನ್ನು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಆರಿಸಿತ್ತು. ಕಳೆದ ಮೂರು ವರ್ಷಗಳಿಂದ ನಾನು ಅವರ ಕೋರಿಕೆಯನ್ನು ನಯವಾಗಿ ತಿರಸ್ಕರಿಸುತ್ತಲೇ ಬಂದಿದ್ದು ಸೀನಿಯಾರಿಟಿ ಕೋಟಾದಲ್ಲಿ ಈ ಸಲ ಈ ಪದವಿ ಅನಿವಾರ್ಯವಾಗಿ ಒಪ್ಪಲೇಬೇಕಾಯಿತು. ಇಪ್ಪತ್ತೆರಡು ಜನರ ಕಾರ್ಯಕಾರಿ ಸಭೆಯಲ್ಲಿ ಇಪ್ಪತ್ತು ಜನ ನನ್ನ ಪರವಾಗಿಯೇ ವೋಟು ಮಾಡಿ ನನ್ನನ್ನು ಕಟ್ಟಿಹಾಕಿದರು.  ಮುಂದೆ  ತಿಳಿಯದೇ ಎಲ್ಲ ಸಿದ್ಧತೆಗಳನ್ನು ಅವರು ರೂಪಿಸಿ, ಅಭಿಮಾನದ ಹಗ್ಗಲ್ಲಿಯೂ ನನ್ನ ಕಟ್ಟಿದರು. ನಮ್ಮ ಖುಷಿಗೆ ಸರ್ ಎನ್ನುತ್ತಾ ಬಾಯಿಯನ್ನೂ ಮುಚ್ಚಿಸಿದರು, ಎಲ್ಲದಕ್ಕೂ ನನ್ನನ್ನು ಒಪ್ಪಿಸಿದರು.

ನನ್ನ ಸಾಹಿತ್ಯ ಪರಿಚಾರಿಕೆಯ ಈ ವೃತ್ತಿ ಬದುಕಿನಲ್ಲಿ ಸಮ್ಮೇಳನಾಧ್ಯಕ್ಷಗಿರಿ ಬಾಕಿಯಿತ್ತು. ಸಹನೆಯಿಂದ ಕಾದಿದ್ದರ ಫಲವಾಗಿಯೋ ಏನೋ ನಿರಾಯಾಸವಾಗಿ, ಅವಿರೋಧವಾಗಿ ನಾನು ಸರ್ವಾಧ್ಯಕ್ಷನಾಗಿ ಎಲ್ಲವನ್ನೂ ಹೇಳಿದಂತೆ ಮಾಡಲೇ ಬೇಕಾಯಿತು, ಸಹಿಸಲೇ ಬೇಕಾಯಿತು. ಎರಡು ದಿನ ತಲಾ ಹದಿನೆಂಟು ತಾಸಿನಂತೆ ವೇದಿಕೆ ಮೇಲೆ ಎಲ್ಲಕ್ಕೂ ಸಾಕ್ಷಿಯಾಗಿ  ಎಲ್ಲ ಗಮನಿಸಿದೆ, ಆಸ್ವಾದಿಸಿದೆ, ಅನುಭವಿಸಿದೆ.

ಜು.30ರಂದು ಮೆರವಣಿಗೆ ಹುಟ್ಟಿದ, ಬಾಲ್ಯದಿಂದಲೂ ಆಡಿ ಬೆಳೆದ ನನ್ನೂರಿನ ಬೀದಿ ಬೀದಿಗಳೂ ನನಗೆ ಗೊತ್ತು, ಹಾಗೆಯೇ ಜಗಳೂ ಗೊತ್ತು. ಅವರೆಲ್ಲ ಕೆಳಗೆ ನಿಂತು ಮೆರಣಿಗೆಯಲ್ಲಿ ತಾಯಿ, ಹೆಂಡತಿಯೊಂದಿಗೆ ಅವರೇ ಕುಳ್ಳಿರಿಸಿದ್ದ ನನ್ನ ಮೇಲೆ ಹೂಗಳನ್ನು ತೂರುತ್ತಾ ನನ್ನನ್ನು ಅಭಿನಂದಿಸಿ ಘೋಷಣೆ ಕೂಗುತ್ತಿದ್ದಾಗ ಹೆಮ್ಮೆ, ಪುಳಕ, ಸಂಕೋಚ, ಮುಜುಗರಗಳನ್ನು ಅನುಭವಿಸಿದೆ ‘ಹಿತ್ತಲಗಿಡ ಮದ್ದಲ್ಲ’ ಎಂಬ ಗಾದೆ ಮಾತನ್ನೇ ನನ್ನೂರಿನ, ನನ್ನ ಗಂಗಾವತಿಯ ಜನ ಸುಳ್ಳು  ದಾರಿಯುದ್ದಕ್ಕೂ, ಗಲ್ಲಿ ಗಲ್ಲಿಯ ತುದಿಗೆ ಮೆರವಣಿಗೆಯ ಸದ್ದು ಕೇಳಿ ಓಡಿ ಬರುತ್ತಿದ್ದರು. ಬಾಲ್ಯದಲ್ಲಿ ನಾನು ತಾಯಿ, ತಂಗಿ, ತಮ್ಮನ ಜತೆ ನವರಾತ್ರಿ, ಗಣೇಶ ಹಬ್ಬಗಳ ಮೆರವಣಿಗೆಗಳನ್ನು ನೋಡಲು ಆ ಗಲ್ಲಿಗಳ ತುದಿಗೆ ಓಡಿ ಬಂದು ನಿಂತವನೇ, ಅಂದು ಎಂಟನೆಯ ವಯಸ್ಸಿನ ಬಾಲಕ, ಇಂದು ಐವತ್ತೆಂಟರ ಹಿರಿಯ. ಸಾಧನೆಯ ಸಫಲತೆಯ ಸಾಕ್ಷಾತ್ಕಾರಕ್ಕೆ ಐವತ್ತು ವರ್ಷಗಳ ದೀರ್ಘದಾರಿಯನ್ನು ಸವೆಬೇಕಾಯಿತು. ಎಲ್ಲರ ಮೆರವಣಿಗೆಗಳನ್ನು ಉತ್ಸಾಹದಿಂದ ಓಡಿ ಬಂದು ನೋಡಿದ್ದರಿಂದಲೇ ನನ್ನದಕ್ಕೂ ಜನ ಓಡಿ  ನೋಡಿದರು. ನೀ ಕೊಟ್ಟಿದ್ದನ್ನೇ ನೀ ಪಡೆಯೋದು ಎಂಬುದರ ಸತ್ಯದ ಅರಿವೂ ಆಯಿತು. ಯಾವನನ್ನೋ, ಇನ್ಯಾವನೋ ಮೆರೆಸುತ್ತಾನೆ ಅದನ್ನು ನಾನು ಏಕೆ ನೋಡಬೇಕು ಎಂದು ನಾನು ಮಲಗಿದಲ್ಲಿಂದ, ಕೂತಲ್ಲಿಂದ ಅಂದು ಎದ್ದು ಬರದಿದ್ದರೆ ಇಂದು ನನಗೂ ಯಾರೂ ಬರುತ್ತಿರಲಿಲ್ಲ.

ಸಣ್ಣ ಸಣ್ಣ ಸಂಗತಿಗಳಿಂದಲೇ ಸತ್ಯದ ಸಾಕ್ಷಾತ್ಕಾರ ಎನಿಸಿಬಿಟ್ಟಿತು. ಓಣಿ, ಗಲ್ಲಿಯ ಇಕ್ಕೆಲಗಳಿಂದ ಓಡಿ ಬಂದು ನಿಂತಿದ್ದ ಜನರ ಅಭಿಮಾನ ಈ ರೀತಿಯದ್ದಾಗಿದ್ದರೆ, ಮೆರವಣಿಗೆಯ ವಾಹನದ ಮುಂದೆಯಂತೂ ಮೂರು ಕಿ.ಮಿ.ಗಳವರೆಗೂ ಜನ  ಹಾಕುತ್ತಿದ್ದರು. ಬಾಲ್ಯದಲ್ಲಿ ನಾನು ನಮ್ಮಣ್ಣ ಪಲ್ಲಣ್ಣ ಊರಿನ ಎಲ್ಲ ದೇವರುಗಳ ಪಲ್ಲಕ್ಕಿ ಉತ್ಸವ, ರಥೋತ್ಸವಗಳ ಮುಂದೆ ದೀವಟಿಗೆ ಹಿಡಿದು ಸಾಗುತ್ತಿದ್ದೆವು. ಮಂತ್ರಾಲಯಕ್ಕೆ ಮೂರೂವರೆ ದಿನಗಳ ಪಾದಯಾತ್ರೆ ಮಾಡಿದ್ದರ ನೆನಪಾಯಿತು. ಮಾಡಿದ್ದನ್ನು ಮರೆಯದೇ ನಮಗೆ ಹೇಗೆ ಆ ದೇವರು ಹಿಂತಿರುಗಿಸುತ್ತಾನೆಂದು ನಾನು ಕುಳಿತಲ್ಲಿಯೇ ಯೋಚಿಸುತ್ತಾ ಸೋಜಿಗಗೊಳ್ಳುತ್ತಿದ್ದೆ.

‘ಒಳಿತಿಂಗೆ ಒಳಿತು, ಕೆಡುಕಿಂಗೆ ಕೆಡುಕನೇ ಮಾಳ್ಪ ನಮ್ಮ ಪುರಂದರ ವಿಠ್ಠಲ’ ಎಂಬ ದಾಸರು ನುಡಿಯ ಸತ್ಯಾಸತ್ಯತೆಯ ಗೋಚರವಾಯಿತು. ನಾವು ಬಯಸಿದ್ದನ್ನು ದೇವರು ಕೊಡುವುದಿಲ್ಲ,  ಮಾಡಿದ್ದನ್ನೇ ನಮಗೂ ಮಾಡಿ ತೋರಿಸುತ್ತಾನೆ ಎಂದೇ ದಾರಿಯುದ್ದಕ್ಕೂ ಪ್ರತಿಕ್ಷಣ ಅನಿಸತೊಡಗಿತು. ಮೆರೆಯುವುದು ಎಲ್ಲವನ್ನು ಮರೆಯಲಿಕ್ಕಲ್ಲ ಮರು ಹುಟ್ಟಿ ಮತ್ತೆ ಮರಳಿ ಪಡೆಯುವುದಕ್ಕೆ ಎನಿಸಿತು.

ಉತ್ತರ ಕರ್ನಾಟಕದ ನನ್ನ ಹಾಸ್ಯ ಸಾಹಿತ್ಯ ಸನ್ಮಿತ್ರರೆಲ್ಲ ಬಂದಿದ್ದಲ್ಲದೇ ನನ್ನ ಮೆರವಣಿಗೆ ಮುಂದೆ ಕುಣಿದು ಡೋಲು ಬಾರಿಸಿ ಕುಣಿದು ಕುಪ್ಪಳಿಸಿದರು. ವಾತಾವರಣದಲ್ಲಿ ಬಿಸಿಲು ಇರಲಿಲ್ಲವಾದರೂ ಧಗೆ ಇತ್ತು. ಅನೇಕ ಸಮಾಜದ ಮುಖಂಡರು ಸಾವಿರಾರು ಜನರಿಗೆ ತಂಪು ಪಾನೀಯ ವಿತರಿಸಿದರು. ಇಟ್ಟ ಪೇಟಾ, ಹೊದಿಸಿದ ಶಾಲುಗಳಂತೂ  ಸಿಗದು. ಕಲೆಗೆ, ಕಲಾವಿದರಿಗೆ ಜಾತಿ ಇಲ್ಲ ಎಂಬುದನ್ನು ಎಲ್ಲ ಜಾತಿ ಧರ್ಮಗಳ ಜನರೂ ನನ್ನನ್ನೂ ಅಭಿನಂದಿಸುವುದರ ಮೂಲಕ ಸಾಬೀತು  ಪಡಿಸಿದರು.

1974ರಲ್ಲಿ ನಮ್ಮೂರಿನ ಅಮರ್ ಟಾಕೀಸಿನಲ್ಲಿ ‘ಸಂಪತ್ತಿಗೆ ಸವಾಲ್’ ಚಿತ್ರ ನೂರು ದಿನ ಓಡಿತ್ತು. ಶಮಾನೋತ್ಸವ ಸಮಾರಂಭಕ್ಕೆ ಡಾ.ರಾಜಕುಮಾರ್ ನಮ್ಮೂರಿಗೆ ಬಂದಿದ್ದರು. ರಾಜ್ ಕುಮಾರ್ ಅವರು ತೆರೆದ ಜೀಪಿನಲ್ಲಿ ನಿಂತು, ಎಲ್ಲರ ಕಡೆ ಕೈ ಬೀಸಿ, ಕೈ ಮುಗಿಯುತ್ತಿದ್ದರು. ತಾಯಿಯ ಜತೆ ನಮ್ಮ ಬಂಧುಗಳೇ ಆದ ನೋಂದಣಿ ಅಧಿಕಾರಿ  ಎಂಬುವವರ ಮಣ್ಣಿನ ಮಾಳಿಗೆ ಮೇಲೆ ನಿಂತು ಅವರೆಡೆ ನಾನೂ ಕೈ ಬೀಸಿದ್ದೆ, ಆಗ ನನಗೆ ಹದಿಮೂರು ವರ್ಷ. ಅವರು ಹಾದು ಹೋದ ಆ ರಸ್ತೆ ಬಸವಣ್ಣ ಸರ್ಕಲ್ ಎಂದೇ ಕರೆಯಿಸಿಕೊಳ್ಳುತ್ತಿದೆ. ಮೆರವಣಿಗೆ ಮುಂದೆ ಹೋದ ಮೇಲೆ, ನೋಡಿದ ಸಂತೃಪ್ತಿಯಿಂದ ಮಾಳಿಗೆ ಇಳಿಯುವಾಗ ನಮ್ಮ ತಾಯಿ ನೀನು ಹೀಗೆ ರಾಜ್‌ಕುಮಾರ್‌ನಂತೆ ಮೆರೆಯಬೇಕು ಎಂದು ಹೇಳಿದ್ದಳು.  ಅದು 44 ವರ್ಷಗಳ ನಂತರ ನನಸಾಯಿತು. ನನ್ನಲ್ಲಿ ಆ ಕನಸನ್ನು ಬಿತ್ತಿದ್ದ ನನ್ನ ತಾಯಿಯೂ  ಪಕ್ಕದಲ್ಲಿಯೇ ಮೆರವಣಿಗೆಯಲ್ಲಿ ಕೂತಿದ್ದುದು ನನಗೆ ಇನ್ನಷ್ಟು ಧನ್ಯತೆ ತಂದು ಕೊಟ್ಟಿತು. ಕನಸು ಕಾಣಬೇಕೋ ಅದಕ್ಕಾಗಿ ಕಾಯಬೇಕು, ತಾಳುವಿಕೆಗಿಂತ ಅನ್ಯ ತಪವಿಲ್ಲ ಎಂಬ ನುಡಿ ನಿಜವೆನಿಸಿತು. ಗಂಗಾವತಿಯ ಬೀದಿ ಬೀದಿಗಳು ನನಗೆ ಉದ್ಯೋಗವಿಲ್ಲದಾಗ ಪಟ್ಟ ಬವಣೆಗಳಿಗೆ ಸಾಕ್ಷಿಯಾದವು. ಮೆರವಣಿಗೆ ಹಾದು ಹೋದ ಬೀದಿಗಳಲ್ಲೇ ನಾನು ಉದ್ಯೋಗಕ್ಕಾಗಿ ಇಟ್ಟಿದ್ದ ಕಿರಾಣಿ ಅಂಗಡಿಗೆ ಸೈಕಲ್ ಮೇಲೆ ಸೀಮೆ ಎಣ್ಣೆ, ಶೇಂಗಾ ಎಣ್ಣೆ ಡಬ್ಬಾಗಳನ್ನು ಇರಿಸಿಕೊಂಡು ಅಡ್ಡಾಡಿದ್ದೇನೆ. ಪಿಗ್ಮಿ ಚೀಟಿ ದುಡ್ಡಿಗೆ ತಿರುಗಿದ್ದೇನೆ. ಗಾಂಧಿ  ಇಳಿದು ರಿಕ್ಷಾಕ್ಕೆ ದುಡ್ಡು ಇರದೆ ಎರಡು ಗಂಟೆ ರಾತ್ರಿಯಲ್ಲಿ, ಜಿಟಿ ಜಿಟಿ ಮಳೆಯಲ್ಲಿ ನಡೆದುಕೊಂಡೇ ಮನೆ ಸೇರಿದ್ದೇನೆ.  ಮಕ್ಕಳಿಗೆ ತಂದ ತಿಂಡಿ, ಕಾರ್ಯಕ್ರಮದವರು ಕೊಟ್ಟ ನೆನಪಿನ ಕಾಣಿಕೆಯನ್ನು ಮಳೆಯಲ್ಲಿ ನೆನಯಬಾದೆಂದು ಶರ್ಟ್ ಒಳಗೆ ಇಟ್ಟುಕೊಂಡು ಸರ ಸರ ನಡೆದು ಮನೆ ಸೇರಿದ್ದೇನೆ. ಇದನ್ನೆಲ್ಲಾ ನೆನಸಿಕೊಳ್ಳುತ್ತಲೇ ಅಂದು ಜನರ ಪ್ರೀತಿಯಲ್ಲಿ ನೆನೆಯುತ್ತಾ ಸಾಗಿದ್ದು, ನನ್ನ ಜೀವನದ ಸಾರ್ಥಕ ಕ್ಷಣ ಅದು. ಅಂದಿನ ಕೂಸುಗಳೆಲ್ಲ ಇಂದಿನ ಯುವಕರು, ಅಂದಿನ ಯುವಕರೆಲ್ಲಾ ಇಂದಿನ  ಅಂದಿನ ಗೃಹಸ್ಥರೆಲ್ಲಾ ಇಂದಿನ ವೃದ್ಧರು. ಅವರೆಲ್ಲ ಹಾರ ಹಿಡಿದು ನಿಂತಿದ್ದರು. ಹಾರಕ್ಕೆ ತಲೆ ಬಾಗಿಸುವ ನೆಪದಲ್ಲಿ ಅವರ ಪ್ರೇಮ, ವಿಶ್ವಾಸಗಳಿಗೆ ನಾನು ಬಾಗಿಹೋದೆ.  ಸಹ ಕಲಾವಿದರಾದ ಉಡುಪಿಯ ಸಂಧ್ಯಾಶೆಣೈ, ಗದಗಿನ ಅನಿಲ್ ವೈದ್ಯ, ರವಿಭಜಂತ್ರಿ, ಶರಣು ಯಮನೂರು, ಅಜಯ್ ಸಾರಾ ಪೂರೆ, ಮಲ್ಲಪ್ಪ ಹೊಂಗಲ, ಇಂದುಮತಿ ಸಾಲಿಮಠ, ಗುಂಡಣ್ಣ ಡಿಗ್ಗಿ, ಕುನ್ನಾಳ್ ಮಹಾಂತೇಶ್, ರಾಜಕೀಯ ಮುಖಂಡರಾದ ನಮ್ಮ ಶಾಸಕ ಪರಣ್ಣ ಮುನವಳ್ಳಿ, ಎಚ್.ಆರ್.ಶ್ರೀನಾಥ, ಧಡೇಸ್‌ಗೂರ್ ಬಸವರಾಜ, ಓಹ್! ಕಲಾವಿದನ  ಇದಕ್ಕಿಂತ ಸಂಭ್ರಮ ಬೇಕೆ? ಸಾರ್ಥಕತೆ ಬೇಕೆ?

ಇಷ್ಟರ ಮಧ್ಯೆಯೂ ನಾನು ನಮ್ಮ ತಂದೆ ದಿ.ವೆಂಕೋಬಾಚಾರ್ ಇರಬೇಕಿತ್ತು. ನನ್ನ ತಾತ ಶ್ಯಾಮರಾವ್ ಇರಬೇಕಿತ್ತು, ಎಲ್ಲಕ್ಕಿಂತ ಹೆಚ್ಚು ನನ್ನ ಇಂದಿನ ಏಳಿಗೆ ಮೂಲ ಬೀಜವಾಗಿದ್ದ ನನ್ನ ತಮ್ಮ ಸ್ವಾ.ವೆಂ.ಆಚಾರ್ಯ(ಸ್ವಾಮಿ) ಇರಬೇಕಿತ್ತು ಎಂಬ ಕೊರತೆಯನ್ನು ಅನುಭವಿಸಿದೆ.

ಮೂರು ಕಿ.ಮೀ. ವೇದಿಕೆಯನ್ನು ತಲುಪುವಲ್ಲಿ ನಾಲ್ಕು ತಾಸುಗಳು ಕಳೆದು ಹೋಗಿದ್ದವು. ಉದ್ಘಾಟಕರಾಗಿ ಬಂದಿದ್ದ ವಿಶ್ವೇಶ್ವರಭಟ್ಟರು, ಸ್ವಾಮೀಜಿಗಳು ನಗರದ ಗಣ್ಯರು ನನ್ನನ್ನು ಬರಮಾಡಿಕೊಂಡರು. ನನ್ನ ಸಹೋದ್ಯೋಗಿ, ಶಿಷ್ಯರತ್ನರೆಲ್ಲರೂ  ಮತ್ತೊಂದು ಮೆರವಣಿಗೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದರು. ಅದುವೇ ಬೆಳ್ಳಿ ಕಿರೀಟ, ಬರೋಬ್ಬರಿ ಆರುನೂರಾ ಅರವತ್ತೆರಡು ಗ್ರಾಂ ತೂಕದ ಬೆಳ್ಳಿ ಕೀರಿಟ! ತಲೆಗೆ ಇಟ್ಟರು, ನನ್ನ ಹೊಟ್ಟೆ ಪಾಡಿಗೆ ನಾನು ಶುರು ಹಚ್ಚಿಕೊಂಡ ಈ ಹಾಸ್ಯ ಸಂಜೆಯಲ್ಲಿ ಕಳೆದ ವರ್ಷಗಳು ಇಷ್ಟು ದೊಡ್ಡ ಸನ್ಮಾನಕ್ಕೆ ಕಾರಣವಾದವೇ? ಎಲ್ಲಾ ಕೆಲಸಗಳಿಗಿಂತ ಜನರನ್ನು ನಗಿಸಿದ ಕಾಯಕಕ್ಕೆ ಇಷ್ಟು ದೊಡ್ಡ ತಾಕತ್ತಿದೆಯೇ ಎನಿಸಿತು. ಎದುರಿಗೆ ಸಾವಿರಾರು ಜನ, ವೇದಿಕೆಯ ಕಾರ್ಯಕ್ರಮ ಆರಂಭವಾದವು. ಕೂತಲ್ಲೇ  ಯೋಚನೆಗೆ ಬಿದ್ದೆ, ‘ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ’ ಎನ್ನುತ್ತಾರೆ. ಯಾವ ಪುಣ್ಯ ನನ್ನನ್ನು ಈ ಯೋಗ್ಯತೆಗೆ ಪಾತ್ರನನ್ನಾಗಿ ಮಾಡಿತು ಎಂದುಕೊಳ್ಳುವಾಗ ನೆನಪಾದದ್ದು ನಮ್ಮ ತಂದೆ ದಿ.ವೆಂಕೋಬಾಚಾರ್. ಊರವರ ಬಾಯಲ್ಲಿ ಬೇವಿನ್ಹಾಳ್ ಯಂಕಣ್ಣ, ಸ್ವಾತಂತ್ರ್ಯ ಹೋರಾಟಗಾರ, ಒಂಬತ್ತು ತಿಂಗಳು ಕಾರಾಗೃಹವಾಸ ಅನುಭವಿಸಿದವರು. ಕೇಂದ್ರ ತಾಮ್ರ ಪತ್ರ ಪ್ರಶಸ್ತಿ ಪಡೆದ, ನಂತರದ ದಿನಗಳಲ್ಲಿ ತಾನು, ತನ್ನ ಉದ್ಯೋಗ ಎಂದಷ್ಟೇ ಬದುಕು ಸವೆಸಿ ಬಡತನದಲ್ಲೇ ಜೀವನ ಕಳೆದಾತ.

ಯಾವ ಸನ್ಮಾನ, ಮಾನ, ಪ್ರತಿಷ್ಠೆಗಳ  ಹೋಗದಾತ.  ಆಗಿನ ಅವರ ಸ್ನೇಹಿತರ ಸಂಘದ ಚಟುವಟಿಕೆಗಳಲ್ಲಿ ಕನ್ನಡ ಸಂಘ ಕಟ್ಟಿ ಆಗಲೇ ಬೀಚಿ, ಬೇಂದ್ರೆ, ಶ್ರೀರಂಗ, ಗೋಕಾಕರನ್ನು ಕರೆಸಿದ್ದರು. ಹಿರಿಯ ವಕೀಲರಾದ ಅಯ್ಯೋಧ್ಯಾ ರಾಮಾಚಾರ್, ಗೋಗಿ ಭೀಮಸೇನರಾವ್, ಡಾ.ಹೇರೂರು ರಾಮರಾವ್, ಅಕ್ಬರ್ ಪ್ರಹ್ಲಾದರಾವ್, ಕಾರಟಗಿ ರುದ್ರಗೌಡ ಮುಂತಾದವರ ಜತೆಗೆ ಹಲವಾರು ಕಾರ್ಯಕ್ರಮಳನ್ನು ಮಾಡಿದರೂ ನಮ್ಮ ತಂದೆ ಯಂಕಣ್ಣ ಸದಾ ನೇಥ್ಯದಲ್ಲಿಯೇ ಇರುತ್ತಿದ್ದರು. ಪೆಟ್ರೊಮಾಕ್ಸಿಗೆ ಗಾಳಿ ಹಾಕುವುದು, ಮೆರವಣಿಗೆಯ ಮುಂದೆ ಡ್ರಮ್ ಬಾರಿಸುವುದು, ಕೊಳಲು ಬಾರಿಸುವುದು ಇವುಗಳನ್ನೇ ಮಾಡಿ  ಮೆರೆಸಿದರು. ವೇದಿಕೆ ಅತಿಥಿಗಳಿಗೆ ಹಾರ, ಶಾಲು ಹಾಕುವಾಗ ಬ್ಯಾಕ್‌ಗ್ರೌಂಡ್ ಮ್ಯೂಜಿಕ ನಮ್ಮ ತಂದೆಯವರದೇ. ಹೀಗಾಗಿ ಅಂದು ಅವರಿಗಾಗಬೇಕಿದ್ದ ಎಲ್ಲ ಸನ್ಮಾನ, ಮೆರವಣಿಗೆಗಳು ನನಗಾಗುತ್ತಿವೆ.

ನಮ್ಮ ತಂದೆ ನಮಗೆ ಆಸ್ತಿ, ಹಣ, ಮನೆಗಳನ್ನು ಮಾಡಿ ಹೋಲಿಲ್ಲ. ಹಾಗೆಯೇ, ಹತ್ತು ರುಪಾಯಿಯೂ ಸಾಲದ ಹೊರೆ ಬಿಟ್ಟು ಹೋಗಲಿಲ್ಲ. ಅದರಂತೆ ಮಾನ-ಸನ್ಮಾನಗಳನ್ನು ಮಾಡಿಸಿಕೊಳ್ಳದೇ ಅದನ್ನು ಮಾತ್ರ ನನಗೆ-ನಮ್ಮಣ್ಣ ಜ್ಞಾನಮಂದಿರದ ಪ್ರಹ್ಲಾದಾಚಾರ್ಯರಿಗೆ ಬಿಟ್ಟು ಹೋದರೇನೋ ಎನಿಸುವಂತೆ ಇಂದು ನಿತ್ಯ ಬೆಳಗಿದರೆ ನನಗೆ ಹಾರ  ಸನ್ಮಾನ, ವೈದಿಕ ವೃತ್ತಿಯಲ್ಲಿರುವ ನಮ್ಮಣ್ಣನಿಗೂ ನಿತ್ಯ ರಾಜಮರ್ಯಾದೆ. ತಂದೆ ಮಕ್ಕಳಿಗೆ ಗಳಿಸಿಡಬೇಕಾದದ್ದು ಏನು? ಒಳ್ಳೆಯ ಸಾತ್ವಿಕನ ಮಕ್ಕಳೆಂಬ ಹೆಸರು. ಉಳಿಸಿ ಹೋಗಬೇಕಾದದ್ದು ಏನು? ನಿಷ್ಕಾಮ ಸೇವೆ ಮಾಡಬೇಕು, ಹೆಸರು, ಹಣ, ಸನ್ಮಾನಕ್ಕೆ ಹಾತೊರೆಯದೇ ಅದನ್ನೂ ನನ್ನ ಮಕ್ಕಳೇ ಪಡೆಯಲಿ ಎಂಬ ಮನೋನಿಶ್ಚಯ. ಬಹುಶಃ ನಮ್ಮ ತಂದೆ ಹಣ ಗಳಿಸಿಟ್ಟಿದ್ದರೆ ನಾನು ಜನರಿಂದ ಈ ಗೌರವ ಪಡೆಯುತ್ತಿರಲಿಲ್ಲ, ಹಣವನ್ನೂ ಉಳಿಸಿಕೊಳ್ಳುತ್ತಿರಲಿಲ್ಲ. ಅವರ ನಿಷ್ಕಾಮ ಸೇವೆಯ ಫಲವೇ ನಮಗಿಂದು ಈ ಜನಾನುಗ್ರಹ,  ನನಗೆ ನನ್ನ ತಂದೆಯ ಋಣ ತೀರಿಸಿದೆ ಎಂಬ ತೃಪ್ತಿ ಇದೆ. ಅದಕ್ಕೆ ಸಹಕರಿಸಿದ ಗಂಗಾವತಿಯ ನನ್ನ ಜನಕ್ಕೆ ನಾನು ಚಿರಋಣಿಯಾದೆ.