About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮಾಜಿ ಸ್ಪೀಕರ್​ ಕೋಳಿವಾಡ, ಮಾಜಿ ಶಾಸಕ ರಾಜಣ್ಣಗೆ ಕೆಪಿಸಿಸಿಯಿಂದ ನೋಟಿಸ್

ಬೆಂಗಳೂರು:  ಮೈತ್ರಿ ಸರಕಾರದ ವಿರುದ್ಧ ಗೊಂದಲಕಾರಿ ಹೇಳಿಕೆ ನೀಡುತ್ತಿರುವ ಆರೋಪದ ಮೇಲೆ ಕಾಂಗ್ರೆಸ್​ ನಾಯಕರಾದ ಮಾಜಿ ಸ್ಪೀಕರ್​ ಕೆ.ಬಿ.ಕೋಳಿವಾಡ ಹಾಗೂ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಕಾರಣ ಕೇಳಿ ಪಕ್ಷ ನೋಟಿಸ್ ಜಾರಿ ಮಾಡಿದೆ.

ಇಬ್ಬರು ನಾಯಕರಿಗೆ ಕೆಪಿಸಿಸಿ ನೊಟೀಸ್ ಜಾರಿ ಮಾಡಿದ್ದು, ವಾರದೊಳಗೆ  ಉತ್ತರಿಸುವಂತೆ ಗಡುವು ನೀಡಲಾಗಿದೆ. ಇನ್ನು ಪಕ್ಷದ ತೀರ್ಮಾನವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಲ್ಲಿ, ಕಠಿಣ ಕ್ರಮ ಕೈಗೊಳ್ಳುವ ಕುರಿತು ನೊಟೀಸ್ ನಲ್ಲಿ ಪ್ರಸ್ತಾಪಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಗುಂಡುರಾವ್​ ಪರವಾಗಿ ಪ್ರಧಾನ ಕಾರ್ಯದರ್ಶಿ ವಿ ವೈ ಘೋರ್ಪಡೆ ಇಬ್ಬರಿಗೂ ನೊಟಿಸ್ ಜಾರಿಮಾಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗವಾಗಿ ಕಣ್ಣೀರು ಹಾಕಲು ಕಾಂಗ್ರೆಸ್​ ನಾಯಕರೇ ಕಾರಣ ಎಂದು ಕೋಳಿವಾಡ ಹೇಳಿಕೆ ನೀಡಿದರೆ, ಈ ಮೈತ್ರಿ ಸರಕಾರ ಶೀಘ್ರವಾಗಿ ಪತನವಾಗಲಿದೆ ಎಂದು ಕೆ,ಎನ್​ ರಾಜಣ್ಣ ಹೇಳಿಕೆ ನೀಡಿದ್ದರು.

ಮೈತ್ರಿ ಸರಕಾರದ ವಿರುದ್ಧ ಕಾಂಗ್ರೆಸ್​ ನಾಯಕರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದರಿಂದ ಸರಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್​ ಹೈ ಕಮಾಂಡ್​ ಸೂಚಿಸಿತ್ತು. ಅಲ್ಲದೇ ಈ ಸಂಬಂದ ಕೆಪಿಸಿಸಿ ಅಧ್ಯಕ್ಷರು ಸಹ ಎಚ್ಚರಿಕೆ ನೀಡಿದ್ದರು

Tags

Related Articles

Leave a Reply

Your email address will not be published. Required fields are marked *

Language
Close