About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಅನ್ನಭಾಗ್ಯದ ತೊಗರಿ ಬೇಳೆ ಅಷ್ಟೇ ಅಲ್ಲ, ಸಮ್ಮಿಶ್ರ ಸರ್ಕಾರವೇ ಕಲಬೆರಕೆ…!

ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ ಹೇಳಿಕೆ

ವಿಜಯಪುರ: ಅನ್ನಭಾಗ್ಯ ಯೋಜನೆ ತೊಗರಿ ಬೇಳೆ ಕಲಬೆರಕೆ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ, ಸಮ್ಮಿಶ್ರ ಸರ್ಕಾರವೇ ಕಲಬೆರಕೆಯಾಗಿರುವಾಗ ಏನ್​ ಹೇಳಲಿ ನಾನು ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲೇ ಇಷ್ಟೊಂದು ಕಲಬೆರಕೆ ಇರಬೇಕಾದ್ರೆ ನಾನು ಬೇಳೆ ಕಲಬೆರಕೆ ಬಗ್ಗೆ ಏನು ಹೇಳಲಿ? ಸರ್ಕಾರವೇ ಕಲಬೆರಕೆ ಆಗಿದೆ. ನೋಡೋಣ, ಬರುವಂತಹ ದಿನಗಳಲ್ಲಿ ಇನ್ನೂ ಏನೇನೂ ಅನುಭವಿಸಬೇಕೊ ಎಂದು ಹೇಳಿದರು.

ರಾಜ್ಯ ಸರಕಾರ ಪಾಪರ್ ಆಗಿದೆ. ರಾಜ್ಯ ಸರಕಾರದ ಬಳಿ ಹಣವೇ ಇಲ್ಲ. ಯೋಜನೆಗಳನ್ನು ಘೋಷಣೆ ಮಾಡುತ್ತಿದೆ ಹೊರತು ಹಣ ಬಿಡುಗಡೆ ಮಾಡುತ್ತಿಲ್ಲ ಎಂದ ಅವರು, ನಾವು ಹಿಂದುತ್ವವಾದಿಗಳು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು, ಆಗೇ ಆಗುತ್ತದೆ ಎಂದರು.

ದಿನೇಶ್​ ಗುಂಡುರಾವ್​ ಅವರಿಗೆ ತಾಕತ್ತಿದ್ದರೆ ಸತೀಶ ಜಾರಕಿಹೊಳಿ, ಡಾ. ಸುಧಾಕರ ವಿರುದ್ಧ ಮೊದಲು ಕ್ರಮ ಕೈಗೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. ತಮ್ಮನ್ನು ಪೆದ್ದು ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ತುಂಬಿದೆ. ಅವರು ಯಾವಾಗ ಏನು ಮಾತನಾಡುತ್ತಾರೊ ಗೊತ್ತಿಲ್ಲ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

Tags

Related Articles

Leave a Reply

Your email address will not be published. Required fields are marked *

Language
Close