About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಯುಜಿಸಿ ಮಾನ್ಯತೆ ಬಿಕ್ಕಟ್ಟು ಅಂತ್ಯ: ಕರಾಮುವಿ ನಿರಾಳ

ಮೈಸೂರು: ಯುಜಿಸಿ ಮಾನ್ಯತೆಯ ನವೀಕರಣ ಕುರಿತ ಸಮಸ್ಯೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಹಿಡಿಶಾಪಕ್ಕೆ ಗುರಿಯಾಗಿದ್ದ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯಕ್ಕೆ ಎರಗಿದ್ದ ದೊಡ್ಡ ಸಂಕಟವೊಂದು ಪರಿಹಾರವಾಗಿದೆ.

ದೂರ ಶಿಕ್ಷಣ ಕಾರ್ಯಕ್ರಮದಲ್ಲಿ ಅನೇಕ ಕೋರ್ಸ್‌‌ಗಳನ್ನು ಹಮ್ಮಿಕೊಳ್ಳಲು ಯುಜಿಸಿಯ ಅಧಿಕೃತ ಮಾನ್ಯತೆಯನ್ನು ಕೊನೆಗೂ ಕೆಎಸ್‌ಓಯು ತನ್ನದಾಗಿಸಿಕೊಂಡಿದೆ.

ಸ್ನಾತಕೊತ್ತರ ಪದವಿ ಕೋರ್ಸ್‌ಗಳನ್ನು ಹಮ್ಮಿಕೊಳ್ಳಲು ಯುಜಿಸಿ ನವೀಕರಣ ಸಿಗದೇ ಸಾಕಷ್ಟು ಕಾರಣ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು.

2018-19ರ ಶೈಕ್ಷಣಿಕ ವರ್ಷದಿಂದ 2022-23ರ ಶೈಕ್ಷಣಿಕ ವರ್ಷದವರೆಗೆ 17 ವಿವಿಧ ಕೋರ್ಸ್‌‌ಗಳನ್ನು ನಡೆಸಲು ಕರಾಮುವಿಗೆ ಯುಜಿಸಿ ಅನುಮತಿ ನೀಡಿದೆ. ಅಲ್ಲದೇ 2013-14ರ ಶೈಕ್ಷಣಿಕ ವರ್ಷದಿಂದ ಯುಜಿಸಿ ಮಾನ್ಯತೆಯ ಸಂಬಂಧ ಬಿಕ್ಕಟ್ಟಿಗೆ ಸಿಲುಕಿದ್ದ ವಿದ್ಯಾರ್ಥಿಗಳೀಗ ನಿರಾಳರಾಗಲಿದ್ದಾರೆ.

ನಿಯಮಗಳನ್ನು ಗಾಳಿಗೆ ತೂರಿ, ಅನೇಕ ಕೋರ್ಸ್‌‌ಗಳನ್ನು ಬೇಕಾಬಿಟ್ಟಿ ಆರಂಭಿಸಿದ್ದ ಕಾರಣ ಕರಾಮುವಿಯ ಮಾನ್ಯತೆಯನ್ನು ಯುಜಿಸಿ ರದ್ದು ಮಾಡಿತ್ತು. ಈ ನಡೆಯಿಂದ ಸಹಸ್ರಾರು ಉನ್ನತ ಶಿಕ್ಷಣ ಆಕಾಂಕ್ಷಿಗಳು ಗೊಂದಲಕ್ಕೀಡಾಗಿದ್ದರು. ಅಲ್ಲದೇ ವಿವಿಧ ಕೋರ್ಸ್‌ಗಳ ಪರೀಕ್ಷೆ ಬರೆದವರು ಸಹ ಸಾಕಷ್ಟು ಅತಂತ್ರರಾಗಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close