About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ಕುಚ್ ಪದದಿಂದ ಕುಚ್ ಕುಚ್ ಹೋತಾ ಹೈ!

ಸುಮಾರು ಇಪ್ಪತ್ತೊಂದು ವರ್ಷ ಗಳ  ನಾನೊಂದು ಪದ ವನ್ನು ಹುಡುಕಿಕೊಂಡು ಹೋಗಿದ್ದೆ. ಅದೂ ಬ್ರಿಟನ್‌ನ ವೇಲ್‌ಸ್ನ ರಾಜಧಾನಿ ಕಾರ್ಡಿಫ್‌ನಲ್ಲಿ. ಆಗ ನಾನು ಅಲ್ಲಿನ ಥಾಮ್ಸನ್ ಫೌಂಡೇಶನ್‌ನಲ್ಲಿ ಪತ್ರಿಕೋದ್ಯಮ ಉನ್ನತ ವ್ಯಾಸಂಗ ಮಾಡುತ್ತಿದ್ದೆ. ವೇಲ್‌ಸ್ ಪ್ರಾಕೃತಿಕವಾಗಿ ಬಹಳ ಸುಂದರ ನಾಡು. ಹಸುರು,ನೀರು, ಗುಡ್ಡ, ಬೆಟ್ಟಗಳ ಹೊರತಾಗಿ ಇರುವವರೆಂದರೆ ಜನ ಹಾಗೂ ದನ. ಅಲ್ಲಿನ ಜನರೂ ವಿಶಿಷ್ಟ, ನಿರುಪದ್ರವಿ. ಅವರಿಗೆ ತಮ್ಮ ಸಂಸ್ಕೃತಿ, ಪರಂಪರೆ, ಭಾಷೆ ಅಂದ್ರೆ ಪಂಚಪ್ರಾಣ.

ವೇಲ್‌ಸ್ ಮಂದಿ ವೇಲ್ಸ್ ಬಿಟ್ಟು ಬೇರೆ ಭಾಷೆ  ಡೊಲ್ಲ. ಅವರಿಗೆ ಇಂಗ್ಲಿಷ್ ಬಂದರೂ ಮಾತಾಡೊಲ್ಲ. ಲಂಡನ್ ಅಲ್ಲಿಂದ ಕೇವಲ ಮುನ್ನೂರು ಕಿ.ಮೀ. ದೂರ ವಿರಬಹದು. ಆದರೆ ಇಂಗ್ಲಿಷ್‌ನ್ನು ಎಲ್ಲಿಡ ಬೇಕೋ ಅಲ್ಲಿಯೇ ಇಟ್ಟಿದ್ದಾರೆ. ಇಂಗ್ಲಿಷ್‌ರಿಗೆ ಯಾವುದು ಇಷ್ಟವೋ ಅದು  ಈ ಮಂದಿಗೆ ಆಗೊಲ್ಲ. ಇಂಗ್ಲಿಷರು ಜಗತ್ತನ್ನೇ ಆಳಿದರು ವೇಲ್ಸ್ ತಂಟೆಗೆ ಹೋಗಿಲ್ಲ. ವೇಲ್ಸ್ ಮಂದಿಗೆ ತಮ್ಮ ಸಂಸ್ಕೃತಿ ಅಂದರೆ, ಆ ಪರಿ ಮೋಹ, ವ್ಯಾಮೋಹ. ಇಂಗ್ಲೆಂಡ್ ಹಾಗೂ ಫ್ರಾನ್ಸ್ ನಡುವೆ ಫುಟ್ಬಾಲೋ, ರಗ್ಬಿಯೋ ಪಂದ್ಯ ನಡೆದರೆ, ಫ್ರಾನ್ಸ್  ಹೆಚ್ಚು ಚಪ್ಪಾಳೆ ಬರಬಹುದು. ಹಾಗಂತ ವೇಲ್‌ಸ್ನಲ್ಲಿ ಇಂಗ್ಲಿಷ್ ಇಲ್ಲವೇ ಇಲ್ಲ ಅಂತಲ್ಲ. ಇದೆ. ಆದರೆ ಎಷ್ಟು ಬೇಕೋ ಅಷ್ಟಿದೆ. ಇಂಗ್ಲಿಷ್‌ನ ಈ ದಾಳಿಯ ನಡುವೆಯೂ, ಅವರು ತಮ್ಮ ಭಾಷೆ ಪಾರಮ್ಯ ಮೆರೆಯುತ್ತಿದ್ದಾರೆ.

ನಾನು ಹಾಸ್ಟೆಲ್‌ನಿಂದ ಯುನಿವರ್ಸಿಟಿಗೆ ಹೋಗು ವಾಗ, ಉದ್ಯಾನ ಬಳಸಿ ಹೋಗುತ್ತಿದ್ದೆ. ಅಲ್ಲೊಂದು ಬೋರ್ಡಿನ ಮೇಲೆ  Hugs are for everyone; CWtches are only for few ಎಂದು ಬರೆದಿತ್ತು. ನನಗೆ CWtches ಎಂಬುದನ್ನು ಹೇಗೆ  ತಿಳಿಯಲಿಲ್ಲ. ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದಿರಬಹುದಾ ಅಥವಾ ಅಲ್ಲಿನ ಮಳೆಗೆ ಮೊದಲಿನ ಪದ ಅಥವಾ ಪದಗಳು ಅಳಿಸಿ ಹೋಗಿರಬಹುದಾ ಎಂದು ಭಾವಿಸಿದೆ. ಆದರೆ ಅಲ್ಲಿ ಒಂದು ಪದಕ್ಕೆ ಜಾಗವಿಲ್ಲದಿದ್ದರಿಂದ ಅಕ್ಷರ ಅಳಿಸಿಹೋಗಿಲ್ಲವೆಂಬುದು ಖಾತ್ರಿಯಾಯಿತು.

 ಒಂದು, ಎರಡು, ಮೂರು ವಾರಗಳು ಕಳೆದವು. ಆದರೆ ಪ್ರತಿದಿನ ಆ ಬೋರ್ಡ್ ನೋಡಿಯೇ ಹೋಗು ತ್ತಿದ್ದೆ. CWtches ಎಂಬ ಪದವನ್ನು ಡಿಕ್ಷನರಿಯಲ್ಲಿ  ನೋಡಿದೆ. ಕಾಣಲಿಲ್ಲ. ಆ ವಾಕ್ಯದ ಮೊದಲ ಭಾಗ (Hugs are for everyone) ನೋಡಿ CWtches ಅಂದ್ರೆ ಚುಂಬನ ಇದ್ದಿರಬಹುದು ಎಂಬ ನಿರ್ಧಾರಕ್ಕೆ ಬಂದೆ. ಹೀಗಾಗಿ ಅದರ ಅರ್ಥಕ್ಕಾಗಿ ಯಾರನ್ನೂ ಕೇಳಲಿಲ್ಲ.

ಆದರ  CWtches ಪದವನ್ನು ಉಚ್ಛರಿಸುವುದು ಹೇಗೆ ಎಂಬ ಪ್ರಶ್ನೆ ಜೀವಂತವಾಗಿಯೇ ಇತ್ತು. ಕಾರಣ ಆ ಬೋರ್ಡ್ ಪ್ರತಿದಿನ ಕಣ್ಣಿಗೆ ಬೀಳುತ್ತಿತ್ತು. ನಾನು ಅದನ್ನು ಕ್ವಚ್, ವಚ್, ಟ್‌ಚ್.. ಮುಂತಾದ ರೀತಿಯಲ್ಲಿ ಉಚ್ಛರಿಸುತ್ತಿದ್ದೆ. ಈ ಪದಕ್ಕೆ ಯಾವುದೇ ವಿಶೇಷ ಅರ್ಥ ಇರಲೇಬೇಕು ಎಂದು ನಿರ್ಧರಿಸಿ ವೇಲ್‌ಸ್-ಇಂಗ್ಲಿಷ್ ಪದಕೋಶ ನೋಡಿದೆ.

ಸಿಕ್ಕೇಬಿಟ್ಟಿತು ಅರ್ಥ!

CWtches ಮುದ್ದಾಡುವುದು ಎಂದರ್ಥ. ಇಂಗ್ಲಿಷಿನಲ್ಲಿ  cuddle ಅಂತಾರಲ್ಲ cwtch ಅಂದ್ರೆ ಅದು. hugging ಅಂದ್ರೆ ತಬ್ಬಿಕೊಳ್ಳುವುದು, ಆಲಂಗಿಸುವುದು. cwtch ಅಂದ್ರೆ ಅಪ್ಪಿ ಮುದ್ದಾಡು ವುದು. ನೀವು ಯಾರನ್ನು ಬೇಕಾದರೂ ಆಲಂಗಿಸ ಬಹುದು, ತಬ್ಬಿಕೊಳ್ಳಬಹುದು. ಆದರೆ ಕೆಲವರನ್ನು, ಆತ್ಮೀಯರನ್ನು ಮುದ್ದಾಡಬಹುದು. ಅದರಲ್ಲೂ ವಿಶೇಷವಾಗಿ ಪ್ರಿಯಕರ, ಪ್ರೇಯಸಿಯನ್ನು ಮಾತ್ರ ಮುದ್ದಾಡಬಹುದು. ಈ ಅರ್ಥದಲ್ಲಿ ಆ ಬೋರ್ಡ್ ಬರೆಯಲಾಗಿತ್ತು. ಇದರ ಉಚ್ಛಾರಣೆ ಕುಚ್.

ನಮಗೆ ಮೇಷ್ಟ್ರೊಬ್ಬರಿದ್ದರು. ಅವರ ಹೆಸರು ಜಾನ್ ರೈನ್. ಅವರು ತಮ್ಮ  ಕಪಾಟಿನ ಮೇಲೆ Heaven’s sake, Don’t open this cwtch ಎಂದು ಬರೆಸಿದ್ದರು. ನನಗೆ ಆಗ ಗೊಂದಲ ಶುರುವಾಯಿತು. cwtch ಅಂದ್ರೆ ನಾನು ತಿಳಿದ ಅರ್ಥವೇ ಬೇರೆ ಆಗಿತ್ತು. ಅಪ್ಪಿ ಮುದ್ದಾಡುವುದು ಎಂಬ ಅರ್ಥ ಆ ವಾಕ್ಯದಲ್ಲಿ ಕಾಣಲಿಲ್ಲ. ಎಷ್ಟು ಸಲ ಯೋಚಿಸಿದರೂ ಅರ್ಥ ಹೊಳೆಯಲಿಲ್ಲ.

ಬೇರೆ ದಾರಿ ಕಾಣದೇ ರೈನ್ ಅವರನ್ನು  cwtch ಪದದ ಅರ್ಥ ಕೇಳಿದೆ. ಅದಕ್ಕೆ ಅವರು ಕುಚ್ ಅಂದ್ರೆ ಕಪಾಟು ಅಂದರು. ಕುಚ್  ಮುದ್ದಾಡುವುದು ಎಂಬ ಅರ್ಥ ಇದೆಯಲ್ಲ ಎಂದೆ. ‘ಪರವಾಗಿಲ್ವೇ, ನೀವು ಅಷ್ಟು ಬೇಗ ಅದರ ಅರ್ಥ ತಿಳಿದುಕೊಂಡಿದ್ದೀರಲ್ಲ, ವೆರಿ ಗುಡ್, ವೇಲ್‌ಸ್ ಭಾಷೆಯಲ್ಲಿದ್ದರೂ ಅದರ ಅರ್ಥ ತಿಳಿದುಕೊಂಡಿದ್ದು ನನಗೆ ಖುಷಿಯಾಯಿತು’ ಅಂದರು.

‘ಅದೆಲ್ಲ ಸರಿ, ನೀವು ಆ ಕಪಾಟಿನ ಮೇಲೆ Don’t open this cupboard ಎಂದೇ ಬರೆಸಬಹುದಿ ತ್ತಲ್ಲ. cwtchಎಂದು ಬರೆಸಿದ್ದೇಕೆ?’ ಎಂದು ಕೇಳಿದೆ. “cupboard ಎಂದು ಬರೆಸಿದ್ದರೆ ಅದರೊಳಗೆ ಏನಿದೆ ಎಂಬ ಕುತೂಹಲ ಮೂಡುತ್ತಿತ್ತು. ಕೆಲವರಾದರೂ  ಬರೆದಿದ್ದಕ್ಕೆ ಓಪನ್ ಮಾಡುವ ಸಾಹಸ ಮಾಡುತ್ತಿದ್ದರು. ಈಗ ನೋಡಿ, ಯಾರೂ ಸಹ ಇಲ್ಲಿ ತನಕ ಅದನ್ನು ಒಡೆಯುವ, ಓಪನ್ ಮಾಡುವ ಸಾಹಸ ಮಾಡಿಲ್ಲ. ಸ್ಥಳೀಯರಾರೂ ಇಲ್ಲಿಗೆ ಬರೋಲ್ಲ. ನನ್ನ ವಿದ್ಯಾರ್ಥಿಗಳಿಗೆ ವೇಲ್ಸ್ ಭಾಷೆ ಬರೋಲ್ಲ. ಹೀಗಾಗಿ ಈ ಕಪಾಟು ಭದ್ರವಾಗಿದೆ’ ಎಂದು ದೀರ್ಘ ಸಮರ್ಥನೆ ನೀಡಿದ್ದರು.

ವೇಲ್ಸ್ ಮಂದಿ ಇಂಗ್ಲಿಷರನ್ನು, ಇಂಗ್ಲಿಷ್‌ನ್ನು ದ್ವೇಷಿಸಬಹುದು. ಆದರೆ ಇಂಗ್ಲಿಷರು ವೇಲ್ಸ್ ಭಾಷೆಯ ಪದಗಳನ್ನು ತಮ್ಮ ಭಾಷೆಗೆ ಸೇರಿಸಿಕೊಂಡುಬಿಟ್ಟಿದ್ದಾರೆ. cwtch ಎಂಬುದು ಇಂಗ್ಲಿಷ್  ಸೇರಿ ಕೊಂಡು ಬಿಟ್ಟದೆ. ಈ ಪ್ರಸಂಗವನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದು ನಿಮಗೆ ಅನಿಸಬಹುದು. ಅದ ಕ್ಕೊಂದು ಕಾರಣವಿದೆ. ಮೊನ್ನೆ ನಾನು ಆಫ್ರಿಕಾದ ರವಾಂಡಕ್ಕೆ ಹೋಗಿದ್ದೆ, ಪ್ರಧಾನಿ ನರೇಂದ್ರ ಮೋದಿ ಪ್ರವಾಸವನ್ನು ವರದಿ ಮಾಡಲೆಂದು. ಮೋದಿಯವರು ಸೆರೀನಾಕಿಗಾಲಿ ಎಂಬ ಹೊಟೇಲ್‌ನಲ್ಲಿ ತಂಗಿದ್ದರು. ನಾನು ಅದಕ್ಕೆ ತಾಕಿಕೊಂಡಿರುವ ಪಕ್ಕದ ಮೆರಿಯಟ್ ಹೊಟೇಲ್‌ನಲ್ಲಿ ತಂಗಿದ್ದೆ. ಎರಡನೇ ದಿನ ಲಿಫ್‌ಟ್ನಲ್ಲಿ ಹೋಗುವಾಗ ಸುಮಾರು 50-55 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಟೀ-ಷರ್ಟ್ ಮೇಲೆ Only few people know the exact meaning of cwtch!’’ ಎಂದು ಬರೆದಿತ್ತು.

ಆ ಸಾಲುಗಳನ್ನು ಓದುತ್ತಿದ್ದಂತೆ, ನನ್ನ ಮನಸ್ಸು ಇಪ್ಪತ್ತೊಂದು ವರ್ಷಗಳ ಹಿಂದೆ ಹೋಗಿ ನಿಂತಿತು. ಬಲ್‌ಬ್ನಲ್ಲಿ ಬೆಳಕು ಮೂಡಿದಂತಾಯಿತು!

ಆದರೆ ಆ ಮಹಿಳೆಗೆ, ನನಗೆ ಆ ವಾಕ್ಯದ ಅಥವಾ ಪದದ ಯಥಾವತ್ತು ಅರ್ಥ ಗೊತ್ತಿದೆ ಎಂದು ಹೇಗೆ ಹೇಳುವುದು ಎಂಬ ಜಿಜ್ಞಾಸೆ, ದ್ವಂಧ್ವ ಕಾಡತೊಡಗಿತು. ಹೇಳುವುದೋ, ಬಿಡುವುದೋ ಎಂಬ ತಾಕಲಾಟದಲ್ಲಿ ದ್ದಾಗ ಲಿಫ್‌ಟ್ ಬಾಗಿಲು ತೆರೆಯಿತು. ಅವಳು ಲಿಫ್‌ಟ್ನಿಂದ  ಹೆಜ್ಜೆ ಹಾಕಿದಳು. ನನ್ನ ರೂಮೂ ಅದೇ ಮಹಡಿಯಲ್ಲಿದ್ದುದರಿಂದ ನಾನು ಅವಳ ಹಿಂದೆ ಹೋದೆ.

‘ಮೇಡಂ ಎಕ್‌ಸ್ಕ್ಯೂಸ್ ಮೀ’, ಎಂದೆ.

ಅವಳು ತಟ್ಟನೆ ಹಿಂತಿರುಗಿ ನಿಂತಳು. “Are you from Wales?’ ಎಂದು ಕೇಳಿದೆ. ಅವಳಿಗೆ ಆ ಪ್ರಶ್ನೆ ತೀರಾ ಅನಿರೀಕ್ಷಿತವಾಗಿತ್ತು. ನಾನು ಬೇಕೆಂದೇ ‘ನಿಮ್ಮ ಟೀ-ಷರ್ಟಿನ ಮೇಲೆ ಬರೆದಿರುವ ಆ ಪದದ ಅರ್ಥ ನನಗೆ ಗೊತ್ತಿದೆ’ ಎಂದು ಹೇಳದೇ ಆ ಪ್ರಶ್ನೆ ಕೇಳಿದ್ದೆ.

ಅವಳ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ  ಇತ್ತು. ಅಪರಿಚಿತ ಮಹಿಳೆಯನ್ನು ಹಾಗೆ ಮಾತಾಡಿಸಬಾರದಿತ್ತಾ ಎಂಬ ಪ್ರಶ್ನೆ ನನ್ನಲ್ಲಿಯೂ ಮಿಂಚಿನಂತೆ ಹಾದು ಹೋಯಿತು. ಆದರೆ ಪ್ರಶ್ನೆಯನ್ನಂತೂ ಕೇಳಿದ್ದರಿಂದ ಅವಳನ್ನು ಎದುರಿಸಲೇಬೇಕಿತ್ತು.Are you from Wales?’’ ಎಂದು ಮತ್ತೊಮ್ಮೆ ಕೇಳಿದೆ. ಅದಕ್ಕೆ ಆಕೆ ತುಸು ನಗು ಮೊಗದಿಂದ, ‘ಹೌದು, ಅದು ನಿಮಗೆ ಹೇಗೆ ಗೊತ್ತಾಯಿತು?’ ಎಂದು ಕೇಳಿದಳು.

ಆಗ ನಾನು ಸ್ವಲ್ಪ ಧೈರ್ಯ ತಂದುಕೊಂಡು ‘ಈಗ ಹೇಳುತ್ತೇನೆ. ನಿಮ್ಮ ಟೀ-ಷರ್ಟ್ ಮೇಲೆ ಬರೆದ ವಾಕ್ಯದ ಅರ್ಥ ನನಗೆ I know the exact
meaning of cwtch’ ಎಂದೆ. ‘ಹೌದಾ?! ನಿಮಗೆ ಗೊತ್ತಾ? ಏನು? ಹೇಳಿ?’ ಎಂದಳು. ನಾನು ಎಲ್ಲವನ್ನೂ ಹೇಳಿದೆ. ಈ ಪದ ನನ್ನಲ್ಲಿ ಹುಟ್ಟಿಸಿದ ಕುತೂಹಲ, ಪ್ರಸಂಗ,.. ಎಲ್ಲವನ್ನೂ ಅವಳಿಗೆ ಆ ಹೊಟೇಲ್‌ನ ಕಾರಿಡಾರ್‌ನಲ್ಲಿ ನಿಂತು ವಿವರಿಸಿದೆ.

ಅವಳಿಗೆ ಬಹಳ ಸಂತೋಷವಾಯಿತು. ‘ನಾನು ಈ ಟೀ-ಷರ್ಟ್‌ನ್ನು ಎರಡು ವರ್ಷಗಳಲ್ಲಿ ಹತ್ತಾರು ಸಲ ಧರಿಸಿರಬಹುದು. ಆದರೆ ಒಬ್ಬರೇ ಒಬ್ಬರೂ ನನಗೆ ಅರ್ಥ ಗೊತ್ತಿದೆ ಎಂದು ಹೇಳಲಿಲ್ಲ.  ಗೊತ್ತಿದ್ದ ವರೂ ಹೇಳಲಿಲ್ಲವಾ, ಗೊತ್ತಿಲ್ಲ. ಅಂತೂ ಯಾರೂ ಹೇಳಲಿಲ್ಲ. ಈ ಸಾಲಿನ, ಈ ಪದದ ಸರಿಯಾದ ಅರ್ಥ ಹೇಳಿದವರು ನೀವೊಬ್ಬರೇ. ನನಗೆ ತುಂಬಾ ತುಂಬಾ ಸಂತೋಷವಾಗುತ್ತಿದೆ. ಅದರಲ್ಲೂ ನೀವು ನಮ್ಮೂರಿನಲ್ಲಿ ಓದಿದವರು ಎಂದು ತಿಳಿದು ಮತ್ತಷ್ಟು ಆನಂದ ವಾಗುತ್ತಿದೆ. I really want to cwtch you ಎಂದು ನನ್ನನ್ನು ಆಲಂಗಿಸಿಕೊಂಡಳು. ಅದಕ್ಕೆ ನಾನು “This is hugging. Not cwtch ಎಂದೆ. ಅದಕ್ಕೆ ನಾವಿಬ್ಬರೂ ಜೋರಾಗಿ ಒಂದೇ  ನಕ್ಕೆವು.

ರವಾಂಡಾಕ್ಕೆ ತಾನು ಬಂದ ಉದ್ದೇಶ ಹೇಳಿದಳು. ‘ಓಹೋ ನೀವು ರವಾಂಡದ ಗೊರಿಲ್ಲಾಗಳ ಚಾರಣಕ್ಕೆ ಬಂದಿದ್ದೀರಾ? ನಾನು ಈ ಕುರಿತು ಒಂದು ಪುಸ್ತಕ (ಗೊರಿಲ್ಲಾ ನಾಮಕರಣ ಪ್ರಸಂಗ) ಬರೆದಿದ್ದೇನೆ’ ಎಂದೆ ಅವಳಿಗೆ ಮತ್ತಷ್ಟು ಸಂತಸವಾಯಿತು. ರೂಮಿಗೆ ಹೋಗಿ ಒಂದು ಪ್ರತಿಯನ್ನು ತಂದು ಅವಳಿಗೆ ಕೊಟ್ಟೆ. ಇಬ್ಬರೂ ವಿಸಿಟಿಂಗ್ ಕಾರ್ಡ್ ವಿನಿಮಯ ಮಾಡಿಕೊಂಡೆವು.  ಎಂದೋ ನೋಡಿದ, ತಿಳಿದುಕೊಂಡ ಒಂದು ಪದ ಇಷ್ಟೆಲ್ಲ ಮಾಡಿಸಿತ್ತು!

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close