ಜನ ನನ್ನ ಕೈ ಬಿಡಲಿಲ್ಲ : ಕುಮಾರ್ ಬಂಗಾರಪ್ಪ

Posted In : ರಾಜ್ಯ

ಸೊರಬ: ನಮ್ಮ ತಂದೆ ಎಸ್.ಬಂಗಾರಪ್ಪ ಅವರು ಅಂದು ನನ್ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದಿದ್ದರು. ಅಂತೆಯೇ ತಾಲೂಕಿನ ಜನ ನನ್ನ ಕೈ ಬಿಡಲಿಲ್ಲ ಎಂದು ಕುಮಾರ್ ಬಂಗಾರಪ್ಪ ಅವರು  ಶಾಸಕರಾಗಿ ಆಯ್ಕೆಯಾದ ಹಿನ್ನಲೆ ಅಪಾರ ಸಂಖ್ಯೆಯ ಮುಖಂಡರು ಹಾಗು ಕಾರ್ಯಕರ್ತರೊಂದಿಗೆ ಪಟ್ಟಣದ ಮಾರಿಕಾಂಬ ದೇವಸ್ಥಾನದಿಂದ ರಂಗನಾಥ ದೇವಸ್ಥಾನದವರೆಗೆ ತೆರೆದ ವಾಹನದಲ್ಲಿ ವಿಜಯೋತ್ಸವ ಆಚರಿಸಿ ಮಾತನಾಡಿದ ಅವರು, ನನ್ನ ಗೆಲುವು ಕಾರ್ಯಕರ್ತರು ಹಾಗೂ ಪಕ್ಷದ ಗೆಲುವಾಗಿದ್ದು ನಾನು ಈ ಗೆಲುವನ್ನು ಅವರಿಗೆ ಸಮರ್ಪಿಸುತ್ತೆನೆ ಎಂದರು.

ತಾಲೂಕಿನ ಜನರ ಆಶಯದಂತೆ ನಿರಾವರಿ ಯೋಜನೆಗಳ ಅನುಷ್ಠಾನ, ರಸ್ತೆ ಹಾಗೂ ಉನ್ನತ ಶಿಕ್ಷಣಕ್ಕೆ ಮೊದಲು ಆದ್ಯತೆ ನಿಡಲಾಗುವುದು. ಈ ಹಿಂದೆ ಇದ್ದ ಶಾಸಕರ ತಾಲೂಕನ್ನು ಹಾಗಾಗಿ ಇಲ್ಲಿ ಸಮಗ್ರ ಅಭಿವೃದ್ಧಿ ಮಾಡಬೇಕಿದೆ ಮಾಜಿ ಶಾಸಕರು ದುರಾಡಳಿತಕ್ಕೆ ಅಂತ್ಯ ಹಾಡಿ ಕ್ಷೇತ್ರದ ಜನ ಈ ಚುನಾವಣೆಯಲ್ಲಿ ಸ್ಪಷ್ಠ ಬಹುಮತದಿಂದ ಗೆಲ್ಲಿಸಿದ್ದಾರೆ. ತಾಲೂಕಿನ ಜನರ ಸೇವೆಗಾಗಿ ನಾನು ತಾಲೂಕಿನಲ್ಲೆ ಉಳಿದು ಶ್ರಮಿಸುತ್ತೇನೆ ಎಂದರು.

ಮೆರವಣಿಗೆ ಉದ್ದಕ್ಕು ಕಾರ್ಯಕರ್ತರು ಕುಮಾರ್ ಬಂಗಾರಪ್ಪ ಅವರು ಗೆಲುವು ಸಂಭ್ರಮಿಸುತ್ತ ಜಯಘೋಷಗಳೊಂದಿಗೆ ಪಟಕಿಸಿಡಿಸುತ್ತ, ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಇನ್ನು ಕೆಲವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಬಾವುಟ ಹಿಡಿದು ಬೈಕ್  ರ‍್ಯಾಲಿ ಈ ವೇಳೆಯಲ್ಲಿ ಕುಮಾರ್ ಬಂಗಾರಪ್ಪ ಅವರು ಕಾರ್ಯಕರ್ತರಿಗೆ ಅಶ್ವಮೇದ ಚಿತ್ರದ ಹಾಡು ಹೇಳಿ ರಂಜಿಸಿದರು.

Leave a Reply

Your email address will not be published. Required fields are marked *

2 + eighteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top