About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕುಮಾರ್‌ ಬಂಗಾರಪ್ಪ ಯೂಸ್‌ಲೆಸ್ ಫೆಲೋ: ಡಿ.ಸಿ. ಗೌರಿಶಂಕರ್

ತುಮಕೂರು: ಸಿಎಂ ಕುಮಾರಸ್ವಾಮಿ ವಿರುದ್ಧ ಮಿ ಟೂ ಆರೋಪ ಮಾಡಿರುವ ಕುಮಾರ್‌ ಬಂಗಾರಪ್ಪ ಯೂಸ್‌ಲೆಸ್ ಫೆಲೋ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಹರಿಹಾಯ್ದರು.

ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಯ ಎಲ್ಲ ಕ್ಷೇೇತ್ರಗಳಲ್ಲೂ ನಾವೇ ಗೆಲುವು ಸಾಧಿಸಲಿದ್ದೇೇವೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಸಿಎಂ ಬಂಗಾರಪ್ಪನವರ ಹೆಸರು ಅಜರಾಮರವಾಗಿದೆ. ಕುಮಾರಸ್ವಾಮಿ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಅಪ್ಪ ನಿಲ್ಲುವುದು ಗೆದ್ದ ನಂತರ ರಾಜೀನಾಮೆ ನೀಡುವುದು. ಪುನಃ ಮಗ ನಿಲ್ಲುವುದನ್ನು ನೋಡಿ ಮತದಾರರಿಗೆ ಬೇಸರವಾಗಿದೆ. ಯಡಿಯೂರಪ್ಪ ಪುತ್ರ ರಾಘವೇಂದ್ರರ ನಾಟಕವನ್ನು ಜನ ನೋಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮಧು ಬಂಗಾರಪ್ಪ ವಿಧಾನಸಭೆ ಕ್ಷೇತ್ರದಲ್ಲಿ ಸೋತಿದ್ದರು. ಹಾಗಾಗಿ ಮತದಾರರ ಅನುಕಂಪದಿಂದ ಉಪ ಚುನಾವಣೆಯಲ್ಲಿ ಮತ್ತೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close