About Us Advertise with us Be a Reporter E-Paper

ರಾಜ್ಯ

ಜುಲೈ 19 ಕ್ಕೆ  ಕೊಡಗಿಗೆ  ಕುಮಾರಸ್ವಾಮಿ – ಜು.20 ರಂದು ಕಾವೇರಿಗೆ ಪೂಜೆ. 

ಅನಿಲ್‌ ಎಚ್‌.ಟಿ ಕೊಡಗು
ಫೈಲ್ ಚಿತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತಲಿನ ಹೋಂಸ್ಟೇಗಳನ್ನು ಆಗಸ್ಟ್ 2 ರೊಳಗಾಗಿ ನೋಂದಣಿ ಮಾಡಿಕೊಳ್ಳದಿದ್ದಲ್ಲಿ ಅಂಥ ಹೋಂಸ್ಟೇಗಳ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಎಚ್ಚರಿಸಿದ್ದಾರೆ. ಇದೇ ಗುರುವಾರ ಮಡಿಕೇರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ತಲಕಾವೇರಿಗೆ ತೆರಳಿ ಕಾವೇರಿಗೆ ಪೂಜೆ ಸಲ್ಲಿಸಲಿರುವುದಾಗಿಯೂ ಸಚಿವರು ಮಾಹಿತಿ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್, ಕೊಡಗಿನಲ್ಲಿ ನೂರಾರು ಹೋಂಸ್ಟೇಗಳಿದ್ದರೂ ಈವರೆಗೆ ಕೇವಲ 200 ಹೋಂಸ್ಟೇಗಳು ಮಾತ್ರ ಅಧಿಕೖತವಾಗಿ ನೋಂದಣಿಯಾಗಿದೆ. ಆಗಸ್ಟ್ 2 ರೊಳಗಾಗಿ ನೋಂದಾಯಿಸಲ್ಪಡದ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಬೇಕೆಂದು ಆದೇಶಿಸಿದರು.  ಕೊಡಗಿನ ಹೋಂಸ್ಟೇಗಳು ಭದ್ರತೆ ಮತ್ತು ನೈಸಗಿ೯ಕ ಸ್ವಚ್ಚತೆ ದೖಷ್ಟಿಯಿಂದ  ಕಡ್ಡಾಯವಾಗಿ ಸೆಪ್ಟಿಕ್ ಟ್ಯಾಂಕ್ ನಿಮಿ೯ಸಿಕೊಂಡಿರಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದರು.
ಮಡಿಕೇರಿಯಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾಟ್೯ ನ ನೂತನ ರೆಸಾಟ್೯ ಪ್ರಾರಂಭಿಸುವ ಯೋಜನೆಯಿದೆ ಎಂದೂ ಹೇಳಿದ ಸಚಿವರು, ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
8 ಕೋಟಿ ರು. ವೆಚ್ಚದಲ್ಲಿ ನಿಮಿ೯ಸಲ್ಪಟ್ಟ ಹಾರಂಗಿಯಲ್ಲಿನ ಸಂಗೀತ ಕಾರಂಜಿ ಸಮಪ೯ಕವಾಗಿ ಕಾಯ೯ನಿವ೯ಹಿಸದ ಬಗ್ಗೆ ಗಮನ ಸೆಳೆದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೂಡಲೇ ಈ ಬಗ್ಗೆ ಸಂಬಂಧಿಸಿದ ನೀರಾವರಿ ಇಲಾಖಾಧಿಕಾರಿಗಳೊಂದಿಗೆ ಚಚಿ೯ಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದುಬಾರೆಯಲ್ಲಿ ರ್ಯಾಫ್ಟಿಂಗ್ ಸ್ಥಗಿತಗೊಂಡಿರುವ ಬಗ್ಗೆಯೂ ಪ್ರಸ್ತಾಪಿಸಿದ ಸಚಿವರು, ಪ್ರವಾಸೀ ತಾಣ ಎಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳಿರುತ್ತವೆ. ಹೀಗಿರುವಾಗ ರ್ಯಾಫ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದವರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ಹೇಳಿದರು.
ರಾಜ್ಯ ಬಜೆಟ್ ನಲ್ಲಿ ಕೊಡಗಿನ ಪ್ರವಾಸೋದ್ಯಮಕ್ಕೆ ಯಾವುದೇ ಅನುದಾನ ನೀಡದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ.ಮಹೇಶ್, ಬಜೆಟ್ ನಲ್ಲಿ ನೀಡಿರುವುದಕ್ಕಿಂತ ಹೆಚ್ಚುವರಿಯಾಗಿ 700 ಕೋಟಿ ರು.ಗಳು ಇಲಾಖೆಯಲ್ಲಿದೆ. ಇದನ್ನು ಖಂಡಿತಾ ಕೊಡಗು ಪ್ರವಾಸೋದ್ಯಮಕ್ಕೆ ಸಮಪ೯ಕವಾಗಿ ಬಳಸಿಕೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳು ಕೂಡ ಪ್ರವಾಸೋದ್ಯಮ ಬೆಳವಣಿಗೆಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ರಾಜ್ಯದ ಪ್ರವಾಸಿ ತಾಣಗಳು ಸಾಕಷ್ಟು ಅಭಿವೖದ್ದಿಗೊಳ್ಳುವಂಥ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಕೊಡಗಿನ ಮೂಲಕ ಕೇರಳಕ್ಕೆ ರೈಲು ಮಾಗ೯ ಯೋಜನೆಗೆ ಖಂಡಿತಾ ಅವಕಾಶವನ್ನು ರಾಜ್ಯ ಸಕಾ೯ರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಾ.ರಾ.ಮಹೇಶ್,  ಹೀಗಿದ್ದರೂ ಕೇರಳದಿಂದ ಸವೇ೯ ಕಾಯ೯ಕ್ಕೆ ಯಾರಾದರೂ ಕೊಡಗಿಗೆ ಕಾಲಿಟ್ಟರೆ ನಿಧಾ೯ಕ್ಷಿಣ್ಯವಾಗಿ ಅಂಥವರ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.  ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಹ್ಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅದ್ಯಕ್ಷ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಶ್ರೀವಿದ್ಯಾ ಸುದ್ದಿಗೋಷ್ಟಿಯಲ್ಲಿದ್ದರು
Tags

Related Articles

Leave a Reply

Your email address will not be published. Required fields are marked *

Language
Close