About Us Advertise with us Be a Reporter E-Paper

Breaking Newsದೇಶಪ್ರಚಲಿತ

ಏಳು ಬೀಳುಗಳ ನಡುವೆಯೂ ಕುಮಾರಸ್ವಾಮಿ ಶತಕ!

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಇಂದಿಗೆ ನೂರು ದಿನ ಪೂರೈಸಿದ್ದಾರೆ.

ಕಳೆದ ಚುನಾವಣಾ ಫಲಿತಾಂಶದಲ್ಲಿ, 104 ಸೀಟುಗಳನ್ನು ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು 78 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಹಾಗೂ 37 ಸ್ಥಾನ ಗೆದ್ದ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತ್ತು. ದೋಸ್ತಿಗಳ ತಿಕ್ಕಾಟದ ನಡುವೆಯೂ ಕುಮಾರಸ್ವಾಮಿ ಸಮಾಧಾನಕರ ನೂರು ದಿನಗಳನ್ನು ಪೂರೈಸಿದ್ದಾರೆ.

ಅಧಿಕಾರಕ್ಕೆ ಬಂದ  ಇಪ್ಪತ್ತನಾಲ್ಕು ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದ ಕುಮಾರಸ್ವಾಮಿ, ತಮ್ಮ ಮೊದಲ ಬಜೆಟ್ ನಲ್ಲಿ ಪೂರ್ಣ ಸಾಲ ಮನ್ನಾ ಮಾಡದೆ ಟೀಕೆಗೆ ಒಳಗಾಗಿದ್ದರು. ಮೈತ್ರಿ ಸರಕಾರದ ಅನಿಶ್ಚಿತತೆ ನಡುವೆಯೇ ರೈತರು ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರ, ಖಾಸಗಿ ಲೇವಾದೇವಿ ಮಾಫಿಯಾ, ಬಡ್ಡಿ ಮಾಫಿಯಾದಿಂದ ಜನರನ್ನು ರಕ್ಷಿಸುವ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದ್ದಾರೆ ಕುಮಾರಸ್ವಾಮಿ

ಅಧಿಕಾರಕಕ್ಕೆ ಬಂದ ಬಳಿಕ ದೇವಸ್ಥಾನಗಳನ್ನು ಸುತ್ತುವ ಮೂಲಕ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸರಕಾರ ಟೇಕಾಫ್‌ ಆಗಿಲ್ಲ ಎಂಬ ದೂರು, ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲ ಎಂಬ ಆಕ್ಷೇಪ ಒಂದೆಡೆಯಾದರೆ, ಕೊಡಗಿನ ಅತಿವೃಷ್ಟಿಯ ಅನಾಹುತ, ಹಲವು ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದ ಸೃಷ್ಟಿಯಾದ ಬರದ ಛಾಯೆ ಪ್ರಕೃತಿಯ ಮುನಿಸಿನ ರೂಪದಲ್ಲಿ ಕುಮಾರಸ್ವಾಮಿ ಅವರಿಗೆ ಸವಾಲಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close