ವಿಶ್ವವಾಣಿ

ಕುಮಾರಸ್ವಾಮಿ ಕಣ್ಣೀರು ಬಲಹೀನತೆಯಲ್ಲ!

ಒಂದೆಡೆ ರಾಜ್ಯಾದ್ಯಂತ ಮಳೆ. ಈಗಾಗಲೇ ಶೇ. 70ರಷ್ಟು ಹೆಚ್ಚು ಮಳೆ ಸುರಿದಿದೆಯಂತೆ. ಎಲ್ಲಾ ಜಲಾಶಯಗಳೂ ಭರ್ತಿ. ಕೆಆರ್‌ಎಸ್‌ನ ಎಲ್ಲಾ ಗೇಟುಗಳನ್ನೂ ತೆರೆಯಲಾಗಿದೆ. ರಾಜ್ಯದ ಎಲ್ಲ ಜಲಪಾತಗಳೂ ಫುಲ್. ಮೈದುಂಬಿ ಹರಿಯುತ್ತಿವೆ. ಪತ್ರಿಕೆಗಳಲ್ಲಿ ಬರೀ ಮಳೆಯ ಚಿತ್ರಗಳೇ. ಇಷ್ಟೂ ಸಾಲದೆಂಬಂತೆ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಬೇರೆ. ಅದನ್ನು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಅತ್ಯಂತ ಮಾರ್ಮಿಕವಾಗಿ ‘ಕುಮಾರಧಾರ’ ಎಂದು ಬರೆದಿರುವುದು ಸಮಂಜಸ.  ರಾಜ್ಯದಲ್ಲಿ, ದೇಶದಲ್ಲಿ ಈ ಮಳೆ, ನೀರು, ಕಣ್ಣೀರಿನದೇ ಸುದ್ದಿ. ಕುಮಾರಸ್ವಾಮಿ ಅತ್ತಿದ್ದು ದೇಶದ ಎಲ್ಲಾ ಟಿವಿ ಚಾನೆಲ್‌ಗಳು ಪದೇ ಪದೆ ತೋರಿಸಿದವು. ಕನ್ನಡದ ಚಾನೆಲ್‌ಗಳನ್ನು ಬಿಡಿ, ಅವಂತೂ ಗಂಟೆಗಟ್ಟಲೆ ಚರ್ಚೆ ಮಾಡಿದವು. ಕುಮಾರಸ್ವಾಮಿ ಅವರಿಗೆ ತಮ್ಮ ಕಣ್ಣೀರಿಗೂ ಇಷ್ಟು ಬೆಲೆ ಇದೆಯಾ ಎಂದು ಗೊತ್ತಿರಲಿಲ್ಲವೇನೋ?

ಕುಮಾರಸ್ವಾಮಿ ಕಣ್ಣೀರು ಹಾಕಿದ್ದಕ್ಕೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಒಬ್ಬ ಮುಖ್ಯಮಂತ್ರಿಯಾಗಿ ಅಳುವುದು ಎಷ್ಟು ಸರಿ. ಮುಖ್ಯಮಂತ್ರಿಯೇ ಅತ್ತರೆ ಸಾಮಾನ್ಯ ಜನರೇನು ಮಾಡಬೇಕು. ಅವರು  ಸಮಸ್ಯೆ, ದುಃಖವನ್ನು ಯಾರ ಮುಂದೆ ತೋಡಿಕೊಳ್ಳಬೇಕು. ಗಂಡಸರು ಅಳಬಾರದು, ಗಂಡಸಿನ ಮುಖಕ್ಕೆ ಅಳು ಶೋಭೆ ಅಲ್ಲ. ಕುಮಾರಸ್ವಾಮಿ ಅತ್ತು ನಾಟಕ ಮಾಡಿದರು. ಗೌಡರ ಕುಟುಂಬಕ್ಕೆ ಕಣ್ಣೀರು ಭಾವನೆಯಲ್ಲ ಅದೊಂದು ಅಸ್ತ್ರ, ದೇವೇಗೌಡರು ಆಗಾಗ ಅಳುವುದಿಲ್ಲವೇ? ಹೀಗೆ ಅನೇಕ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಂತೂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಕಾರಣವೆಂದು ಜರೆದಿದ್ದಾರೆ. ಮಿತ್ರಪಕ್ಷಗಳ ನಾಯಕರಿಗೆ ಕಣ್ಣೀರು ಹಾಕಿಸುವುದು ಕಾಂಗ್ರೆಸ್‌ಗೆ ಹೊಸದೇನಲ್ಲ. ಚರಣ್‌ಸಿಂಗ್, ಚಂದ್ರಶೇಖರ, ದೇವೇಗೌಡ, ಐ.ಕೆ.  ಮುಂತಾದ ನಾಯಕರಿಗೂ ಕಾಂಗ್ರೆಸ್ ಕಣ್ಣೀರು ಹಾಕಿಸಿದೆ. ಕುಮಾರಸ್ವಾಮಿ ಅದರ ಮುಂದುವರಿದ ಭಾಗ ಎಂದು ಜೇಟ್ಲಿ ಹೇಳಿದ್ದಾರೆ.

‘ಮಗ ಮಾತ್ರ ಚೆನ್ನಾಗಿರಬೇಕು’ ಅಂದ್ರೆ ಹೇಗೆ? ಮದುವೆ ಮಾಡಿಕೊಟ್ಟ ಅಳಿಯನೂ ಚೆನ್ನಾಗಿರಬೇಡವೇ ದೇವೇಗೌಡರೇ? ರಾಜ್ಯದ ರೈತರ ಕಣ್ಣೀರು ಒರೆಸುವುದನ್ನು ಬಿಟ್ಟು ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡು ಅಷ್ಟಕ್ಕೂ ನಾವು ಕುಮಾರಸ್ವಾಮಿಗೆ ವಿಷ ಕೊಟ್ಟಿದ್ದೇವಾ? ಅಧಿಕಾರವೆಂಬ ಅಮೃತ ಕೊಟ್ಟಿದ್ದೇವೆ. ಪ್ರಮುಖ ಖಾತೆಗಳನ್ನು ಕೊಟ್ಟಿದ್ದೇವೆ. ಆದರೂ ಅವರು ಕಣ್ಣೀರು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್  ತಿವಿದಿದ್ದಾರೆ.

ಒಂದಂತೂ ನಿಜ, ಕುಮಾರಸ್ವಾಮಿ ಅತ್ತಿದ್ದಕ್ಕೆ ಎಲ್ಲರೂ ಜರೆಯುತ್ತಿದ್ದಾರೆ. ಬಿಜೆಪಿಯವರಂತೂ ಟೀಕಿಸಲೇಬೇಕು, ಟೀಕಿಸುತ್ತಿದ್ದಾರೆ. ಸರಕಾರಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ಸಹ ಕುಮಾರಸ್ವಾಮಿಯವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ಸೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹೀಗಾಗಿ ಕಾಂಗ್ರೆಸ್ ನಾಯಕರು ಟೀಕಿಸುವುದು ಸಹಜ. ವಿಚಿತ್ರ ಅಂದ್ರೆ ಕುಮಾರಸ್ವಾಮಿಯವರ ಜೆಡಿಎಸ್‌ಗೂ ಅವರ ನಡೆಯನ್ನು ಸಮರ್ಥಿಸಿಕೊಳ್ಳುವುದು ಕಷ್ಟವೇ. ಭಾವನಾತ್ಮಕವಾಗಿ ಈ ನಡೆಯನ್ನು ಸಮರ್ಥಿಸಿಕೊಂಡರೂ, ರಾಜಕೀಯವಾಗಿ ಸಮರ್ಥಿಸಿಕೊಳ್ಳುವುದು ಕಷ್ಟ. ಈ ನಡೆ  ಬೇರೆ ಸಂದೇಶಗಳನ್ನೇ ಕಳುಹಿಸುತ್ತದೆ. ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನಂತೂ ಕಳಿಸಿಯೇ ಕಳಿಸುತ್ತದೆ. ಕುಮಾರಸ್ವಾಮಿ ಅವರು ತಮ್ಮ ಕಣ್ಣೀರಿಗೆ ಬೇರೆ ಕಾರಣಗಳನ್ನು ಕೊಟ್ಟಿದ್ದಾರೆ.

‘ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ಸಿನವರು ನೋವು ಕೊಡುತ್ತಿದ್ದಾರೆಂದು ನಾನು ಕಣ್ಣೀರಿಟ್ಟಿಲ್ಲ, ಸಾರ್ವಜನಿಕ ವಲಯದಿಂದ ಬೆಂಬಲ ಸಿಗುತ್ತಿಲ್ಲವೆಂಬ ನೋವಿಗೆ ಕಣ್ಣೀರಿಟ್ಟಿದ್ದೇನೆ. ಅದನ್ನು ಮಾಧ್ಯಮದವರು ತಿರುಚಿ ತಪ್ಪು ಸಂದೇಶ ನೀಡಿರುವುದು ಸರಿಯಲ್ಲ ಎಂದು ಸ್ವತಃ ಕುಮಾರಸ್ವಾಮಿ ಅವರು ಇದಕ್ಕೆ ಸಮರ್ಥನೆ ಸ್ಪಷ್ಟನೆ ನೀಡಿದ್ದಾರೆ. ಅವರು ಅಧಿಕಾರಕ್ಕೆ ಬಂದು  ಎರಡು ತಿಂಗಳು ಆಗಿಲ್ಲ. ಈಗಲೇ ಸಾರ್ವಜನಿಕ ವಲಯದಿಂದ ಯಾವ ರೀತಿಯ ಬೆಂಬಲವನ್ನು ಅವರು ನಿರೀಕ್ಷಿಸಿದ್ದರೋ ಏನೋ? ಅದನ್ನು ಅವರು ಹೇಳಿದ್ದಿದ್ದರೆ ನಂಬಬಹುದಿತ್ತು. ಮೂವತ್ತೇಳು ಸ್ಥಾನ ಸಿಕ್ಕರೂ ಮುಖ್ಯಮಂತ್ರಿಯಾಗಿದ್ದಕ್ಕೆ ಅವರು ಸಂತೋಷಪಡಬೇಕೇ ಹೊರತು ಕಣ್ಣೀರು ಹಾಕುವಂಥದ್ದನ್ನು ಈ ರಾಜ್ಯದ ಜನ ಅವರಿಗೇನು ಮಾಡಿದ್ದಾರೆ? ಹಾಗೆ ನೋಡುವುದಾದರೆ, ಅಳಬೇಕಾದವರು ಯಡಿಯೂರಪ್ಪನವರು. ಅತಿ ಹೆಚ್ಚು ಸ್ಥಾನ ಪಡೆದ ಪಕ್ಷದ ನಾಯಕನಾಗಿಯೂ ಅವರು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದಾರೆ. ಅದೇ ಅವರು ಕಣ್ಣೀರು ಹಾಕದೇ, ಎಂದಿನಂತೆ

ಒಟ್ಟಾರೆಯಾಗಿ ಕುಮಾರಸ್ವಾಮಿ ಅವರ ನಡೆ ಸಾರ್ವಜನಿಕ ಟೀಕೆಗೆ, ಚರ್ಚೆಗೆ ಗುರಿಯಾಗಿರುವುದಂತೂ ಸುಳ್ಳಲ್ಲ.

ಆದರೆ ನಾನು ಈ ಪ್ರಸಂಗವನ್ನು ಬೇರೆಯ ಆಯಾಮ, ಕೋನದಿಂದಲೇ ನೋಡಲು ಬಯಸುತ್ತೇನೆ. ಕಾರಣ ಈ ಘಟನೆಗೆ ಇರುವ ಅಂಥ ಕೋನವನ್ನು ಯಾರೂ ಗಮನಿಸುವುದೇ ಇಲ್ಲ. ಅದೇನೆಂದರೆ, ಕಣ್ಣೀರು ದೌರ್ಬಲ್ಯವಲ್ಲ. ಅದು ಬಲಹೀನತೆಯೂ ಅಲ್ಲ. ಅದು ನಾಟಕವೂ ಅಲ್ಲ.

ನಗು, ಸಂತಸ, ಕೇಕೆಯಂತೆ ಕಣ್ಣೀರು ಸಹ ಒಂದು ಭಾವನೆ. ಇದು ಕೇವಲ ಹೆಂಗಸರಿಗೆ ಮಾತ್ರ ಮೀಸಲಾದದ್ದಲ್ಲ. ಗಂಡಸರೂ  ಯಾರಿಗೆ ಭಾವನೆ ಇರುತ್ತದೋ, ಅಂತಃಕರಣ ಇರುತ್ತದೋ ಅವರೆಲ್ಲರೂ ಅಳುತ್ತಾರೆ. ಅವರು ಗಂಡಸರೇ ಆಗಬಹುದು, ಹೆಂಗಸರೇ ಆಗಬಹುದು. ಕಣ್ಣೀರು ಯಾರೊಬ್ಬರ ಸ್ವತ್ತಲ್ಲ. ಭಾವನೆಗಳ ಕಟ್ಟಿಯೊಡೆದಾಗ ಕಣ್ಣೀರು ಉಕ್ಕುವುದು ಸಹಜ. ಕಣ್ಣೀರು ದೌರ್ಬಲ್ಯದ ಸಂಕೇತ ಅಲ್ಲ. ಅದು ನಮ್ಮ ಭಾವನೆಯ ದ್ಯೋತಕ. ಭಾವದ ಪ್ರದರ್ಶನ. ಅಳು ನಾಟಕ ಅಲ್ಲ. ಅದು ಕರೆದಾಗ ಬರುವಂಥದ್ದಲ್ಲ. ಕಣ್ಣೀರಿಲ್ಲದೇ ಅಳುವುದು ನಾಟಕ, ಪ್ರದರ್ಶನ. ಅದಕ್ಕೆ ಮೊಸಳೆ ಕಣ್ಣೀರು ಅಂತಾರೆ. ಆದರೆ ಭಾವನೆಯ ಬೆಂಬಲವಿಲ್ಲದೇ ಕಣ್ಣೀರು ಹಾಕುವುದು  ಸುಮ್ಮಸುಮ್ಮನೆ ಕಣ್ಣೀರು ಬರುವುದಿಲ್ಲ. ಕಾರಣ ಭಾವನೆಯ ಕಟ್ಟೆ ಒಡೆದಾಗ ಮಾತ್ರ ಅದು ವ್ಯಕ್ತವಾಗುವಂಥದ್ದು.

ಇದು ಗಂಡಸರು ಹಾಗೂ ಹೆಂಗಸರಲ್ಲಿ ನಡೆಯುವ ಸಹಜ ಕ್ರಿಯೆ. ಅಳುವ ಗಂಡಸರನ್ನು ನಂಬಬಾರದು ಎಂದು ಯಾರು ಗಾದೆ ಬರೆದರೋ ಗೊತ್ತಿಲ್ಲ. ಪ್ರಾಯಶಃ ಅವರು ಕಠೋರ ವ್ಯಕ್ತಿಯೇ ಇರಬೇಕು. ಕಣ್ಣೀರು ಬತ್ತಿ ಹೋದವರೇ ಇರಬೇಕು. ಅಳುವ ಗಂಡಸರನ್ನು ನಂಬಬೇಕು. ಅಳದಿದ್ದವರನ್ನೇ ನಂಬಬಾರದು. ಏಕೆಂದರೆ ಅಳುವವರಲ್ಲಿ ಭಾವನೆಯಿದೆ, ಸಂವೇದನೆಯಿದೆ, ಅಂತಃಕರಣವಿದೆ, ಭಾವಾತೀರೇಕವಿದೆ. ಕಣ್ಣೀರ ಭಾವದ ಬೆಲೆ ಗೊತ್ತಿದೆ.  ಹೃದಯವಿದೆ. ಅಳದಿದ್ದವರನ್ನು ಹಿಂದಿಯಲ್ಲಿ ‘‘ಪತ್ಥರ್‌ದಿಲ್(ಕಲ್ಲುಹೃದಯ) ಅಂತ ಕರೆಯುತ್ತಾರೆ. ಭಾವನೆಗಳೆಲ್ಲ ಸತ್ತು ಹೋದವರ ಕಣ್ಣಲ್ಲಿ, ಕಣ್ಣೀರು ಸಹ ಬತ್ತಿ ಹೋಗಿರುತ್ತದೆ. ಸಂವೇದನೆಗಳೇ ಇಲ್ಲದವರ ಎದೆಯಲ್ಲಿ ಎಂಥ ವೇದನೆಯೂ ಮಿಡಿಯುವ ಭಾವನೆಯೇ ಇರುವುದಿಲ್ಲ. ಅಂಥವರು ಬೇರೆಯವರನ್ನು ಅಳುವಂತೆ ಮಾಡುತ್ತಾರೆ. ಆದರೆ ತಾವು ಮಾತ್ರ ಅಳುವುದಿಲ್ಲ ಏನೇ ಆದರೂ!

ನಮ್ಮನ್ನು ಆಳುವವರು ಆಳಬೇಕು ಮತ್ತು ಅಳಬೇಕು. ಆಳುವವರಿಗೆ ಅಳು ಗೊತ್ತಿಲ್ಲದಿದ್ದರೆ, ಕಣ್ಣೀರು ಬರದಿದ್ದರೆ, ಕಠೋರರಾಗುತ್ತಾರೆ. ಸಂವೇದನೆ ಕಳೆದುಕೊಳ್ಳುತ್ತಾರೆ. ಎಂಥ ದುಃಖಕರ ಸಂದರ್ಭದಲ್ಲಿ ಕಣ್ಣೀರೇ  ಅದು ಕ್ರೌರ್ಯದ ಸಂಕೇತ. ಪ್ರಾಣಿಯೂ ಕಣ್ಣೀರು ಹಾಕುತ್ತದೆ. ಕಾರಣ ಪ್ರಾಣಿಗಳಿಗೂ ಭಾವನೆಗಳಿವೆ. ಭಾವನೆಗಳೇ ಇಲ್ಲದವರು ಕಣ್ಣೀರುಗರೆಯಲಾರರು. ಕಂಬನಿ ಮಿಡಿಯಲಾರರು. ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿಯಾದವರು, ಅಮೆರಿಕದ ಪ್ರಧಾನಿಯಾದವರು ಭಾವನೆಗಳನ್ನು ಕಳೆದುಕೊಳ್ಳಬಾರದು. ಅಂದರೆ ಭಾವತೀವ್ರತೆಯ ಸಂದರ್ಭದಲ್ಲಿ ಹೃದಯ ಬಿಚ್ಚಿ ಅಳಬೇಕು. ಸಾರ್ವಜನಿಕವಾಗಿ ಅತ್ತರೆ ಬೇರೆ ಸಂದೇಶ ಹೋಗುವ ಸಾಧ್ಯತೆಯಿರುತ್ತದೆಂದು ಅಳದೇ ಇರಬಾರದು. ಅಷ್ಟಕ್ಕೂ ಅಳುವುದು ಬಲಹೀನತೆ ಅಲ್ಲ. ಅಳದಿರುವುದು ಅಸಂವೇದನಾಶೀಲತೆ ಸಂಕೇತ.

ಪ್ರಧಾನಿ ನರೇಂದ್ರ ಮೋದಿಯವರು ಒಂದೆರಡು ಸಂದರ್ಭಗಳಲ್ಲಿ ಭಾವನೆಯ  ಅತ್ತಿದ್ದಿದೆ. ಗೋವಾದಲ್ಲಿ ನೋಟು ಅಮಾನ್ಯೀಕರಣದ ನಂತರ ಸಾರ್ವಜನಿಕ ಸಭೆಯಲ್ಲಿ ಮಾತಾಡುವಾಗ ಅವರು ಇನ್ನೇನು ಅಳುತ್ತಾರೆ ಎನ್ನುವಾಗ ಕಷ್ಟಪಟ್ಟು ಕಟ್ಟಿಕೊಂಡರು. ದುಃಖವನ್ನು ನುಂಗಿಕೊಂಡರು. ಇಂಥದೇ ಸಂದರ್ಭದಲ್ಲಿ ಅಳಬೇಕು, ಅಳಬಾರದು ಎಂದೇನೂ ಇಲ್ಲ. ಅಷ್ಟಕ್ಕೂ ಕಣ್ಣೀರು ಕರೆದರೆ ಬರುವಂಥದ್ದಲ್ಲ. ಹೃದಯ ಮಾತಾಡಲಾರಂಭಿಸಿದಾಗ ಕಣ್ಣೀರನ್ನೇ ಕರೆಯುತ್ತದೆ. ಮನಸ್ಸು ಭಾರವಾದಾಗ, ಕಣ್ಣೀರ ಕಟ್ಟೆ ಒಡೆಯುತ್ತದೆ. ಅದೆಂಥ ಗಟ್ಟಿ ವ್ಯಕ್ತಿಯೇ ಇರಬಹುದು, ಅವನೊಳಗೊಬ್ಬ ಮಗು ಇರುವಂತೆ ಎಲ್ಲ ಕಠಿಣ ಹೃದಯಿಗಳಲ್ಲೂ, ಕಣ್ಣೀರೆಂಬ ಒರತೆ ಇದ್ದೇ ಇರುತ್ತದೆ.  ಇಲ್ಲದವರಲ್ಲಿ ಮಾತ್ರ ಇದು ಬತ್ತಿರುತ್ತದೆ ಅಷ್ಟೆ. ಅಷ್ಟಕ್ಕೂ ಮನುಷ್ಯರಾದವರೆಲ್ಲ ಈ ಜಗತ್ತಿಗೆ ಬರುವಾಗ ಅಳುತ್ತಲೇ ಬರುತ್ತಾರೆ, ಗಂಡಿರಬಹುದು, ಹೆಣ್ಣಿರಬಹುದು. ಬೈಬಲ್‌ನಲ್ಲಿ ಒಂದು ಮಾತಿದೆ-.Many see tears as proof that a man sensitive and humble and thus well-rounded’ಇಲ್ಲಿ ಗಂಡಸು ಅಳುವುದರ ಬಗ್ಗಯೇ ಪ್ರಸ್ತಾಪಿಸಲಾಗಿರುವುದನ್ನು ಗಮನಿಸಬೇಕು.

ಯುದ್ಧಕ್ಕೆ ಹೋಗುವ ಮುನ್ನ ಶರಣಾಗತಿಯ ಸಂಕೇತವಾಗಿ, ಧೈರ್ಯ ಕೊಡು ಎಂದು ಕೇಳಿಕೊಳ್ಳುವುದಕ್ಕಾಗಿ ಅವರೆಲ್ಲ(ಸೈನಿಕರು) ಅತ್ತರು ಎಂದು Old Testament ಯಲ್ಲಿ ಬರೆದಿದೆ. ಗಾಸ್ಪೆಲ್ ಬರಹಗಾರರು ಕಣ್ಣೀರುಗರೆಯುವುದನ್ನು ಶ್ರೇಷ್ಠ ಭಾವ ನಿವೇದನೆ ಎಂದು ಕರೆದಿದ್ದಾರೆ. ಇದನ್ನು ವಿವರಿಸುವಾಗ jesus wept ಎಂದು ಹೇಳುವುದುಂಟು. ಇದು ದೇವರ ಅಂತಃಕರಣ ಪ್ರದರ್ಶನ, ಬಲಹೀನತೆಯಲ್ಲ.

ಅಮೆರಿಕದ ರೆಡಿಯೋ ಪತ್ರಿಕೋದ್ಯಮದ ಜನಪ್ರಿಯ ವ್ಯಕ್ತಿ ವಾಲ್ಟರ್ ಕ್ರಾಂಕೈಟ್ ಹೆಸರನ್ನು ಕೇಳದವರಿಲ್ಲ. ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ ಸುದ್ದಿ ಬಿತ್ತರಿಸುವಾಗ ಕ್ರಾಂಕೈಟ್ ಗೆ ದುಃಖವನ್ನು ತಡೆಯಲು ಆಗಲೇ ಇಲ್ಲ. ಒಬ್ಬ ಸುದ್ದಿವಾಚಕನಾಗಿ ತಾನು ತನ್ನ ಭಾವನೆಗಳನ್ನು  ಯಾವ ಕಾರಣಕ್ಕೂ ಅಳಬಾರದು ಎಂದು ಆತ ಮನಸ್ಸು ಗಟ್ಟಿ ಮಾಡಿಕೊಂಡಿದ್ದ. ಆದರೆ ಸುದ್ದಿಯ ವಿವರ ನೀಡುತ್ತಿದ್ದಂತೆ ಅವನ ದನಿ ಕ್ಷೀಣಿಸಲಾರಂಭಿಸಿತು. ಕಣ್ಣಾಲಿಗಳು ತೇವವಾದವು. ಇನ್ನೇನು ಬಿಕ್ಕಿ ಬಿಕ್ಕಿ ಅಳಬೇಕೆನ್ನುವಷ್ಟರಲ್ಲಿ ಕಷ್ಟಪಟ್ಟು ನಿಯಂತ್ರಿಸಿಕೊಂಡ. ಆದರೆ ಅವರು ಸಣ್ಣದಾಗಿ ಬಿಕ್ಕಳಿಸುತ್ತಿದ್ದಾರೆಂಬುದು ಶ್ರೋತೃಗಳಿಗೆ ಗೊತ್ತಾಯಿತು.

ಅಮೆರಿಕಾದ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗಟನ್, ಅಬ್ರಹಾಂ ಲಿಂಕನ್, ಐಸೇನ್ ಹೋವರ್, ರಿಚರ್ಡ್ ನಿಕ್ಸನ್ ಮುಂತಾದವರೆಲ್ಲ ಸಾರ್ವಜನಿಕವಾಗಿ ಅತ್ತವರೇ. ‘ಅಮೆರಿಕಾದ ಅಧ್ಯಕ್ಷರಾಗಿ ಅಳಬಾರದೆಂಬ ಅಲಿಖಿತ ನಿಯಮವಿದೆ.’ ಆದರೆ ಇದನ್ನು  ಉಲ್ಲಂಘನೆಯಲ್ಲೇ ಆಚರಿಸುತ್ತಾರೆ. ಅಷ್ಟಕ್ಕೂ ಅಮೆರಿಕಾದ ಅಧ್ಯಕ್ಷರು ಮನುಷ್ಯರಲ್ಲವೆ? ಅವರಿಗೆ ಹೃದಯವಿಲ್ಲವೇ? ಅವರೇನು ಸಂವೇದನಾಶೀಲರಲ್ಲವೇ? ಅವರು ಹೃದಯದ ಭಾಷೆಯಲ್ಲಿ ಮಾತಾಡುವುದಿಲ್ಲವೇ?

ಭಾವನೆಗಳು ಮಾತಾಡಲು ಬಯಸಿದರೆ, ಅವು ಕಣ್ಣೀರಿನಿಂದಲೇ ಮಾತಿಗಾರಂಭಿಸುತ್ತವೆ. ಕಣ್ಣೀರಿಗೆ ಸ್ಥಾನಮಾನ, ಪದವಿ ಯಾವುದು ಗೊತ್ತಾಗುವುದಿಲ್ಲ. ಕೆಲವರು ಎಂಥ ದುಃಖಕರ ಸಂದರ್ಭದಲ್ಲೂ ಅಳುವುದಿಲ್ಲ. ತಮಗೆ ಆಪ್ತರಾದವರು ನಿಧನರಾದಾಗಲೂ ಅಳುವುದಿಲ್ಲ. ಅದು ಗಟ್ಟಿತನವಲ್ಲ. ಅದು ಜಡತ್ವದ ಸಂಕೇತ. ಭಾವನೆಗಳು ಸತ್ತಿರುವುದರ ಸಂಕೇತ. ಯುದ್ಧಕ್ಕೆ ಹೊರಟ ಯೋಧನಲ್ಲಿ ಕೆಚ್ಚು, ಶೌರ್ಯ ಇರುವುವಂತೆ ಕಣ್ಣೀರು  ಇರುತ್ತದೆ. ಯುದ್ಧಭೂಮಿಯಲ್ಲಿ ಸಾವಿರಾರು ಯೋಧರ ಹೆಣಗಳನ್ನು ಕಂಡು ಪರಿತಪಿಸಿದ ಅಶೋಕ ತನ್ನ ಪದವಿ, ರಾಜನ ಹುದ್ದೆ, ರಾಜ್ಯ.. ಎಲ್ಲವನ್ನು ತ್ಯಜಿಸಲು ಮುಂದಾದ. ಯೋಧರ ಹೆಣಗಳ ಮುಂದೆ ಕುಳಿತು ಗೋಳೋ ಎಂದು ಅತ್ತ. ಹಾಗೆ ನೋಡಿದರೆ ಇದು ರಾಜನಾದವನಿಗೆ ಶೋಭಿಸುವಂಥದ್ದಲ್ಲ. ಆದರೆ ಅಂದು ಅಶೋಕ ಹೃದಯದ ಭಾಷೆಗೆ ಶರಣಾಗಿದ್ದ!.

ಬರಾಕ್ ಒಬಾಮಾ, ಜಾರ್ಜ್ ಬುಶ್, ವ್ಲಾಡಿಮಿರ್ ಪುಟಿನ್, ಕಿಮ್ ಜಾಂಗ್ ಉನ್, ಸಿಲ್ದಿಯೋ ಬೆರ್ಲುಸ್ಕೋನಿ, ಅಟಲ್ ಬಿಹಾರಿ ವಾಜಪೇಯಿ, ಅಂಗಸಾನ್  ಇಂದಿರಾ ಗಾಂಧಿ, ನೆಹರು, ಗಾಂಧೀಜಿ ಎಲ್ಲರೂ ಸಾರ್ವಜನಿಕವಾಗಿ ಅತ್ತವರೇ. ‘ಆಳುವವರ ಅಸಹಾಯಕತೆ ಕಣ್ಣೀರಾಗಬಾರದು. ಆದರೆ ಭಾವನೆಗಳು ಕಣ್ಣೀರಾದರೆ ಅದು ಕೂಡ, ಪ್ರಾಮಾಣಿಕ ಅಭಿವ್ಯಕ್ತಿಯೇ’ ಎಂದು ಗಾಂಧೀಜಿ ಬರೆದಿದ್ದರು.

ಕಣ್ಣೀರು ಯಾವತ್ತೂ ಏಕಾಂಗಿಯಾಗಿ ಬರುವುದಿಲ್ಲ. ಅದು ಹತ್ತಾರು ನೆನಪುಗಳನ್ನು ಕರೆದುಕೊಂಡು ಬರುತ್ತದೆ. ಆದರೆ ಅವು ಪ್ರಾಮಾಣಿಕದಾಗಿರುತ್ತದೆ. ನಿಂತಲ್ಲೇ ಅಳುವುದು ಕಲಾವಿದನಿಗೂ ಕಷ್ಟವೇ. ಅಷ್ಟಕ್ಕೂ ಕಣ್ಣೀರಿನ ಆಳದಲ್ಲಿ ಸಂವೇದನೆಗಳು, ಭಾವನೆಗಳು ಇರಬೇಕಲ್ಲ?

ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಕಣ್ಣೀರನ್ನು ನೋಡಿದರೆ ಅದರಲ್ಲಿ ಅವರ  ಕಾಣಬಹುದು. ಅಷ್ಟಕ್ಕೂ ಕಣ್ಣೀರಿಗೆ ಬಣ್ಣವಿಲ್ಲ. ಬಣ್ಣವಿಲ್ಲದ್ದಕ್ಕೆ ಬಣ್ಣ ಹಚ್ಚುವ ಕೆಲಸ ಮಾಡುವುದು ಬೇಡ. ಕಣ್ಣೀರುಗರೆಯುವ ಭಾವ ಅಭಿವ್ಯಕ್ತಿಯನ್ನು ಹೀಯಾಳಿಸುವುದು ಬೇಡ. ಏನಂತೀರಾ?