About Us Advertise with us Be a Reporter E-Paper

ಪ್ರಚಲಿತರಾಜ್ಯ
Trending

ಮೂರು ತಿಂಗಳಲ್ಲಿ 40 ದೇವಸ್ಥಾನಗಳಿಗೆ ಭೇಟಿ ನೀಡಿದ ಸಿಎಂ

ಬೆಂಗಳೂರು:  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ 82 ದಿನಗಳಲ್ಲಿ 40 ದೇವಸ್ಥಾನಗಳಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

ಸೋಮವಾರ ಹರದನಹಳ್ಳಿಯ ಈಶ್ವರ ದೇಗುಲಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಳಿಕ ಹೊಳೆನರಸೀಪುರ ತಾಲ್ಲೂಕಿನ ನಾಲ್ಕು ದೇವಾಲಯಗಳನ್ನು ಸಂದರ್ಶಿಸಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯ ಹಾಗು ಧರ್ಮಸ್ಥಳ ದೇವಸ್ಥಾನಗಳಿಗೆ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.

ಮಂಡ್ಯದ ಆದಿಚುಂಚನಗಿರಿ, ಮೈಸೂರಿನ ಸುತ್ತೂರು ಹಾಗು ತುಮಕೂರಿನ ಸಿದ್ಧಗಂಗಾ ಮಠಗಳನ್ನು ಕುಮಾರಸ್ವಾಮಿ ಇದೇ ಸಂದರ್ಭ ಸಂದರ್ಶಿಸಿದ್ದಾರೆ. ಮುಖ್ಯಮಂತ್ರಿಯಾದ ಕಾರಣ ಭಗವಂತನಿಗೆ ಧನ್ಯವಾದ ಸಲ್ಲಿಸಲು ಕುಮಾರಸ್ವಾಮಿ ದೇಗುಲಗಳ ಪ್ರದಕ್ಷಿಣೆ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿದ ರಾಜಕೀಯ ತಜ್ಞ ಸಂದೀಪ್ ಶಾಸ್ತ್ರಿ, “ಅಧಿಕಾರಕ್ಕೆ ಬರುತ್ತಲೇ, ತಾವೆದುರಿಸುವ ರಾಜಕೀಯ ಸವಾಲುಗಳಿಂದ ತಮ್ಮನ್ನು ಕಾಪಾಡಲು ಅನೇಕ ಮುಖ್ಯಮಂತ್ರಿಗಳು ದೇವರ ಮೊರೆ ಹೋಗುತ್ತಾರೆ. ಈ ವಿಚಾರದಲ್ಲಿ ಕುಮಾರಸ್ವಾಮಿ ಎತ್ತಿದಕೈ” ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ, ಕುಮಾರಸ್ವಾಮಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನೇ ಮೀರಿಸಿದ್ದಾರೆ. ಯೋಗಿಆದಿತ್ಯನಾಥರು ಖುದ್ದು ಗೋರಖ್ಪುರ ಮಠದ ಮಹಂತರೂ  ಹೌದು. ಈ ಹಿಂದೆ , 2008ರಲ್ಲಿ ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ದೇವಾಲಯಗಳು ಮಾತ್ರವಲ್ಲದೇ ಕೇರಳ ಹಾಗು ವೈಷ್ಣೋದೇವಿ ಕ್ಷೇತ್ರಕ್ಕೂ ಭೇಟಿ ನೀಡಿದ್ದರು.

ಈ ಕುರಿತು ಮಾತನಾಡಿದ ಕುಮಾರಸ್ವಾಮಿ ಆಪ್ತ ಹಾಗು ಜೆಡಿಎಸ್‌ ನಾಯಕರೊಬ್ಬರು, “ಜೋತಿಷ್ಯ ಹಾಗು ಧಾರ್ಮಿಕ ವಿಧಿಗಳ ಕುರಿತು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಕುಟುಂಬಕ್ಕೆ ಬಹಳ ನಂಬಿಕೆ ಇದೆ. ರಾಜಕೀಯ ರಂಗ ಪ್ರವೇಶ ಮಾಡದ ಬಳಿಕ ಇದು ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಕುಮಾರಸ್ವಾಮಿ ಸ್ವಲ್ಪ ಹೊರತಾಗಿದ್ದರು. ಆದರೆ ಕಳೆದ ಕೆಲ ವರ್ಷಗಳಲ್ಲಿ ಆರೋಗ್ಯದಲ್ಲಿ ಬಹಳಷ್ಟು ವ್ಯತ್ಯಯಗಳಾದ ಬಳಿಕ ಧಾರ್ಮಿಕತೆ ಬಗ್ಗೆ ಬಹಳ ಒಲವು ಬರಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ತಮ್ಮ ಇಡೀ ಕುಟುಂಬ ಸಮೇತ ಧರ್ಮಸ್ಥಳ ಹಾಗು ಕುಕ್ಕೆ ದೇವಸ್ಥಾನಗಳಲ್ಲದೇ ಹಾಸನದ ಕೆಲ ದೇವಾಲಯಗಳನ್ನು ಮುಖ್ಯಮಂತ್ರಿ ಸಂದರ್ಶನ ಮಾಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರರಿಗೆ ಸರ್ವ ಸೇವೆಯನ್ನು ಕುಮಾರಸ್ವಾಮಿ ನೆರವೇರಸಿದ್ದಾರೆ.

ಈ ಮಾನ್ಸೂನ್‌ನಲ್ಲಿ ಕರ್ನಾಟಕಕ್ಕೆ ಒಳ್ಳೆಯ ಮಳೆಯಾಗುತ್ತಿರುವ ಕಾರಣ ದೇವರಿಗೆ ಧನ್ಯವಾದ ಅರ್ಪಿಸಿದ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಪ್ರಾರ್ಥಿಸಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಳಿಸಿದೆ.

 

Tags

Related Articles

Leave a Reply

Your email address will not be published. Required fields are marked *

Language
Close