About Us Advertise with us Be a Reporter E-Paper

ರಾಜ್ಯ

ಕುಮಾರಸ್ವಾಮಿ ಧರ್ಮರಾಯ: ಸಿಂಧ್ಯಾ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರ್ಣನಲ್ಲ, ಧರ್ಮರಾಯ ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿಗೆ ಜೆಡಿಎಸ್‌ ಕಾರ‍್ಯಕರ‍್ತರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕುರುಕ್ಷೇತ್ರ ಯುದ್ಧದಲ್ಲಿ ಗೆದ್ದು ಧರ್ಮರಾಜ್ಯ ಸ್ಥಾಪಿಸಿದ ಧರ್ಮರಾಯ, ಧರ್ಮರಾಯನಂತೆ ಕುಮಾರಣ್ಣನೂ ಧರ್ಮರಾಜ್ಯ ಸ್ಥಾಪಿಸಲಿ ಎಂದು ಸಿಂಧ್ಯಾ ಹೇಳಿದರು.

ಕುಮಾರಸ್ವಾಮಿ ಸಿಎಂ ಆದಾಗ ಉತ್ತಮ ಮಳೆಯಾಗಿದೆ, ಈಗ ಎಲ್ಲ ಜಲಾಶಯಗಳು ಭರ್ತಿ ಆಗ್ತಿವೆ, ಇದು ದೇವರ ಆಶೀರ್ವಾದ ಎಂದರು.

ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ಕುಮಾರಸ್ವಾಮಿ ತಮ್ಮನ್ನು ಕರ್ಣನಿಗೆ ಹೋಲಿಸಿಕೊಂಡಿದ್ದರು. ನಾನು ಸಾಂದರ್ಭಿಕ ಶಿಶು ಎಂದಿದ್ದು ನಿಜ, ಕರ್ಣ ಕೂಡ ಸಾಂದರ್ಭಿಕ ಶಿಶು ಆದರೆ ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕರ್ಣ ಜೀವವನ್ನೇ ಬಿಟ್ಟ ಎಂದು ಕುಮಾರಸ್ವಾಮಿ ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close