ರೈತ ವಿರೋಧಿ ವರ್ತನೆಗೆ ತಕ್ಕ ಪಾಠ: ಕುರುಬೂರು ಶಾಂತಕುಮಾರ್

Posted In : ರಾಜ್ಯ

ಮೈಸೂರು: ಕಬಿನಿ-ಕಾವೇರಿ ಜಲಾಶಯಗಳ ಅಚ್ಚು ಕಟ್ಟು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರು ಬಿಡದೆ, ತಮಿಳುನಾಡಿಗೆ ನೀರು ಹರಿಸಿ, ರೈತರಿಗೆ ದ್ರೋಹ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ರೈತರು ತಕ್ಕ ಪಾಠ ಕಲಿಸಿದ್ದಾರೆ ಎಂದು ರಾಜ್ಯಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ನ್ಯಾಯಯುತವಾದ ಬೆಲೆ ನಿಗಧಿಪಡಸದೆ ರೈತರನ್ನು ಕಡೆಗಣಿಸಿದ ಸಿದ್ದರಾಮಯ್ಯ ಹಾಗೂ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪರ ವಿರುದ್ಧ ರೈತರು, ರೈತ ಸಂಘಟನೆಯ ತೀರ್ಮಾನ ಒಪ್ಪಿ, ಬದ್ಧರಾಗಿ ಚುನಾವಣೆಯಲ್ಲಿ ಅವರುಗಳ ವಿರುದ್ಧ ಮತ ಚಲಾಯಿಸಿ, ಹೀನಾಯವಾಗಿ ಸೋಲಿಸಿದ್ದಾರೆ. ಜಿ.ಟಿ.ದೇವೇಗೌಡ ಹಾಗೂ ಅಶ್ವಿನ್ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ರೈತರ ಹೋರಾಟಕ್ಕೆ ಸಂದ ಜಯವಾಗಿದೆ ಹಾಗೂ ರೈತರ ಶಕ್ತಿ ಹೆಚ್ಚಿಸಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

two × 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top