About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಕುಸ್ತಿ ಫೈನಲ್‌ಗೆ ದೀಪಕ್

ಟ್ರಾನಾವ: ಏಷ್ಯಾ ಕಿರಿಯರ ಚಾಂಪಿಯನ್ ಭಾರತದ ದೀಪಕ್ ಪೂನಿಯಾ ಅವರು ವಿಶ್ವ ಕಿರಿಯರ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಇಲ್ಲಿ ನಡೆದ 86 ಕೆ.ಜಿ ಸೆಮಿಫೈನಲ್‌ನಲ್ಲಿ ಮೋಲ್ಡೊವಾದ ಇವಾನ್ ನೆಡೆಲ್ಕೊ ಅವರನ್ನು 6-2 ಅಂತರಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮೊದಲು ಅಚವರು ಪ್ಯಾಟ್ರಿಕ್ ಜುರೋವಾಜಾಸ್ಕಿ (7-0) ಹಾಗೂ ಜಾಯಂಗ್ ಜಿನ್ (11-0) ಅವರನ್ನು ಸೋಲಿಸುವ ಮೂಲಕ ಸೆಮಿಗೆ ಪ್ರವೇಶಿಸಿದ್ದರು.

ಭಾರತದ ಮತ್ತೊಬ್ಬ ಕುಸ್ತಿ ಪಟು ನವೀನ್ ಸಿಂಗ್ ಅವರು 57 ಕೆಜ.ಜಿ ವಿಭಾಗದಲ್ಲಿ ರಷ್ಯಾದ ಅಕ್ಮೀದ್ ಎದುರು 1-12 ಅಂಕಗಳಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಮತ್ತು ಸಂಜೇತ್ ಅವರು ಸೆಮಿಯಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ಹೋರಾಟ ನಡೆಸಲಿದ್ದಾರೆ.

ರಾಥಿ ಅವರು 74 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ 0-11 ಅಂತರಗಳಿಂದ ಸೋಲಿಗೆ ಶರಣಾಗಿ ಟೂರ್ನಿಯಿಂದ ಹೊರನಡೆದರೆ, ಸೂರಜ್ ರಾಜಕುಮಾರ್ 61ಕೆ.ಜಿ ವಿಭಾಗದಲ್ಲಿ ಮಣಿದು ನಿರಾಸೆ ಅನುಭವಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close