About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕೇರಳಕ್ಕೆ ಹರಿದುಬಂತು ಭರಪೂರ ನೆರವು

ತಿರುವನಂತಪುರ: ಭಾರಿ ಜಲಪ್ರಳಯಕ್ಕೆ ತತ್ತರಿಸಿರುವ ಕೇರಳ ರಾಜ್ಯಕ್ಕೆ ಭರಪೂರ ನೆರವು ದೊರೆತಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಈಗಾಗಲೇ 713 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ.

ಕೇರಳಕ್ಕೆ ಕೇಂದ್ರ ಸರ್ಕಾರ 600 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿತ್ತು. ಆದರೆ 14 ದಿನಗಳಲ್ಲಿ ಕೇಂದ್ರ ನೀಡಿದ ಪರಿಹಾರ ಮೊತ್ತಕ್ಕಿಂದಲೂ ಹೆಚ್ಚಿನ ಹಣ ದೇಣಿಗೆ ಸಂಗ್ರಹವಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 3.91 ಲಕ್ಷ ಮಂದಿ ಸಹಾಯಹಸ್ತ ಚಾಚಿದ್ದಾರೆ.

132.62 ಕೋಟಿ ರೂ. ಬ್ಯಾಂಕ್‍ಗಳು ಮತ್ತು ಯುಪಿಐಗಳ ಮೂಲಕ ಸ್ವೀಕರಿಸಲಾಗಿದೆ. 43 ಕೋಟಿ ರೂಪಾಯಿ ಪೇಟಿಎಂ ಮೂಲಕ, ಹಾಗೂ ಎಸ್ ಬಿಐ ಬ್ಯಾಂಕ್‍ನ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ 518.24 ಕೋಟಿ ರೂಪಾಯಿ, ಹಣ ಹಾಗೂ ಚೆಕ್ ಮೂಲಕ 20 ಕೋಟಿ ರೂ. ಸಂದಾಯವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close