About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕಾಲುಜಾರಿ ಕೆರೆಗೆ ಬಿದ್ದು ಇಬ್ಬರು ರೈತರ ದುರ್ಮರಣ

ಹಾಸನ: ಹಸುಗಳಿಗೆ ನೀರು ಕುಡಿಸಲು ತೆರಳಿದ್ದಾಗ ಕಾಲುಜಾರಿ ಕೆರೆಗೆ ಬಿದ್ದು ಇಬ್ಬರು ರೈತರು ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ದಡದಹಳ್ಳಿಯಲ್ಲಿ ನಡೆದಿದೆ.

ದಡದಹಳ್ಳಿ ನಿವಾಸಿಗಳಾದ ಸುರೇಶ್ (45) ಹಾಗೂ ಪ್ರಸನ್ನ (23) ಮೃತ ದುರ್ದೈವಿಗಳು. ಹಸುಗಳಿಗೆ ನೀರು ಕುಡಿಸಲು ಸುರೇಶ್ ಹಾಗೂ ಪ್ರಸನ್ನ ಕೆರೆಗೆ ತೆರಳಿದ್ದರು. ಈ ವೇಳೆ ಸುರೇಶ್ ಕಾಲುಜಾರಿ ಕೆರೆಗೆ ಬಿದ್ದಿದ್ದಾರೆ. ತಕ್ಷಣ ರಕ್ಷಣೆಗೆಂದು ನೀರಿಗೆ ಹರಿದ ಪ್ರಸನ್ನ ಕೂಡ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸದ್ಯ ಪ್ರಸನ್ನ ಮೃತದೇಹ ಪತ್ತೆಯಾಗಿದ್ದು, ಸುರೇಶ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಘಟನೆ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close