About Us Advertise with us Be a Reporter E-Paper

ಅಂಕಣಗಳು
Trending

ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನಾವು ತುಂಬ ಅನ್ಯೋನ್ಯವಾಗಿದ್ದೇವೆ:ರಮೇಶ್ ಜಾರಕಿಹೊಳಿ

ಸಂದರ್ಶನ: ಚೇತನ ವಿಭೂತಿಮಠ

ರಾಜ್ಯ ರಾಜಕೀಯದಲ್ಲಿ ಸೃಷ್ಟಿಸಿದ್ದ, ಸಮ್ಮಿಶ್ರ ಸರಕಾರಕ್ಕೆ ಕಂಟಕ ಆಗಬಹುದಾಗಿದ್ದ, ಪಿಎಲ್‌ಡಿ ಬ್ಯಾಂಕ್ ವಿಚಾರದಿಂದಾಗಿ ಹೊತ್ತಿಕೊಂಡಿದ್ದ, ಬೆಳಗಾವಿ ರಾಕಾರಣದ ಬೆಂಕಿಯನ್ನು ತಾತ್ಕಾಲಿಕ ಶಮನಗೊಳಿಸುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಯಶಸ್ವಿಯಾಗಿದೆ. ಪರಸ್ಪರ ಜಿದ್ದಿಗೆ ಬಿದ್ದಿದ್ದ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಒಮ್ಮತದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದೆ. ಈ ಮೂಲಕ ನಾಯಕರ ಹೈ ಕಮಾಂಡ್ ತೇಪೆ ಹಚ್ಚಿದೆ.

  1. ಚೇತನ್‌ ವಿಭೂತಿಮಠ: ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಳೆಸಿದವರೇ ನೀವು ಎಂದು ಹೇಳಿತ್ತೀರಿ, ಹೀಗಿರುವಾಗ ಲಕ್ಷ್ಮೀ ಹೆಬ್ಬಾಳ್ಕರ ಅಸಮಾಧಾನಕ್ಕೆ ಕಾರಣವೇನು? 

ಸತೀಶ ಜಾರಕಿಹೊಳಿ: ರಾಜಕೀಯಕ್ಕೆ ಪರಿಚಯಿಸಿದವರು ನಾವೇ.. ಆದರೆ, ರಾಜಕಾರಣದಲ್ಲಿ ನಮ್ಮನ್ನು ಮೀರಿ ಬೆಳೆಯುತ್ತಾರೆ ಎಂದು ಭಾವಿಸುವುದು ಮೂರ್ಖತನ. ರಾಜಕೀಯದಲ್ಲಿ ಸಾಮರ್ಥ್ಯ ಅಗತ್ಯ, ಸಾಮಾರ್ಥ್ಯ ಇರುವವರು ಬೆಳೆಯುತ್ತಾರೆ, ಅದೇ ರೀತಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳೆದಿದ್ದಾರೆ. ಅವರ ಸಾಮರ್ಥ್ಯ ಹಾಗೂ ಕಾರ್ಯವೈಖರಿಯಿಂದ ಬೆಳೆದಿದ್ದಾರೆ. ಇದನ್ನೇ ನಾವು ಬೆಳೆಸಿರುವುದು ಎಂದು ಹೇಳುವುದು ಬೆಳೆಸಲು ನಾವ್ಯಾರು, ಅವರೂ ಕೂಡ ಶಾಸಕರಾಗಿದ್ದಾರೆ. ಸಹಜವಾಗಿ ಜಿಲ್ಲೆಯಲ್ಲಿ ಪ್ರಭಾವ ಬೆಳೆದಿದೆ. ಅದೇ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇತ್ತೀಚೆಗೆ ನಮ್ಮ ಅವರು ನಡುವೆ ಸಣ್ಣ ಭಿನ್ನಾಭಿಪ್ರಾಯವಿತ್ತು. ಹೀಗಾಗಿ ಅಸಮಾಧಾನ ಉಂಟಾಗಿತ್ತು. ಹೈ ಕಮಾಂಡ್ ಮಧ್ಯ ಪ್ರವೇಶಿಸಿ ಎಲ್ಲ ಗೊಂದಲಗಳನ್ನು ಬಗೆ ಹರಿಸಿದೆ. ಯಾವುದೇ ಗೊಂದಲವಿಲ್ಲ.

2. ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಿಮ್ಮ ವಿರುದ್ಧವೇ ತಿರುಗಿ ಬಿದ್ದದ್ದೇಕೆ?

ನಮ್ಮ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿರುಗಿ ಬಿದ್ದಿಲ್ಲ, ನಮ್ಮ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವೆ ಯಾವುದೇ ವೈಶಮ್ಯ ಇರಲಿಲ್ಲ. ಹಿಂದಿನಿಂದಲೂ ನಾವು ಸ್ನೇಹಿತರೇ, ಸಣ್ಣ ಬಿನ್ನಭಿಪ್ರಾಯದಿಂದ ಈ ರೀತಿಯಾಗಿತ್ತು. ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಈ ರೀತಿಯಾಗಿರುವುದು ಪ್ರತಿಷ್ಠೆ ತೋರಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರದ್ದು, ಬೆಳಗಾವಿ ಗ್ರಾಮಾಂತರ ಕ್ಷೇತ್ರ ಹೀಗಾಗಿ ಅವರಿಗೆ ಗ್ರಾಮಾಂತರ ಪ್ರದೇಶದತ್ತ ಚಿತ್ತ ಹರಿಸುವಂತೆ ಹೇಳಿದ್ದಷ್ಟೇ, ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಅವರದೇ ಬೆಂಬಲಿಗರು ಸ್ಪರ್ಧಿಸುತ್ತಿದ್ದರಿಂದ ಸಹಜವಾಗಿಯೇ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯ ಪ್ರವೇಶಿಸಿದ್ದರು. ಅಲ್ಲದೆ, ನಮ್ಮ ಮತ್ತೊಬ್ಬ ನಾಯಕಿ ಹುಟ್ಟಿಕೊಳ್ಳುತ್ತಿದ್ದಾರೆ ಎಂದರೆ ಸಂತೋಷವಲ್ಲವೇ, ಇದಕ್ಕೇಕೆ ಅಸಮಾಧಾನ ಪಡಬೇಕು? ಹೀಗಾಗಿ ಭಿನ್ನಾಭಿಪ್ರಾಯ ಉಂಟಾಗಿ ಗೊಂದಲವಾಗಿತ್ತು. ಇದರ ಅರ್ಥ ನಮ್ಮ ವಿರುದ್ಧವೇ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗಿ ಬಿದ್ದಿದ್ದಾರೆ ಎಂಬುದಲ್ಲ.

3. ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಜಾರಕಿಹೊಳಿ ಸಹೋದರರಿಗೆ ಮುಖಭಂಗವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಾನು ಹೇಳಿದ ಅಧ್ಯಕ್ಷ, ಉಪಾಧ್ಯಕ್ಷರೇ ಆಯ್ಕೆಯಾಗಿದ್ದಾರೆ, ಹೀಗಿರುವಾಗ ನನಗೇಕೆ ಮುಜುಗರವಾಗಬೇಕು? ನಾನೂ ಸೂಚಿ, 15ಜನ ಸದಸ್ಯರಲ್ಲಿ ಒಬ್ಬಿಬ್ಬರನ್ನು ಪಡಿಸಿ, ಉಳಿದೆಲ್ಲ ಸ್ಥಾನಗಳಿಗೆ ನಾವು ಸೂಚಿಸಿದವರೇ ಆಯ್ಕೆಯಾಗಿದ್ದಾರೆ. ಆದರೆ, ಕೆಲವು ಮಾಧ್ಯಮಗಳು ಅಪಪ್ರಚಾರ ಮಾಡಿ ಜಾರಕಿಹೊಳಿ ಸಹೋದರರಿಗೆ ಮುಖಭಂಗ ಎಂದು ಹೇಳಿದ್ದಾರೆ. ಬಹುತೇಕ ಸ್ಥಾನಗಳಲ್ಲಿ ನಾವು ಸೂಚಿಸಿದ ಅಭ್ಯರ್ಥಿಗಳೆ ಆಯ್ಕೆಯಾಗಿದ್ದಾರೆ. ಈ ಕುರಿತು ಯಾವುದೇ ಗೊಂದಲವಿಲ್ಲ, ಮಾಧ್ಯಮದವರು ವೈಭವೀಕರಿಸುವುದರ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಇದರಲ್ಲಿ ಯಾವುದೇ ರೀತಿಯ ಹುರುಳಿಲ್ಲ.

4. ಹೈ ಕಮಾಂಡ್ ಸಂಧಾನ ನಿಮಗೆ ತೃಪ್ತಿ ತಂದಿದೆಯೇ?

ಹೈ ಕಮಾಂಡ್ ನಡೆಸಿದ ಸಂಧಾನ ಸಂಪೂರ್ಣ ತಂದಿದೆ. ನಾನೇ ಸೂಚಿಸಿದ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಹೀಗಿರುವಾಗ ತೃಪ್ತಿ ತಂದಿಲ್ಲ ಎಂದು ಹೇಳಲು ಸಾಧ್ಯವೇ? ಪದಾಧಿಕಾರಿಗಳೂ ನಮ್ಮ ವಲಯದವರೇ ಆಯ್ಕೆಯಾಗಿದ್ದಾರೆ. ಹೈ ಕಮಾಂಡ್ ಈ ವಿಚಾರದಲ್ಲಿ ಸೂಕ್ತ ತೀರ್ಮಾನ ಕೈಗೊಂಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಸಹ ಈ ಕುರಿತು ತಿಳಿ ಹೇಳಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಮೂಡುವುದಿಲ್ಲ. ಈಶ್ವರ ಖಂಡ್ರೆ ಅವರೂ ಸಹ ಎಲ್ಲರಿಗೂ ಸಮಾಧಾನವಾಗುವಂತೆ ಬಗೆ ಹರಿಸಿದ್ದಾರೆ. ಯಾವುದೇ ರೀತಿಯ

5. ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಂಬಂಧ ಸರಕಾರವೇ ಬೀಳುತ್ತದೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಏನು ಹೇಳುತ್ತೀರಿ.

ಪಿಎಲ್‌ಡಿ ಬ್ಯಾಂಕ್ ಚುನಾವಣೆಯನ್ನು ರಾಜ್ಯ ರಾಜಕೀಯಕ್ಕೆ ಎಳೆತರುವುದು ಸೂಕ್ತವಲ್ಲ. ಈ ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳುತ್ತೇವೆ. ಈಗಾಗಲೇ ಎಲ್ಲ ಸುಖಾಂತ್ಯ ಕಂಡಿದೆ. ಮಾಧ್ಯಮಗಳ ಅಪಪ್ರಚಾರದಿಂದಾಗಿ ಈ ವಿಚಾರ ಹಾದಿ ತಪ್ಪಿತು, ನಮ್ಮ ಸ್ಥಳೀಯ ವಿಚಾರವನ್ನು ಸರಕಾರ ಬೀಳುತ್ತದೆ. ಎಂಬುದರ ಮಟ್ಟಿಗೆ ಬಿಂಬಿಸಲಾಯಿತು. ಇದೆಲ್ಲ ಸುಳ್ಳು. ನಮ್ಮಿಲ್ಲಿರುವುದು ಭಿನ್ನಾಭಿಪ್ರಾಯವಷ್ಟೇ ಯಾವುದೇ ದ್ವೇಷ ಇಲ್ಲ. ಅದರಲ್ಲೂ ಸರಕಾರಕ್ಕೆ ಧಕ್ಕೆ ತರುವ ರೀತಿಯಲ್ಲಿ ಬಿಂಬಿಸುವ ವಿಚಾರವಲ್ಲ.

6. ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ನಿಮ್ಮಂತ ದೊಡ್ಡ ನಾಯಕರು ಭಾಗವಹಿಸುವ ಅವಶ್ಯವಿತ್ತೇ?

ರಾಜಕಾರಣದಲ್ಲಿ ಯಾವುದೂ ಸಣ್ಣದಲ್ಲ, ಸ್ಥಳೀಯ ಮಟ್ಟದಲ್ಲಿ ಪಕ್ಷ ಬಲಪಡಿಸಲು ಪಿಎಲ್‌ಡಿ ಬ್ಯಾಂಕ್‌ನಂತಹ ಚುನಾವಣೆಗಳೂ ಪಾತ್ರ ವಹಿಸುತ್ತವೆ. ನೇರವಾಗಿ ನಾವು ಭಾಗವಹಿಸುವ ಅನಿವಾರ್ಯ ಸಂದರ್ಭ ಬರುತ್ತದೆ. ಹೀಗಾಗಿ ಯಾವುದನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಯಾಗಿಸಲು ಇಂತಹ ಚುನಾವಣೆಗಳು ಪ್ರಮುಖಪಾತ್ರ ವಹಿಸುತ್ತವೆ. ಸರಿ ಇದ್ದದ್ದನ್ನು ಸರಿ, ತಪ್ಪನ್ನು ತಪ್ಪು ಎಂದು ಹೇಳುವ ವ್ಯಕ್ತಿ, ಯಾರ ಪರವಾಗಿಯೂ ನಿಲ್ಲುವ ವ್ಯಕ್ತಿಯಲ್ಲ. ಹೀಗಾಗಿ ಭಿನ್ನಾಭಿಪ್ರಾಯವಾಗಿದೆಯಷ್ಟೇ, ಇದೀಗ ಎಲ್ಲವೂ ಸರಿಯಾಗಿದೆ.

7. ಪಿಎಲ್‌ಡಿ ಬ್ಯಾಂಕ್ ಚುನಾವಣೆ ಕೇವಲ ನೆಪವಷ್ಟೇ, ವಿವಿಧ ವಿಚಾರಗಳಲ್ಲಿ ಜಾರಕಿಹೊಳಿ ಸಹೋದರರಿಗೆ ಅಸಮಾಧಾನವಿತ್ತು ಎಂದು ಹೇಳಲಾಗುತ್ತಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯ?

ಸ್ಥಳೀಯ ಮಟ್ಟದಲ್ಲಿ ಸಣ್ಣ ಭಿನ್ನಾಭಿಪ್ರಾಯ ಬಿಟ್ಟರೆ ಇನ್ನಾವುದೇ ದುರುದ್ದೇಶವಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಈ ವರೆಗೆ ಯಾವದೇ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಹೀಗಿರುವಾಗ ಬೇರೆ ಉದ್ದೇಶ ಇರಲು ಹೇಗೆ ಸಾಧ್ಯ. ಮೊದಲಿನಿಂದಲೂ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನಾವು ತುಂಬ ಅನ್ಯೋನ್ಯವಾಗಿದ್ದೇವೆ. ಇತ್ತೀಚೆಗೆ ಕೆಲವು ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಮೂಡಿದ್ದರಿಂದ ಗದ್ದಲ ಉಂಟಾಗಿತ್ತು, ಇದನ್ನು ಬಿಟ್ಟರೆ ಇನ್ನಾವುದೇ ದುರುದ್ದೇಶ ಇಲ್ಲ.

Tags

Related Articles

Leave a Reply

Your email address will not be published. Required fields are marked *

Language
Close