ವಿಜ್ಞಾನವಸ್ತು ಪ್ರದರ್ಶನ ಮತ್ತು ಬೀಜದುಂಡೆ (ಸೀಡ್ ಬಾಲ್) ತಯಾರಿಕೆ ಕಾರ್ಯಕ್ರಮ
ಶಾಲೆಗಳಲ್ಲಿ ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳುವುದು ಮಕ್ಕಳಿಗೆ ತಮ್ಮ ಕೌಶಲ್ಯ ಮತ್ತು ಸೃಜನಾ ತ್ಮಕ ಪ್ರತಿಭೆಯನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗುತ್ತದೆ. ವಿಜ್ಞಾನದಲ್ಲಿ ಕ್ಷೇತ್ರ ದಲ್ಲಿ ಸಾಧನೆ ಮಾಡಲು ಕುತೂಹಲ, ಸೃಜನಶೀಲತೆ ಮತ್ತು ಸೋಲನ್ನು ಎದುರಿಸುವ ಧೈರ್ಯ, ನಂಬಿಕೆ ಮತ್ತು ಛಲ ಇರಬೇಕೆಂದರು.

ನಗರ ಹೊರವಲಯ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಜನ್ಮದಿನಾಚರಣೆಯನ್ನು ವಿಜ್ಞಾನವಸ್ತು ಪ್ರದರ್ಶನ ಮತ್ತು ಬೀಜದುಂಡೆ (ಸೀಡ್ ಬಾಲ್) ತಯಾರಿಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಚಿಕ್ಕಬಳ್ಳಾಪುರ : ನಗರ ಹೊರವಲಯ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಜನ್ಮದಿನಾಚರಣೆಯನ್ನು ವಿಜ್ಞಾನವಸ್ತು ಪ್ರದರ್ಶನ ಮತ್ತು ಬೀಜದುಂಡೆ (ಸೀಡ್ ಬಾಲ್) ತಯಾರಿಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನೇರೆಳೆ, ಬೇವು, ಹೊಂಗೆ, ಹಿಪ್ಪೆ, ಕಾಡು ಹುಣಿಸೆ, ಸಪೋಟ, ಹೀಚಲ, ಕಾಡು ಬಾದಾಮಿ ಮುಂತಾದ ವಿವಿಧ ರೀತಿಯ ಬೀಜಗಳನ್ನು ಮಕ್ಕಳೆ ಮನೆಗಳಿಂದ ತಂದು ತುಂಬಾ ಉತ್ಸಾಹದಿಂದ ೨ ಸಾವಿರ ಕ್ಕೂ ಹೆಚ್ಚು ಸೀಡ್ ಬಾಲ್‌ಗಳನ್ನು (ವಿವಿದ ಬೀಜಗಳನ್ನೊಳಗೊಂಡ ಮಣ್ಣಿನ ಉಂಡೆ) ತಯಾರಿಸಿ ದರು. ಮಕ್ಕಳು ಈ ಕಾರ್ಯದಲ್ಲಿ ಪಾಲ್ಗೊಂಡು ನಮಗೆಲ್ಲವನ್ನು ನೀಡಿರುವ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಈ ಸಣ್ಣ ಪ್ರಯತ್ನ ತೃಪ್ತಿ ತಂದಿತು ಎಂದು ಸಂತಸಪಟ್ಟರು.
ಇದನ್ನೂ ಓದಿ: Chikkaballapur News: ಸಮತೂಕ ವ್ಯಕ್ತಿತ್ವಕ್ಕೆ ಶಾರೀರಿಕ ಕ್ರೀಡೆಗಳು ಸಹಕಾರಿ : ಡಾ.ಕೋಡಿರಂಗಪ್ಪ
ಈ ವೇಳೆ ಇಸ್ರೋ ನಿವೃತ್ತ ವಿಜ್ಞಾನಿ ಶ್ರೀ ಶಿವಪ್ರಕಾಶ್ ಬಿ, ಮಾತನಾಡಿ, ಶಾಲೆಗಳಲ್ಲಿ ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳುವುದು ಮಕ್ಕಳಿಗೆ ತಮ್ಮ ಕೌಶಲ್ಯ ಮತ್ತು ಸೃಜನಾ ತ್ಮಕ ಪ್ರತಿಭೆಯನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗುತ್ತದೆ. ವಿಜ್ಞಾನದಲ್ಲಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಕುತೂಹಲ, ಸೃಜನಶೀಲತೆ ಮತ್ತು ಸೋಲನ್ನು ಎದುರಿಸುವ ಧೈರ್ಯ, ನಂಬಿಕೆ ಮತ್ತು ಛಲ ಇರಬೇಕೆಂದರು.
ಕಾಗೆಯ ರೀತಿ ಕೈಗೊಂಡ ಕಾರ್ಯವನ್ನು ಯಾವುದೇ ಕಾರಣಕ್ಕೂ ಮುಗಿಯುವವರೆಗೂ ನಿಲ್ಲಿಸ ಬಾರದು. ಕೊಕ್ಕರೆಗೆ ಸಣ್ಣ ಸಣ್ಣ ಅಡತಡೆಗಳು ಬಂದರೂ ಅದನ್ನು ಲೆಕ್ಕಸದೇ ಹೇಗೆ ಗುರಿಯನ್ನು ತಲುಪುತ್ತದೆಯೋ ಅದೇ ರೀತಿಯಲ್ಲಿ ನೀವು ಸಹ ಮುಖ್ಯವಾದ ಗುರಿಯನ್ನು ತಲುಪಬೇಕು. ನಾಯಿಯೂ ಎಷ್ಟೇ ನಿದ್ರೆ ಮಾಡಿದರೂ ಜಾಗ್ರತೆಯಿಂದ ಇರುತ್ತದೆಯೋ ಹಾಗೆ ನೀವು ಜಾಗ್ರತೆ ಯಿಂದ ಇರಬೇಕು. ಅಲ್ಪಹಾರ ಸೇವನೆಯನ್ನು ಮಾಡಬೇಕು. ನೀವೂ ಏನಾದರೂ ಸಾಧಿಸ ಬೇಕಾದರೇ ತಮ್ಮ ಸೌಲಭ್ಯಗಳಿಂದ ಹೊರಬರಬೇಕೆಂದು ತಿಳಿಸಿದರು.

ವಿವಿಧ ವೈಜ್ಞಾನಿಕ ಮಾದರಿಗಳನ್ನು ವೀಕ್ಷಿಸಿ ಸಂತಸವನ್ನು ವ್ಯಕ್ತಪಡಿಸಿದರು. ವಿಜ್ಞಾನಕ್ಕೆ ಸಂಬಂ ಧಿಸಿದಂತೆ ವಾಯುಮಾಲಿನ್ಯ, ತುಂತುರು ನೀರಾವರಿ, ಹೈನುಗಾರಿಕೆ, ರಾಕೆಟ್, ರೊಬೋಟ್ ಮಾದರಿ ಗಳು, ಪ್ರೊಜಕ್ಟರ್, ಆಹಾರದಲ್ಲಿ ಕಲಬೆರಕೆ ಪತ್ತೆ ಹಚ್ಚುವ ತಂತ್ರಜ್ಞಾನ, ತಂಪುಕಾರಕ, ಮೈಕ್ರೋ ಪೋನ್, ರಕ್ತ ಪರೀಕ್ಷೆ, ಶ್ವಾಸಕೋಶಗಳ ರಚನೆ ಮುಂತಾದ ವಿವಿಧ ಪ್ರಯೋಗಗಳನ್ನು ಪ್ರದರ್ಶಿಸಿ ದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಮೋಹನ್ ಕುಮಾರ್ ಡಿ.ಸಿ ರವರು ಪರಿಸರದ ಬಗ್ಗೆ ಮಾತನಾಡುತ್ತ ಪ್ರಕೃತಿ ಮಾತೆ ನಮಗೆಲ್ಲವನ್ನು ನೀಡಿದ್ದಾಳೆ. ಆದರೆ ಇಂದು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದು ವಿವಿಧ ರೀತಿಯಲ್ಲಿ ಪರಿಸರವನ್ನು ಮಲಿನಗೊಳಿಸುತ್ತಿದ್ದೇವೆ. ಇದರಿಂದ ನಮ್ಮ ವಿನಾಶ ಕಟ್ಟಿಟ್ಟ ಬುತ್ತಿ, ಆದ್ದರಿಂದ ನಾವು ವಿದ್ಯಾರ್ಥಿ ದೆಸೆಯಲ್ಲೆ ಪರಿಸರವನ್ನು ಉಳಿಸಿ ಬೆಳೆಸುವುವಲ್ಲಿ ಕಾರ್ಯೋನುಮುಖರಾಗೋಣ ಎಂದರು.
ಪ್ರಾಂಶುಪಾಲ ಮೋಹನ್ ಮಾತನಾಡಿ, ಪೂಜ್ಯ ಮಹಾಸ್ವಾಮೀಜಿಯವರು ಪರಿಸರ ಸಂರಕ್ಷಣೆ ಯಲ್ಲಿ ತೊಡಗಿಸಿಕೊಂಡು ಕರ್ನಾಟಕಾದ್ಯಂತ ೫ ಕೋಟಿಗೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಪ್ರತಿ ವರ್ಷ ಅವರ ಹುಟ್ಟುಹಬ್ಬದಂದು ಬೀಜದುಂಡೆ (ಸೀಡ್ ಬಾಲ್) ತಯಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಜನ್ಮದಿನದ ಶುಭಾಶಯಗಳನ್ನು ಭಕ್ತಿಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ ಎಂದರು.
ಇದೇ ಕಾರ್ಯಕ್ರಮದಲ್ಲಿ 2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜಿಎಸ್ ಸಂವಿತ್ ಶಾಲೆಯ ಕೌನ್ಸಿಲರ್ ಶ್ರೀಮತಿ ಕೆ.ಆರ್ ಕಲಾವತಿ ಮತ್ತು ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.