Ruturaj Gaikwad: ಕೌಂಟಿ ಚಾಂಪಿಯನ್‌ಶಿಪ್‌ನಿಂದ ದಿಢೀರ್ ಹಿಂದೆ ಸರಿದ ಗಾಯಕ್ವಾಡ್
County Championship: ಋತುರಾಜ್ ಗಾಯಕ್ವಾಡ್ ಭಾರತ ಪರ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಗಾಯಕ್ವಾಡ್ 18ನೇ ಆವೃತ್ತಿಯಲ್ಲಿ ಗಾಯಗೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದರು.


ಲಂಡನ್: ಭಾರತ ಮತ್ತು ಮಹಾರಾಷ್ಟ್ರದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್(Ruturaj Gaikwad) ವೈಯಕ್ತಿಕ ಕಾರಣಗಳಿಂದ ಯಾರ್ಕ್‌ಷೈರ್(Yorkshire) ಜತೆಗಿನ ತಮ್ಮ ಕೌಂಟಿ(County Championship) ಒಪ್ಪಂದವನ್ನು ರದ್ದುಗೊಳಿಸಿದ್ದಾರೆ. ಜುಲೈ 22 ರಿಂದ ನಡೆಯಲಿರುವ ಸರ್ರೆ ವಿರುದ್ಧದ ಪಂದ್ಯಕ್ಕೆ ಮೂರು ದಿನಗಳ ಮೊದಲು ಯಾರ್ಕ್‌ಷೈರ್ ಮುಖ್ಯ ಕೋಚ್ ಆಂಥೋನಿ ಮೆಕ್‌ಗ್ರಾತ್ ಅವರು ಗಾಯಕ್ವಾಡ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
"ದುರದೃಷ್ಟವಶಾತ್ ಗಾಯಕ್ವಾಡ್ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಗಾಯಕ್ವಾಡ್ ಈ ಋತುವಿನಲ್ಲಿ ಆಡಲು ಲಭ್ಯವಿರುವುದಿಲ್ಲ. ಕಾರಣಗಳ ಬಗ್ಗೆ ನಾನು ನಿಮಗೆ ಏನನ್ನೂ ಹೇಳಲಾರೆ, ಆದರೆ ಎಲ್ಲವೂ ಸರಿಯಾಗಿದೆ ಎಂದು ನಾವು ಭಾವಿಸುತ್ತೇವೆ. ಅವರ ಅನುಪಸ್ಥಿತಿ ಯಾರ್ಕ್‌ಷೈರ್ ತಂಡದಲ್ಲಿ ದೊಡ್ಡ ನ್ಯೂನತೆಯನ್ನು ಸೃಷ್ಟಿಸುತ್ತದೆ. ಕೌಂಟಿ ಚಾಂಪಿಯನ್‌ಶಿಪ್ ನಂತರ ಗಾಯಕ್ವಾಡ್ ಏಕದಿನ ಕಪ್‌ನಲ್ಲೂ ಆಡಬೇಕಿತ್ತು. ಆದರೆ ಅವರು ಟೂರ್ನಿಯಿಂದ ಹಿಂದೆ" ಸರಿದರು ಎಂದು ಆಂಥೋನಿ ಮೆಕ್‌ಗ್ರಾತ್ ಹೇಳಿದರು.
"ನಾವು ಏನು ಮಾಡಬಹುದು ಎಂಬುದರ ಕುರಿತು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಕೇವಲ ಎರಡು ಅಥವಾ ಮೂರು ದಿನಗಳು ಮಾತ್ರ ಬಾಕಿ ಇದೆ. ಆದ್ದರಿಂದ ಈ ಸಮಯದಲ್ಲಿ ನಾವು ಏನು ಮಾಡಬಹುದೆಂದು ನನಗೆ ಖಚಿತವಿಲ್ಲ. ಸಂಭವನೀಯ ಬದಲಿ ಆಟಗಾರರನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಸಮಯದ ಒತ್ತಡವು ಸಮಸ್ಯೆಯಾಗಿದೆ. ಈ ಸಮಯದಲ್ಲಿ ನಾನು ನಿಮಗೆ ಇದಕ್ಕಿಂತ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ”ಎಂದು ಆಂಥೋನಿ ಮೆಕ್‌ಗ್ರಾತ್ ಹೇಳಿದರು.
ಋತುರಾಜ್ ಇದುವರೆಗೆ ಭಾರತ ಪರ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಗಾಯಕ್ವಾಡ್ 18ನೇ ಆವೃತ್ತಿಯಲ್ಲಿ ಗಾಯಗೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಧೋನಿ ಅವರು ಉಳಿದ ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.
ಇದನ್ನೂ ಓದಿ IND vs ENG 4th Test: ರೋಹಿತ್ ದಾಖಲೆ ಮುರಿಯುವ ಸನಿಹ ರಿಷಭ್ ಪಂತ್