About Us Advertise with us Be a Reporter E-Paper

ಗುರು

ನಗುವುದ ಕಲಿಯೋ ಮಾನವ..

ಹೊರಟಿದೆ ಜೀವ ತನ್ನ ಕೊನೆ ಯಾತ್ರೆಯ ದಾರಿ ಹಿಡಿದು ಗಳಿಸಿದನ್ನೆಲ್ಲಾ ಬಿಟ್ಟು, ಮಾಡಿಟ್ಟದ್ದನ್ನೆಲ್ಲಾ ಕೊಟ್ಟು, ಮಣ್ಣಲ್ಲಿ ಮಣ್ಣಾಗುವುದಕ್ಕೆ. ಮೂರು ದಿನದ ಬಾಳಿನ ಆಟದಲ್ಲಿ ನಕ್ಕಿದನ್ನು ಕಾಣೆ, ಜತೆಯಲ್ಲಿ ಕೂತು ಊಡಿದನ್ನು ಕಾಣೆ, ಇನ್ನೊಬ್ಬರ ಸುಖದಲ್ಲೋ-ದುಃಖದಲ್ಲೋ ಭಾಗಿಯಾಗಿದ್ದನ್ನು ಕಾಣೆ. ತನ್ನತನವನ್ನೇ ಮರೆತು, ಗಳಿಸಬೇಕು-ಉಳಿಸಬೇಕು, ಶ್ರಮಿಸಬೇಕು, ನಾಳೆಗಾಗಿ ಇಂದು ಕೂಡಿಡಬೇಕು ಎಂಬ ಜಂಜಾಟದಲ್ಲೇ ಸವಿಸದೇ ಬಂಡಿಯಾ? ತಿರುಗಿ ನೋಡಲು ಒಂದು ಖುಷಿಯ ಅಧ್ಯಾಯವಿಲ್ಲವಲ್ಲೋ ಹುಳು ಮಾನವ.

ಹೌದು. ಈ ಕ್ಷಣಕ್ಕೆ, ಪ್ರಸ್ತುತ ವರ್ತಮಾನಕ್ಕೆ ಮೇಲಿನ ಸಾಲುಗಳು ಬಹಳ ಸೂಕ್ತವೆನ್ನಿಸುತ್ತದೆ. ಬೆತ್ತಲೆಯಾಗಿ ಬಂದು ಬೆತ್ತಲೆಯಾಗಿ ಹೋಗುವುದಕ್ಕೆ ಬಾಳಿನ ಉದ್ದಕ್ಕೂ ಸೆಣಸಾಡುತ್ತಿದ್ದೇವೆ. ನಾಳಿನ ಭವಿಷ್ಯದ ಚಿಂತೆಯಲ್ಲಿ ಇಂದಿನ ಖುಷಿ ಕ್ಷಣಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ದಿನದಿಂದ ದಿನಕ್ಕೆ ಯಾಂತ್ರಿಕತೆಯ ಮಾಯೆಗೆ ಒಳಗಾಗುತ್ತಿರುವ ನಾವು, ಯಂತ್ರಗಳಾಗಿಯೇ ಜೀವನ ನಡೆಸುತ್ತಿದ್ದೇವೆ ಎಂದರೆ ತಪ್ಪಾಗಲಾರದು.

ಜ್ಞಾನ ಸಂಪಾದಿಸಬೇಕು. ಅದಕ್ಕಾಗಿ ಹಗಲು ರಾತ್ರಿ ಶ್ರಮ ಆಗ ಮಾತ್ರ ಮುಂದಿನ ಜೀವನ ಸುಖಮಯವಾಗಿರುತ್ತದೆ ಎಂಬ ಕಲ್ಪನೆ ಪ್ರತಿಯೊಬ್ಬ ಮನುಷ್ಯನಲ್ಲಿ ಮನೆ ಮಾಡಿರುತ್ತದೆ. ಖಂಡಿತ ಅದಕ್ಕೆ ನಾನು ಹೊರತಾಗಿಲ್ಲ, ನೀವು ಹೊರತಾಗಿಲ್ಲ. ಆದರೆ ಅದನ್ನು ಸಾಕಾರಗೊಳಿಸುವುದಕ್ಕಾಗಿ ತಮ್ಮನ್ನೇ ತಾವೇ ಇಲ್ಲಸಲ್ಲದ ಸಂಕೋಲೆಗಳಲ್ಲಿ ಬಂಧಿಯಾಗಿಸಿಕೊಂಡು, ನಿರ್ಧಿಷ್ಟ ಚೌಕಟ್ಟಿನಲ್ಲಿ ಜೀವನ ನಡೆಸುತ್ತಿದ್ದೇವೆ. ಅಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ, ತನ್ನತನವನ್ನು ಅರಿತುಕೊಳ್ಳುವುದಕ್ಕೆ ದಾರಿಗಳಿಲ್ಲ, ನಗು ಎಂದರೇನು ಎಂಬುದರ ಪರಿವೇ ಇಲ್ಲ. ಬದುಕಿದಷ್ಟು ಕಾಲ ದರ್ಪ, ಅಂತಸ್ತು, ಯಶಸ್ಸು ಎಂಬ ಮಾಯೆ ಮೂರರ ಬಿದ್ದು, ನಿಜವಾದ ಗೆಲುವನ್ನು ಅಥವಾ ಸಾಧನೆಯನ್ನು ಮರೆತು ಸಾಗುತ್ತಿರುವುದು ಸುಳ್ಳಲ್ಲ.

ಅರ್ಥವಿಲ್ಲದ ಈ ಜೀವನದಲ್ಲಿ ನಗುವುದನ್ನೇ ಮರೆತಿರುವ ನಮಗೆ, ಅದರಿಂದಾಗುವ ಉಪಯೋಗಗಳೇನು, ಒಂದು ನಗುವಿಗೆ ಎಷ್ಟೆಲ್ಲಾ ನಮ್ಮನ್ನು ಉತ್ಸಾಹದ ಚಿಲುಮೆಯಾಗಿಸಿಡುವ ಶಕ್ತಿ ಇದೆ ಎಂಬುದರ ಅರಿವಿಲ್ಲದೆ ಬದುಕುತ್ತಿದ್ದೇವೆ. ಸಣ್ಣ-ಸಣ್ಣ ವಿಷಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಅದನ್ನೇ ದೊಡ್ಡ ಸಂಗತಿಗಳಾಗಿ ಮಾಡಿಕೊಳ್ಳುತ್ತೇವೆ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಅನ್ನುವಂತೆ, ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಗೊಂದಲದ ಗೂಡಾಗಿ ಮಾಡಿಕೊಂಡು ಇದ್ದ ಖುಷಿಯನ್ನು ಹಾಳು

ಹಣಗಳಿಸುವುದನ್ನೇ ಜೀವನದ ದೊಡ್ಡ ಸಾರ್ಥಕತೆ ಅಂದುಕೊಂಡು, ಗಳಿಸುವುದಕ್ಕೆ ನೂರಾರು ದಾರಿಗಳನ್ನು ಹುಡುಕಿಕೊಳ್ಳುತ್ತೇವೆ. ದುಡಿಮೆ ತಪ್ಪಲ್ಲ, ಆದರೆ ದುಡಿಮೆಯೇ ಜೀವನವಾಗಬಾರದು. ಕಷ್ಟ ಎಂದು ಬಂದ ತಕ್ಷಣ ಆಗಬಾರದು ಆಗಿಹೋಗಿದೆ ಎಂದು ನೆಮ್ಮದಿಯನ್ನು ಕಳೆದುಕೊಂಡು ತಾವು ದುಖಿಸುತ್ತಾ, ಮನೆಯವರನ್ನು ಕಣ್ಣೀರಲ್ಲಿ ಕೈ ತೊಳೆಯುವಾಗೆ ಮಾಡುತ್ತೇವೆ. ಆದರೆ ಇದು ನಿಮ್ಮ ತನ್ನವಲ್ಲ, ಸಮಾಜದ ಕಟ್ಟುಪಾಡುಗಳಿಗೆ ಬಿದ್ದು ಇಂತಹ ಗುಣವನ್ನು ಮೈಗೂಡಿಸಿಗೊಂಡಿಸಿಕೊಳ್ಳುವಂತೆ ಮಾಡುತ್ತದೆ.

ಪ್ರತಿಯೊಂದು ಕಾರ್ಯದಲ್ಲಿ ದೇವರು ಒಂದಲ್ಲ ಒಂದು ಬಗೆಯ ನಗುವನ್ನು ಅಥವಾ ಹುಟ್ಟು ಹಾಕುವ ಕಿಮ್ಮತ್ತನ್ನು ಇಟ್ಟಿರುತ್ತಾನೆ ಅಂತೆ, ಆದರೆ ಅದರ ಒಳರ್ಥವನ್ನು ತಿಳಿದು ಕೊಳ್ಳದ ಮಾನವ ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳುತ್ತಾನೆ ಎಂದು ಝೆನ್ ಗುರುಗಳು ಹೇಳುತ್ತಾರೆ.

ಯಾರಿಗೆ ತಿಳಿದಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಹಾಸ್ಯ ಸಂಗತಿಗಳನ್ನು ಸೃಷ್ಟಿಸಿಕೊಂಡು ನಗು ಕಂಡು ಕೊಳ್ಳುವುದು ಅಥವಾ ನಾವು ಹಾಸ್ಯಾಸ್ಪದಕ್ಕೆ ಒಳಗಾಗುವುದರಿಂದ ಯಾವುದೇ ನಷ್ಟವಾಗುವುದಿಲ್ಲ, ಬದಲಾಗಿ ಮನಸ್ಸಿನಲ್ಲಿ ಕಾಡುತ್ತಿರುವ ಗೊಂದಲಗಳಿಗೆ ಮದ್ದಾಗಿ ಪರಿಹಾರ ನೀಡುತ್ತದೆ. ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸಲು ಆಗಲಿಲ್ಲವೆಂದು ಸಂಕಟಪಡುವುದನ್ನು ಬಿಡಿ. ಸುರಿಸುವುದರ ಬದಲಾಗಿ, ಸಮಸ್ಯೆಯನ್ನು ದಿಟ್ಟಿಸಿ ನಿಲ್ಲುವ ಅಸ್ತ್ರ ನಿಮ್ಮಲ್ಲೇ ಇದೆ, ನಿಮ್ಮ ಒಂದು ಸಣ್ಣದಾದ ಕಿರು ನಗೆಗೆ ಇಡೀ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯವಿದೆ.

ಚಾರ್ಲಿಚಾಪಿನ್ ಅಂತ ಮಹಾನ್ ವ್ಯಕ್ತಿಗಳು ಮಡಿಲಲ್ಲಿ ಕೆಂಡವಿಟ್ಟು ಕೊಂಡರು, ಲಕ್ಷಾಂತರ ಜನರ ಮೊಗದಲ್ಲಿ ನಗುವನ್ನು ಮೂಡಿಸಿದರು. ಹಾಗಾಗಿ ಇತರಿಗಾಗಿ ಖುಷಿಯನ್ನು ಕೊಡಬೇಕೆಂದಾ ಕ್ಷಣ ಹಣವೇ ಅಂತಿಮವಲ್ಲ, ಒಂದು ಮುಗುಳ್ನಗೆಗೂ ಅದನ್ನು ದಕ್ಕಿಸುವ ಕಿಮ್ಮತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close