About Us Advertise with us Be a Reporter E-Paper

ಅಂಕಣಗಳು

ಸರಕಾರ ಇತ್ತ ಗಮನ ಹರಿಸಲಿ

ಕೇರಳ ಹಾಗೂ ಕೊಡಗಿನ ದು:ಸ್ವಪ್ನದಿಂದ  ಇನ್ನೂ ಎಚ್ಚೆತ್ತಿಲ್ಲ. ಮಳೆ, ಪ್ರವಾಹದ ರುದ್ರನರ್ತನ ಅಸಂಖ್ಯ ಜನರ ಬಾಳನ್ನು ಛದ್ರಗೊಳಿಸಿದೆ. ನೆಮ್ಮದಿ ಸೂತ್ರ ಕಳಚಿದೆ. ಪ್ರಾಯಶಃ ನಮ್ಮ ಭದ್ರತಾ ಪಡೆಗಳ ಯೋಧರು ಇಲ್ಲದಿದ್ದಿದ್ದರೆ ಸಾವು ನೋವಿನ ಪ್ರಮಾಣವನ್ನು ಊಹಿಸಿಕೊಳ್ಳಲೂ ಆಗದು. ಜಿವದ ಹಂಗು ತೊರೆದು ಈ ಯೋಧರು ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದ್ದಾರೆ. ಎಲ್ಲರೂ ಕೈಚೆಲ್ಲಿ ಕುಳಿತ ಸಂದರ್ಭದಲ್ಲಿ ಯೋಧರು ಎಂತಹ ಪ್ರಕೋಪವನ್ನೂ ಎದುರಿಸಿ, ಮುನಿದ ಪ್ರಕೃತಿಗೆ ಸಡ್ಡು ಹೊಡೆದು ಜನರ ಪ್ರಾಣ ರಕ್ಷಿಸಿದ್ದಾರೆ. ದೇಶ ಕಾಯುವ  ವಿಕೋಪದ ಪರಿಸ್ಥಿತಿಗಳಲ್ಲಿ ಸಾಕ್ಷಾತ್ ಜೀವರಕ್ಷಕರ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಕೇರಳ ಹಾಗೂ ಕೊಡಗಿನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 10 ಸಾವಿರಕ್ಕೂ ಮಿಕ್ಕ ಯೋಧರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಹಾಗೆ ನೋಡಿದರೆ ಶಾಂತಿಪಾಲನಾ ಕಾರ‌್ಯಗಳಿಗೇ ಯೋಧರನ್ನು ನಾವು ಹೆಚ್ಚು ಬಳಸಿಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ಎರಡು ದಿನ ಮಳೆ ಸುರಿದರೆ, ಮುಂಬೈನ ಗಲ್ಲಿಗಳಲ್ಲಿ ಮಳೆನೆರೆ ಆದರೆ, ಮಳೆಗೆ ಚೆನ್ನೈ ಮೊಣಕಾಲುದ್ದ ನೀರಿನಲ್ಲಿ ಮುಳುಗಿದರೆ, ಹೀಗೆ ಎಲ್ಲ ಸಂದರ್ಭಗಳಲ್ಲಿಯೂ ಸೇನಾ  ಯೋಧರನ್ನೆ ನೆಚ್ಚಿಕೊಳ್ಳಬೇಕಾದಂತಹ ಪರಿಸ್ಥಿತಿ ಇದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಇದ್ದರೂ ಅದೂ ಸಹ ಬಹುತೇಕ ಸೇನಾ ಯೋಧರಿಂದಲೇ ಕೂಡಿದೆ. ಸೇನೆ, ತಟ ರಕ್ಷಣಾ ಪಡೆ ಹಾಗೂ ವಾಯು ಪಡೆಯ ಯೋಧರು ಇಂತಹ ಸಂದರ್ಭಗಳಲ್ಲಿ ಅತಿ ಹೆಚ್ಚು ಸೇವಾನಿರತರಾಗುವುದನ್ನು ನೋಡುತ್ತಿದ್ದೇವೆ. ಆದರೆ ಎಲ್ಲಿ ತನಕ ಈ ರೀತಿ ನಾವು ಎಲ್ಲಕ್ಕೂ ಯೋಧರ ಮೇಲೆ ಒತ್ತಡ ಹಾಕುವುದು ಎಂಬ ಪ್ರಶ್ನೆಗೆ ಸದ್ಯದ ಪರಿಸ್ಥಿತಿಯಲ್ಲಿ ಯಾರ ಬಳಿಯೂ ಉತ್ತರವಿಲ್ಲ. ಗಡಿ ರಕ್ಷಣೆಯೇ  ಮುಖ್ಯ ಮತ್ತು ಆದ್ಯ ಕರ್ತವ್ಯವಾಗಿರಬೇಕು. ಪ್ರತಿ ಕ್ಷಣವೂ ಅವರಿಗ ಅದೇ ಪರಮ ಕರ್ತವ್ಯ. ಆದರೆ ನಮ್ಮ ದೇಶದಲ್ಲಿ ಏನೇ ಅಹಿತಕರ ಘಟನೆ ನಡೆದರೂ ಸರಕಾರಗಳು ಮೊದಲು ಮೊರೆ ಹೋಗುವುದೇ ಭದ್ರತಾ ಪಡೆಗಳ ನೆರವಿಗೆ. ಯೋಧರ ಮೇಲೆ ಈ ಒತ್ತಡ ಕಡಿಮೆ ಮಾಡುವ ನಿಟ್ಟನಲ್ಲಿ ಸರಕಾರಗಳು ಯೋಚಿಸಬೇಕಾದ ಸಮಯ ಬಂದಿದೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಕಾರ್ಯಾಚರಿಲೆಂದೇ ವಿಶೇಷ ತರಬೇತಿ ಹೊಂದಿದ ಪಡೆ ರಚಿಸುವ ಜರೂರತ್ತು ಈಗ ಹಿಂದೆಂದಿಗಿಂತ ಹೆಚ್ಚಿದೆ. ಕೇವಲ  ಮಟ್ಟದಲ್ಲಲ್ಲದೇ ರಾಜ್ಯಗಳು ಸಹ ಇಂತಹ ಪಡೆಗಳನ್ನು ರಚಿಸಿ ಅವುಗಳಿಗೆ ಎಲ್ಲ ಅಗತ್ಯ ಸಿಬ್ಬಂದಿ ಮತ್ತು ತರಬೇತು ನೀಡ ಸನ್ನದ್ಧ ಸ್ಥಿತಿಯಲ್ಲಿಡುವ ನಿಟ್ಟನಲ್ಲಿ ಕಾರ್ಯೋನ್ಮುಖವಾಗುವುದು ಅತ್ಯಗತ್ಯವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close