About Us Advertise with us Be a Reporter E-Paper

ಅಂಕಣಗಳು

ತೋಂಟದ ಶ್ರೀಗಳಿಗೆ ಮೌನದ ಮಹತ್ವ ಗೊತ್ತಾಗಲಿ!

ವಿಶ್ಲೇಷಣೆ: ಆರ್.ಎಸ್.ಮಠದ್

ದನ್ನು ಅರಳು ಮರಳೋ, ಹುಚ್ಚುತನವೋ, ತಿಕ್ಕಲುತನವೋ, ಬಾಯಿಚಟವೋ ಏನೆಂದು ಕರೆಯುವುದೋ ಗೊತ್ತಿಲ್ಲ. ಇವೆಲ್ಲವುಗಳ ಮಿಶ್ರಣವೂ ಆಗಿರಬಹುದು. ಗದುಗಿನಲ್ಲಿ ತೋಂಟದಾರ್ಯ ಮಠ ಎಂಬ ಪ್ರಸಿದ್ಧ ಮಠವಿದೆ. ಆ ಮಠಕ್ಕೆ ಮಹಾಂತ ಶ್ರೀ ತ್ರೀವಿಧ ದಾಸೋಹಿ ಜಗದ್ಗುರು ತೋಂಟದ ಸಿದ್ದಲಿಂಗ ಸ್ವಾಮೀಜಿ ಎಂಬ ಮಠಾಧೀಶರಿದ್ದಾರೆ. ಅವರ ಮಾತುಗಳನ್ನು ಯಾರಿಗಾದರೂ ಈ ಅನುಮಾನ ಬರುವುದು ಸಹಜ. ಈ ಸ್ವಾಮೀಜಿ ಬೇರೆ ಯಾವ ಅರಿಷಡ್ವರ್ಗಗಳನ್ನು ನಿಗ್ರಹ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಬಾಯಿ ನಿಯಂತ್ರಣ ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಸ್ವಾಮೀಜಿ ಮಾತಾಡಿದರೆ ನಾಲಗೆ ಮೇಲೆ ಲಂಗುಲಗಾಮು ಇರುವುದಿಲ್ಲ. ಓತಪ್ರೋತವಾಗಿ ಮಾತಾಲಾರಂಭಿಸುತ್ತಾರೆ. ಅದರಲ್ಲೂ ಗಣ್ಯರು ಬಂದರೆ ಸಾಕು, ಅವರನ್ನು ಓಲೈಸಲು ಏನು ಬೇಕಾದರೂ ಹೇಳುತ್ತಾರೆ. ಮಂತ್ರಿಗಳು ಬಂದರೆ ರಾಜಕಾರಣಿಗಳಿಗಿಂತ ನಾಜೂಕಾಗಿ ಮಾತಾಡುತ್ತಾರೆ. ಎದುರಿಗಿದ್ದ ಮಂತ್ರಿಗೆ ಯಾರು ರಾಜಕಾರಣಿ ಎಂಬ ಅನುಮಾನ ಮೂಡಬೇಕು, ಆ ಮಾತಾಡುತ್ತಾರೆ.

ಗದಗ, ಹುಲಕೋಟಿ, ಬೆಟಗೇರಿ ಕಡೆ ಮೊದಲಿನಿಂದಲೂ ಈ ಸ್ವಾಮೀಜಿ ಬಗ್ಗೆ ‘ವಾಚಾಳಿ ಸ್ವಾಮೀಜಿ’ ಎಂದೇ ಕರೆಯುವುದುಂಟು. ಆದರೆ ಪ್ರಸಿದ್ಧ ವಿರಕ್ತ ಸಂಪ್ರದಾಯದ ಹಳೆಯ ಮಠದ ಪೀಠಾಧಿಪತಿ ಆಗಿರುವ ಕಾರಣಕ್ಕೆ ಅವರ ವಾಚಾಳಿತನವನ್ನು ಸಹಿಸಿಕೊಂಡು ಬರುತ್ತಿದ್ದಾರೆ. ಇದನ್ನೇ ಈ ಸ್ವಾಮೀಜಿ ಪಾಂಡಿತ್ಯ, ವಿದ್ವತ್ತು ಎಂದು ಭಾವಿಸಿದ್ದಾರೆ. ಹೀಗಾಗಿ ಇವರ ವಾಚಾಳಿತನ ದಿನದಿಂದ ದಿನಕ್ಕೆ ವಿಪರೀತ ಹಾಗೂ ಅಸಹ್ಯ ಎನ್ನುವಷ್ಟರ ಮಟ್ಟಿಗೆ ಮುಂದುವರಿದಿದೆ.

ಕೆಲವು ಸಲ ಕಾರ್ಯಕ್ರಮಗಳಲ್ಲಿ ಇವರ ‘ದಿವ್ಯ ಸಹಿಸಿಕೊಳ್ಳುವುದು ಯಮಯಾತನೆ. ಕೊನೆಯಲ್ಲಿ ಇವರ ಭಾಣವಿದ್ದರೆ ಶಾಮಿಯಾನ ಹಾಗೂ ಮೈಕಿನವರು ಮಾತ್ರ ಉಳಿದಿರುತ್ತಾರೆ. ಆದರೂ ಪರವಾಗಿಲ್ಲ. ಅವರನ್ನುದ್ದೇಶಿಸಿ ಗಂಟೆಗಟ್ಟಲೆ ಮಾತಾಡುತ್ತಾರೆ. ಇವರಲ್ಲಿರುವ ಒಂದು ಹೆಚ್ಚುಗಾರಿಕೆಯೆಂದರೆ, ಕೇಳಲು ಸಭಿಕರು ಇರಲೇಬೇಕೆಂದಿಲ್ಲ. ಹತ್ತಾರು ಜನರಿದ್ದರೂ ತಮ್ಮ ‘ಕೊರೆತ’ದಿಂದ ಪರಚದೇ ಹೋಗುವುದಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಇದು ವ್ಯಾದಿ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ. ಅವರನ್ನು ನೋಡಲು ಬಂದವರು ಎದ್ದು ಹೊರಟರೂ, ಈ ಸ್ವಾಮೀಜಿ ಅವರನ್ನು ಕುಳ್ಳಿರಿಸಿಕೊಂಡು ಕೊರೆಯುತ್ತಾರೆ. ಬಾಯಿಗೆ ಬಂದಿದ್ದನ್ನು ಹಲುಬುತ್ತಾರೆ.

ಐದಾರು ಹಿಂದೆ ಈ ಸ್ವಾಮೀಜಿ, ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆ ಬಗ್ಗೆ ಮಾತಾಡುತ್ತಾ, ತಮ್ಮ ನಾಲಗೆಯನ್ನು ಎಲ್ಲೆಲ್ಲೋ ಚಾಚಿದರು. ‘ಮಹಾಭಾರತದ ದ್ರೌಪದಿ ಕತೆ ಗೊತ್ತಲ್ಲ, ಆಕೆಯನ್ನು ಐದು ಮಂದಿ ಪಾಂಡವರು 20ಪೈಸೆಗೆ ಹಂಚಿಕೊಂಡಂತೆ ಹಂಚಿಕೊಂಡರು. ಒಬ್ಬಳನ್ನು ಐವರು ಭೋಗಿಸುವುದು ಸರಿಯೇ? ರಾಮಾಯಣದಲ್ಲೂ ಸೀತೆ ಪಡಬಾರದ ಕಷ್ಟ ಅನುಭವಿಸಿದಳು’ ಎಂದು ಮಾತಾಡಿದರು.

ಸ್ವಾಮೀಜಿ ಅವರ ಮಹಾಭಾರತ ಹಾಗೂ ರಾಮಾಯಣದ ಜ್ಞಾನ ಎಷ್ಟರಮಟ್ಟಿಗಿದೆ ಎಂಬುದು ಅರ್ಥವಾಗಿರಬೇಕಲ್ಲ? ಅವರಿಗೆ ದ್ರೌಪದಿ ವ್ಯಕ್ತಿತ್ವವೇ ಗೊತ್ತಿಲ್ಲ, ಸೀತೆಯ ಗೊತ್ತಿಲ್ಲ ಎಂದಂತಾಯಿತು. ಸ್ವಾಮೀಜಿಯವರು ತಮ್ಮ ಮಠದಲ್ಲಿ ಹತ್ತಾರು ಭಕ್ತರನ್ನು, ಶಿಷ್ಯರನ್ನು ಇಟ್ಟುಕೊಂಡಿದ್ದಾರಲ್ಲ, ಕೆಲವರನ್ನು ತಮ್ಮ ಗುಲಾಮರಂತೆ ಇಟ್ಟುಕೊಂಡಿದ್ದಾರಲ್ಲ, ಅದು ಶೋಷಣೆ ಅಲ್ಲವೇ?

ಇತ್ತೀಚೆಗೆ ಪ್ರಾಥಮಿಕ ಶಿಕ್ಷಣ ಖಾತೆ ಸಚಿವ ಮಹೇಶ ಅವರು ಮಠಕ್ಕೆ ಭೇಟಿ ಕೊಟ್ಟಿದ್ದರು. ಸ್ವಾಮೀಜಿಗೆ ಮಂತ್ರಿಯನ್ನು ಓಲೈಸುವ ಚಪಲ ಶುರುವಾಯಿತು. ಅದರಲ್ಲೂ ದಲಿತರನ್ನು ಸುಖಾಸುಮ್ಮನೆ ಹೊಗಳುವ ಖಯಾಲಿ ಆರಂಭವಾಯಿತು. ದಲಿತರನ್ನು ಹೊಗಳಲಿ, ಅಭ್ಯಂತರವಿಲ್ಲ. ಆದರೆ ದಲಿತರನ್ನು ಹೊಗಳುವ ಭರದಲ್ಲಿ ಬ್ರಾಹ್ಮಣರನ್ನು ನಿಂದಿಸಿದರು. ಸ್ವತಃ ಲಿಂಗಾಯತರನ್ನೂ ಟೀಕಿಸಿದರು. ಎದುರು ತಾನು ಜಾತ್ಯಾತೀತ, ಪ್ರಗತಿಪರ ಹಾಗೂ ದಲಿತಪರ ಎಂದು ಬಿಂಬಿಸಿಕೊಳ್ಳುವ ಅತ್ಯುತ್ಸಾಹ.

ಡಾ.ಅಂಬೇಡ್ಕರ್ ಅವರನ್ನು ಹೊಗಳುವ ಭರದಲ್ಲಿ ಶಂಕರ, ಮಧ್ವ, ಬುದ್ಧ, ಬಸವಣ್ಣನ ಬಗ್ಗೆ ಲಘುವಾಗಿ ಮಾತಾಡಿದರು. ಈ ಮೂವರಿಂದ ಸಾಧ್ಯವಾಗದ್ದನ್ನು ಡಾ.ಅಂಬೇಡ್ಕರ್ ಮಾಡಿತೋರಿಸಿದರು ಎಂದು ಹೇಳಿದರು.

ಹೇಳಲಿ, ಪರವಾಗಿಲ್ಲ. ಆದರೆ ಚಿತ್ಪಾವನ ಬ್ರಾಹ್ಮಣರ ಬಗ್ಗೆ ಪ್ರಸ್ತಾಪಿಸುತ್ತಾ, ‘ಇವರು ಬಹಳ ಕೆಟ್ಟ ಬ್ರಾಹ್ಮಣರು,’ ಎಂದರು. ಲಿಂಗಾಯತರಲ್ಲೂ ನಾವು ನಾಲ್ಕೈದು ಮಂದಿ ಹೀಗೆ(ಒಳ್ಳೆಯವರು) ಇದ್ದೇವೆ. ಉಳಿದವರೆಲ್ಲ ಕೆಟ್ಟ ಲಿಂಗಾಯತರು’ ಎಂದು ಸಮೂದಾಯವನ್ನೂ ಟೀಕಿಸಿದರು. ಇದು ದಾಸ್ಯತ್ವದ ಪ್ರತೀಕ. ಕೆಲವರಿಗೆ ಇಂಥ ಖಯಾಲಿ ಇರುತ್ತದೆ. ಬೇರೆಯವರನ್ನು ಮೆಚ್ಚಿಸಲು ಯಾವ ಹಂತವನ್ನಾದರೂ ತಲುಪುತ್ತಾರೆ, ಕೊನೆಗೆ ಸ್ವಾಭಿಮಾನ, ಆತ್ಮಗೌರವವನ್ನು ಮರೆತು ತಮ್ಮನ್ನೂ ಟೀಕಿಸಿಕೊಳ್ಳುತ್ತಾರೆ. ಮಠಕ್ಕೆ ಬಂದ ದಲಿತ ಮಂತ್ರಿ ಮುಂದೆ ಡಾ.ಅಂಬೇಡ್ಕರ್ ಅವರನ್ನು ಹೊಗಳಿ ತಾವು ದೊಡ್ಡವರೆಂದು ಕರೆಯಿಸಿಕೊಳ್ಳುವುದಷ್ಟೇ ಅವರ ಆ ಕ್ಷಣದ ಚಪಲ, ತೆವಲು. ಮಂತ್ರಿಯಿಂದ ಯಾವ ಕೆಲಸ ಆಗಬೇಕಿತ್ತೋ ಗೊತ್ತಿಲ್ಲ. ಅವರನ್ನು ಓಲೈಸಲು ತಮ್ಮನ್ನು ‘ಲಿಂಗಿ ಬ್ರಾಹ್ಮಣ’ ಎಂದೂ ಕರೆದುಕೊಂಡರು.

ಇಂಥ ಪ್ರವೃತ್ತಿಯಿರುವವರು ಹೇಗೆ ಸ್ವಾಮೀಜಿಯಾಗುತ್ತಾರೋ, ಹೇಗೆ ತಮ್ಮ ಸಮೂದಾಯದ ಗೌರವ, ಪ್ರತಿಷ್ಠೆ ಕಾಪಾಡುತ್ತಾರೋ ಆ ಬಸವಣ್ಣನೇ ಬಲ್ಲ! ಮಠಕ್ಕೆ ಬಂದ ದಲಿತ ಮಂತ್ರಿ ಮುಂದೆ ಅಂಬೇಡ್ಕರ್ ಅವರನ್ನು ಹೊಗಳಿ, ಬಸವಣ್ಣನ ಬಗ್ಗೆ ಕೇವಲವಾಗಿ ಮಾತಾಡಿದರು. ಮಂತ್ರಿಯನ್ನು ಖುಷಿಪಡಿಸುವುದಷ್ಟೇ ಸ್ವಾಮೀಜಿಯ ಆ ಕ್ಷಣದ ಕಾಳಜಿಯಾಗಿತ್ತು.

ತಮ್ಮ ಎದುರಿಗೆ ಕೆಮರಾ ಇದೆ ಎಂಬುದನ್ನೂ ಅರಿಯದೇ ತೋಂಟದ ಸ್ವಾಮೀಜಿ ನಾಲಗೆ ಹರಿಬಿಟ್ಟಿದ್ದರು. ಸ್ವಾಮೀಜಿಯಾದವರು ಎಲ್ಲ ಜಾತಿಧರ್ಮಗಳನ್ನು ಸರಿ ಸಮವಾಗಿ, ಗೌರವದಿಂದ ಕಾಣಬೇಕು ಎಂಬ ಕನಿಷ್ಠ ಇಲ್ಲದೇ ಮಠಾಧಿಪತಿ ಎಂದು ಕರೆಯಿಸಿಕೊಂಡವರು ಮತ್ತೊಂದು ಜಾತಿ ಬಗ್ಗೆ ಇಷ್ಟು ಲಘುವಾಗಿ ಮಾತಾಡಿದ್ದು ಸರ್ವಥಾ ಒಪ್ಪುವಂಥದ್ದಲ್ಲ. ಸ್ವಾಮೀಜಿಯವರು ಬ್ರಾಹ್ಮಣರ ಬಗ್ಗೆ ಎಂಥ ವಿಷ ತುಂಬಿಕೊಂಡಿದ್ದಾರೆಂಬುದು ಗೊತ್ತಾಗುತ್ತದೆ. ತಮ್ಮ ‘ಡಾಕ್ಟರ್’, ‘ಮಹಾಸ್ವಾಮಿ’, ತ್ರಿವಿಧ ದಾಸೋಹಿ ಎಂದೆಲ್ಲ ಕರೆದುಕೊಳ್ಳುವ ಇಂಥ ಸ್ವಾಮೀಜಿಯವರ ಜಾತಿವಾದ ಸಮಾಜಕ್ಕೆ ಅಪಾಯಕಾರಿ. ಇವರು ಜಾತಿಜಾತಿಗಳ ನಡುವೆ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು.

ಅಷ್ಟಕ್ಕೂ ಚಿತ್ಪಾವನ ಬ್ರಾಹ್ಮಣರು ಈ ಸ್ವಾಮೀಜಿಯ ಗಂಟು ಕದ್ದಿಲ್ಲ. ಕೆಟ್ಟವರು, ಒಳ್ಳೆಯವರು ಎಲ್ಲಾ ಇದ್ದಾರೆ. ಒಂದು ಜಾತಿಯನ್ನು ಉದಹರಿಸಿ ಹೀಗೆ ಹೇಳುವುದು ಸ್ವಾಮೀಜಿಯವರಿಗೆ ಭೂಷಣವಲ್ಲ. ಸಮಾಜಕ್ಕೆ ಉಪದೇಶ ಮಾಡುವ ಸ್ವಾಮೀಜಿಯವರು, ಬೇರೆಯವರಿಂದ ಪಾಠ ಮಾಡಿಸಿಕೊಳ್ಳಬಾರದು. ಸ್ವಾಮೀಜಿಗೆ ಮೌನದ ಮಹತ್ವ ಅರಿವಾಗಲಿ.

Tags

Related Articles

Leave a Reply

Your email address will not be published. Required fields are marked *

Language
Close