About Us Advertise with us Be a Reporter E-Paper

ಅಂಕಣಗಳು

ನಿಷ್ಪಕ್ಷಪಾತ ತನಿಖೆ ಆಗಲಿ

ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಮಠದ ಲಕ್ಷ್ಮಿವರ ಶ್ರೀಗಳ ಅಸಹಜ ಸಾವು ಸಾರ್ವಜನಿಕ ವಲಯದ ಕಳವಳಕ್ಕೆ ಕಾರಣವಾಗಿದೆ. ಸ್ವಾಮೀಜಿ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ ಎಂದು ಆಸ್ಪತ್ರೆ  ಹೇಳಿದ್ದಾರೆ. ಶ್ರೀಗಳ ಪಾರ್ಥೀವ ಶರೀರದ ಪರೀಕ್ಷೆಯೂ ನಡೆದಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾುತ್ತಿದೆ. ಲಕ್ಷ್ಮೀವರ ತೀರ್ಥರು ಮೊದಲಿಂದಲೂ ವಿವಾದಗಳಿಂದಲೇ ಹೆಸರಾದವರು. ಕೃಷ್ಣಮಠದ ರೀತಿ-ರಿವಾಜು, ನೇಮ-ನಿಷ್ಠೆಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದ ಶ್ರೀಗಳನ್ನು ಪೇಜಾವರ ಶ್ರೀಗಳು ಸೇರಿದಂತೆ ಅಷ್ಟಮಠದ ಇತರೆ ಸ್ವಾಮೀಜಿಗಳು ದೂರವೇ ಇಟ್ಟಿದ್ದರು. ಈಗ ಅವರು ವಿಧಿವಶರಾದರೂ ಮಠದ ಬೇರೆ ಸ್ವಾಮೀಜಿಗಳು ಅವರ ಪಾರ್ಥೀವ ಶರೀರದ ದರ್ಶನಕ್ಕೆ ಬಂದಿಲ್ಲ, ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಂಡಿಲ್ಲ. ಲಕ್ಷ್ಮೀವರರು ಎಂದೂ ಸನ್ಯಾಸಿ ಜೀವನ ನಡೆಸಿರಲಿಲ್ಲ, ಎಲ್ಲ  ವಿಷಯ ಗಳೊಂದಿಗೇ ಬದುಕಿದ್ದರು. ಹೀಗಾಗಿ ಅವರನ್ನು ಸ್ವಾಮೀಜಿಯಾಗಿಯೇ ಪರಿಗಣಿಸಿರಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಲಕ್ಷ್ಮೀವರರ ಬಗ್ಗೆ ಮಠದಲ್ಲಿ ಅನ್ಯರಿಗೆ ಎಂಥ ತಿರಸ್ಕಾರ ಇತ್ತು ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ. ಕೃಷ್ಣ ಮಠದ ಇತರ ಸ್ವಾಮೀಜಿಗಳ ವಿರುದ್ಧ ಕೆಂಡ ಕಾರುವುದನ್ನೇ ಕಾಯಕ ಮಾಡಿಕೊಂಡಿದ್ದ ಶೀರೂರು ಶ್ರೀಗಳು ತನ್ನಿಮಿತ್ತ ಸಾಕಷ್ಟು ದ್ವೇಷ, ಹಗೆ ಕಟ್ಟಿಕೊಂಡಿದ್ದರು. ಸ್ವಾಮೀಜಿಯ ಮೂಲ ಕಾಯಕ ದೇವರಪೂಜೆ, ಅನುಷ್ಠಾನ. ಆದರೆ ಅಷ್ಟಮಠದ ಪಟ್ಟದ ದೇವರು ವಿಠಲನ ಪೂಜೆಯಿಂದ  ದೂರ ಇಡಲಾಗಿತ್ತು. ಪಟ್ಟದ ದೇವರ ಪೂಜೆ ವಿಚಾರದಲ್ಲಿ ತಮಗೆ ಅನ್ಯಾಯವಾಗಿದ್ದು, ಈ ಬಗ್ಗೆ ಮುಂದಿನ ವಾರ ಕೋರ್ಟ್ ಮೆಟ್ಟಿಲು ಹತ್ತುವುದಾಗಿಯೂ ಲಕ್ಷ್ಮೀವರರು ಹೇಳಿಕೊಂಡಿದ್ದರು. ಅದರ ಬೆನ್ನಲ್ಲೇ ರಕ್ತವಾಂತಿ ಮಾಡಿಕೊಂಡು ಅವರು ವಿಧಿವಶರಾಗಿರುವುದು ನಾನಾ ಸಂಶಯಗಳಿಗೆ ಕಾರಣವಾಗಿದೆ.  ಹೀಗಾಗಿ ಈ ಪ್ರಕರಣ ಅತೀ ಸೂಕ್ಷ್ಮವೂ, ಗಂಭೀರವೂ ಆಗಿದೆ. ಸಾವಿನ ನೈಜ ಕಾರಣ ಬೇಧಿಸುವುದು ಬಹುದೊಡ್ಡ ಸವಾಲಾಗಿಯೂ ಪರಿಣಮಿಸಿದೆ. ಲಕ್ಷ್ಮೀವರ ತೀರ್ಥರ ವಿರುದ್ಧ ಯಾವುದೇ ಆರೋಪಗಳಿರಲಿ, ಅವರ ನೇಮ-ನಿಷ್ಠೆಗಳ ಬಗ್ಗೆ ಎಂಥದ್ದೇ  ‘ಬಲವಂತದ ಸಾವು’ ಯಾವುದಕ್ಕೂ ಪರಿಹಾರವೂ ಅಲ್ಲ, ಪರ್ಯಾಯವೂ ಅಲ್ಲ. ಹೀಗಾಗಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ಸತ್ಯ ಮಠದಾಚೆಗೂ ತಲುಪಬೇಕಿದೆ!

Tags

Related Articles

Leave a Reply

Your email address will not be published. Required fields are marked *

Language
Close