About Us Advertise with us Be a Reporter E-Paper

ವಿ +

ಇಳಿಸೋಣ ಬನ್ನಿ ಹರೆಯದ ಹೊರೆಯ

• ಜಯಶ್ರೀ.ಜೆ. ಅಬ್ಬಿಗೇರಿ

‘ಚಿಕ್ಕವಳಿದ್ದಾಗ ಮುದ್ದು ಮುದ್ದಾಗಿ ಮಾತನಾಡುತ್ತ, ನಮ್ಮೆಲ್ಲರಿಗೆ  ‘ಕಣ್ಮಣಿ’, ಎಸ್.ಎಸ್.ಎಲ್.ಸಿ. ಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡಿದ್ದಳು. ನಮಗೂ ಅವಳ ಪಾಲಕರಾಗಿದ್ದಕ್ಕೆ ಹೆಮ್ಮೆ ಇತ್ತು. ಈಗ  ಸೆಕೆಂಡ್ ಪಿಯುಸಿ ಓದುತ್ತಿರುವ ಮಗಳು ಕಣ್ಮಣಿ,  ಇತ್ತೀಚಿಗೆ ಏಕೋ ಏನೋ ಓದಿ ನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದಾಳೆ. ಇದು ನಮ್ಮನ್ನು ಚಿಂತೆ ಗೀಡು ಮಾಡಿದೆ. ಕೇಳಿದರೆ ನಾನು ಓದುತ್ತೀನಿ. ನೀವು ಯಾರೂ ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅಂತಾಳೆ. ಓದಿನಲ್ಲಿ ಚುರುಕಾಗಿದ್ದ ಕಣ್ಮಣಿ ಯಾಕೆ ಹೀಗೆ ಆಡುತ್ತಿದ್ದಾಳೆ  ತಿಳಿಯುತ್ತಿಲ್ಲ’ ಅನ್ನುವಷ್ಟರಲ್ಲಿ ಗೆಳತಿ ಸುಜಾತಾಳ ಕಣ್ಣು ತೇವವಾಗಿದ್ದವು.

ನಾನು ನೋಡಿದಂತೆ ಕಣ್ಮಣಿ ತುಂಬಾ ಮಹಾತ್ವಾಕಾಂಕ್ಷೆಯುಳ್ಳ ಹುಡುಗಿ. ಅದೇಕೆ ಹೀಗೆ ಮಾಡುತ್ತಿದ್ದಾಳೆ? ಎಂದು ಅವಳನ್ನು  ಪ್ರೀತಿಯಿಂದ ಕೇಳಿದರೆ, ಆಂಟಿ, ‘ನನಗೂ ಅಪ್ಪ ಅಮ್ಮನ ಟೆನ್ಷನ್ ಅರ್ಥ ಆಗುತ್ತೆ. ಹೆಚ್ಚು ಅಂಕ ಗಳಿಸಿ ನಾನೇ ಅಂದುಕೊಂಡ ಹಾಗೆ ಡಾಕ್ಟರ್ ಆಗಬೇಕೂಂತ ಇದ್ದೀನಿ. ಆದರೆ ಓದಿನಲ್ಲಿ ಮನಸ್ಸು ನಿಲ್ಲು ತ್ತಿಲ್ಲ. ನನ್ನ ತಲೆಯಲ್ಲಿ ಬೇಡವಾದ ವಿಚಾರಗಳು, ಕಲ್ಪನೆಗಳು ಬರು ತ್ತಿವೆ. ಗೆಳತಿಯರೊಂದಿಗೆ ಹರಟಬೇಕು,  ಅನ್ನಿಸು ತ್ತದೆ. ಹುಡುಗರು ನನ್ನ ಸೌಂದರ್ಯದ ಕುರಿತು ಕಮೆಂಟ್ ಪಾಸ್ ಮಾಡಿದರೆ ಏನೋ ಒಂಥರಾ ಖುಷಿ. ಯಾವುದೇ ವಿಷಯಕ್ಕೆ ಯಾರಾದರೂ ಬೈದರೆ ಆ ದಿನವೆಲ್ಲ ಮೂಡ್ ಹಾಳಾಗಿ ಹೋಗುತ್ತೆ.  ಅಭ್ಯಾಸ ಮಾಡೋಕೆ ಆಗಲ್ಲ. ಈ ತರದ್ದು ಒಳ್ಳೆಯ ದಲ್ಲ ಅಂತ ನನ್ನ ಬುದ್ಧಿ ಹೇಳುತ್ತಿದ್ದರೂ ಮನಸ್ಸು ಮಾತ್ರ ಕನ್ನಡಿಯ ಮುಂದೆ ನಿಲ್ಲು ವಂತೆ ಮಾಡುತ್ತದೆ. ಇಷ್ಟು ದಿನ ಅಪ್ಪ ಅಮ್ಮ ತರುತ್ತಿದ್ದ ಸಾಮಾನು ಗಳನ್ನು ಇಷ್ಟ ಪಡುತ್ತಿದ್ದೆ. ಈಗೀಗ  ತಂದು ಅಲಂಕರಿಸಿ ಕೊಳ್ಳಬೇಕು ಅನ್ನೋ ಹಂಬಲ ಹೆಚ್ಚುತ್ತಿದೆ. ಓದಿ ಅಪ್ಪ ಅಮ್ಮನಿಗೆ ಹೆಮ್ಮೆ ತರುವ ಹಾಗೆ ನಡೆದುಕೊಳ್ಳಬೇಕು ಅನ್ನೋ  ಉತ್ಸಾಹ ಮನ ದಲ್ಲಿದ್ದರೂ  ಈ ತೆರನಾದ ಯೋಚನೆಗಳು ನನ್ನ ಪಾಡಿಗೆ ಓದೋಕೆ ಬಿಡುತ್ತಿಲ್ಲ’ ಎಂದು  ಅಸಹಾಯಕತೆಯನ್ನು ವ್ಯಕ್ತ ಪಡಿಸಿದಳು.

ಮನಸ್ಸು  ಗೊಂದಲದ ಬೀಡು

ಹೌದು ಹರೆಯಕ್ಕೆ ಹೊಸದಾಗಿ ಕಾಲಿಟ್ಟ ಮಕ್ಕಳ ಮನಸ್ಥಿತಿ ಅವರ ಲ್ಲಿಯೇ ತಳಮಳವನ್ನು ಹುಟ್ಟಿಸುತ್ತದೆ. ತಮಗೇನಾಗುತ್ತಿದೆ ಅಂತ ತಿಳಿಯದೇ ಗೊಂದಲಕ್ಕೀಡಾಗುವ ಹರೆಯದ ಮಕ್ಕಳಿಗೆ ತಮ್ಮ ಮೈ  ಬಗ್ಗೆ ವಿರುದ್ಧ ಲಿಂಗಿಗಳ ಬಗ್ಗೆ ಆಕರ್ಷಣೆ ಹೆಚ್ಚುತ್ತದೆ. ಎಲ್ಲರ ಮುಂದೆ ತಾನು ಕೇಂದ್ರ ಬಿಂದುವಿನಂತಿರಬೇಕೆಂದು ಹಂಬಲಿಸುತ್ತಾರೆ. ಇದು ವಯೋ ಸಹಜ. ಇದನ್ನು ನಿಭಾಯಿಸು ವುದು ಮಕ್ಕಳಿಗೆ ತುಂಬಾ ಕಷ್ಟ . ಕೆಲ ಬಾರಿ ಅಸಹಾಯಕರೆಸಿಕೊಂಡ ಹರೆಯದ  ಮಕ್ಕಳು ಮುಂಗೋಪದಿಂದಲೇ ಉತ್ತರಿಸುತ್ತಾರೆ. ಪಾಲಕರ ಮಾತಿಗೆ ಎದುರು ಮಾತನಾಡುವುದನ್ನು ಕಲಿತುಕೊಳ್ಳು ತ್ತಾರೆ. ಮನದಲ್ಲಿ ಏನೋ ಹೇಳಲಾಗದ ಚಡಪಡಿಕೆ. ಅಂಗಾಂಗ ಗಳಲ್ಲಿ ಆಗುವ ಬದಲಾವಣೆಗೆ ಅಂಜುತ್ತಾರೆ. ಯಾರೊಂದಿಗೆ ಹಂಚಿಕೊಳ್ಳಬೇಕು ತಿಳಿಯುವುದಿಲ್ಲ. ಇವರಿಗೆ ಬೇಕಿರುವುದು  ಕಾಳಜಿಪೂರ್ವಕ ಬೆಂಬಲದ ಮಾತುಗಳೇ ಹೊರತು ನಿಂದಿಸುವ  ನುಡಿಗಳಲ್ಲ. ಅನುಮಾನದ ನೋಟವಲ್ಲ.

Tags

Related Articles

Leave a Reply

Your email address will not be published. Required fields are marked *

Language
Close