About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

“ಬಿಜೆಪಿಗೆ ಸೊನ್ನೆ ಬರುವಂತೆ ಮಾಡುತ್ತೇವೆ”: ಅಖಿಲೇಶ್‌, ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಬಿಜೆಪಿ ವಿರುದ್ಧ ಸಮರ ಸಾರಲು ಸಮಾನ ಮನಸ್ಕ ವೇದಿಕೆ ನಿರ್ಮಿಸಿಕೊಳ್ಳುತ್ತಿರುವ ವಿಪಕ್ಷಗಳ ದೊಡ್ಡ ರ‍್ಯಾಲಿ ಸಂದರ್ಭ ಮಾತನಾಡಿದ ತೃಣಮೂಲ ಕಾಂಗ್ರೆಸ್‌ ವರಿಷ್ಠೆ ಮಮತಾ ಬ್ಯಾನರ್ಜಿ, “ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೊನ್ನೆ ಸಿಗುವಂತೆ ನೀವು ಮಾಡಿ, ಅದನ್ನು ಪಶ್ಚಿಮ ಬಂಗಾಳದಲ್ಲಿ ನಾವು ಮಾಡುತ್ತೇವೆ” ಎಂದು ಸಮಾಜವಾದಿ ಪಕ್ಷದ ಅಖಿಲೇಸ್‌ ಯಾದವರ‍ನ್ನು ಉದ್ದೇಶಿಸಿ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅಖಿಲೇಶ್‌, “ಎಸ್‌ಪಿ ಹಾಗು ಬಿಎಸ್‌ಪಿಗಳು ಒಗ್ಗಟ್ಟಾದ ಕಾರಣ ದೇಶದಲ್ಲಿ ಸಂತಸದ ಅಲೆ ಎದ್ದಿದ್ದುಮ ಬಿಜೆಪಿ ಪಾಳಯದಲ್ಲಿ ಚಿಂತೆ ಹೆಚ್ಚುವಂತೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಒಂದೇ ಒಂದು ಕ್ಷೇತ್ರ ಗೆಲ್ಲಲು ಬಿಜೆಪ ಮೀಟಿಂಗ್‌ಗಳ ಮೇಲೆ ಮೀಟಿಂಗ್‌ಗಳನ್ನು ಮಾಡುತ್ತಿದೆ” ಎಂದು -ಯಾದವ್‌ ತಿಳಿಸಿದ್ದಾರೆ.

ಇದೇ ಸಂದರ್ಭ ತಮ್ಮ ಬಣದ ಪ್ರಧಾನ ಮಂತ್ರಿ ಅಭ್ಯರ್ಥಿ ಕುರಿತಂತೆ ಮಾತನಾಡಿದ ಅಖಿಲೇಶ್, “ನಮ್ಮ ಪ್ರಧಾನಿ ಯಾರೆಂದು ಜನರು ತೀರ್ಮಾನಿಸುತ್ತಾರೆ. ಆದರೆ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ” ಎಂದು ಹೇಳಿದ್ದಾರೆ.

 

Related Articles

Leave a Reply

Your email address will not be published. Required fields are marked *

Language
Close