About Us Advertise with us Be a Reporter E-Paper

ಅಂಕಣಗಳು

‘ನಾನು ಭಾರತೀಯ’ ಎಂದು ಇವರು ಮೊದಲು ಹೇಳಲಿ!

ಕಳಕಳಿ: ದೇ. ವಿ. ಮಹೇಶ್ವರ ಹಂಪಿನಾಯ್ಡು, ಬೆಂಗಳೂರು

ರುಣನ ಭಯಾನಕ ಭೋರ್ಗರೆತ, ಜಲಪ್ರವಾಹದಿಂದ ನಮ್ಮ ನಾಡಿನ ಕೊಡಗು ಹಾಗೂ ಪಕ್ಕದ ರಾಜ್ಯ ಕೇರಳದಲ್ಲಿ ಎಂದೆಂದೂ ಸಾವು ನೋವು ಅನುಭವಿಸಿದೆ. ಮನೆ ಮಹಲುಗಳ ನೀರುಪಾಲಾಗಿ ಬೀದಿಗೆ ಬಿದ್ದಿರುವ ನಾಗರಿಕರ ಜೀವನವನ್ನು ಸಂತೈಸಲು ನಾಡಿಗೆ ನಾಡೇ ಎಚ್ಚೆತ್ತು ಮಾನವೀಯತೆ ಮೆರೆಯುತ್ತಿದೆ. ಸಂಘ ಸಂಸ್ಥೆಗಳು, ಕಾರ್ಖಾನೆಗಳು, ಮಳಿಗೆಗಳು, ಬ್ಯಾಂಕುಗಳು, ಬೀದಿವ್ಯಾಪಾರಿಗಳು, ಜನಪ್ರತಿನಿಧಿಗಳು, ಪತ್ರಿಕೋದ್ಯಮ, ಟಿವಿ ಮಾಧ್ಯಮ, ಮಠ ಮಂದಿರಗಳು, ಸ್ವಾಮೀಜಿಗಳು ಸಹಾ ರಸ್ತೆಗಿಳಿದು ದೇಣಿಗೆಯನ್ನು ಸಂಗ್ರಹಿಸಿ ತಮ್ಮ ನೈತಿಕತೆಯನ್ನು ಮೆರೆದಿದ್ದಾರೆ.

ಇದರ ಪರಮಾವಧಿ ಎಂಬಂತ್ತೆ ಕಳೆದ ತಿಂಗಳು ನಮ್ಮ ಧಾರವಾಡದಲ್ಲಿ ಭಿಕ್ಷುಕರೂ ಸಹ ತಮ್ಮ ಗಳಿಕೆಯ ಭಾಗವನ್ನು ಕೊಡಗಿಗಾಗಿ ನೀಡಿದ್ದಾರೆ. ಇದು ನಿಜಕ್ಕೂ ಮಾನವೀಯತೆಯ ಮಮಕಾರವನ್ನು ಪ್ರಚುರಪಡಿಸುತ್ತದೆ. ಆದರೆ ಮಾಡುವುದಕ್ಕೆ ‘ಕೆಲಸವಿಲ್ಲದವನು ಕೆರೆದು ಕೊಂಡು ಗಾಯ ಮಾಡಿಕೊಂಡನಂತೆ’ ಎಂಬ ಗಾದೆ ಮಾತಿನಂತೆ ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಯಾದ ಗೌರಿ ಲಂಕೇಶ್ ಸಾವಿನ ವಾರ್ಷಿಕೋತ್ಸವ ಆಚರಿಸಿದ ಸ್ವಯಂಘೋಷಿತ ಪ್ರಗತಿಪರರು, ಬುದ್ದಿಜೀವಿಗಳು, ವಿಚಾರವ್ಯಾದಿಗಳು ನಾನು ಗೌರಿ, ನಾನು ನಗರ ನಕ್ಸಲ್ ಎಂದು ಕುತ್ತಿಗೆ ಪಟ್ಟಿ ನೇತಾಕಿಕೊಂಡು ಸಾರ್ವಜನಿಕರಲ್ಲಿ ಸಾಮಾಜಿಕ ತಾಣಗಳಲ್ಲಿ ಕಾಮಿಡಿ ಕಿಲಾಡಿಗಳಂತೆ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇದು ಊರು ಹೊತ್ತಿ ಉರಿಯುತ್ತಿದ್ದರೂ ಅಸ್ತಿತ್ವವನ್ನು ಈ ಮೂಲಕವಾದರೂ ಉಳಿಸಿಕೊಳ್ಳಬೇಕೆಂಬ ಹಪಾಪಿಸುವ ಮನಸ್ಥಿತಿ ಇದೆಂದರೆ ತಪ್ಪಾಗಲಾರದು.

ಯಾರ ಸಾವೂ ಸಂಭ್ರಮವಲ್ಲ. ದುಷ್ಕರ್ಮಿಗಳಿಂದ ಹತ್ಯೆಯಾದ ಗೌರಿಲಂಕೇಶ್ ಎಂಬ ಹೆಣ್ಣಿನ ಸಾವು ನಿಜಕ್ಕೂ ಖಂಡನೀಯವೇ. ಆಕೆಯನ್ನು ವ್ಯವಸ್ಥಿತವಾಗಿ ಸಂಚು ರೂಪಿಸಿ ಹತ್ಯೆಗೈದ ಯಾರೇ ಆಗಲಿ ಅವರನ್ನು ಕಾನೂನಿ ವ್ಯಾಪ್ತಿಯಲ್ಲಿ ಶಿಕ್ಷಿಸಲೇ ಬೇಕಿದೆ. ಕಳೆದ ತಿಂಗಳಷ್ಟೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ನಿಧನರಾದರು. ಅಜಾತಶತ್ರು ಎನಿಸಿದ್ದ ಅವರ ಮರಣಕ್ಕೆ ಪಕ್ಷಾತೀತವಾಗಿ, ಸೈದ್ಧಾಂತಿಕ ಭೇದಗಳನ್ನೂ ದೂರಸರಿಸಿ ಇಡೀ ವಿಶ್ವವೇ ಮಿಡಿಯಿತು. ಒಬ್ಬ ವ್ಯಕ್ತಿಯ ಸಾವಿನ ನಂತರ ಆತನ ಪರವಾಗಿ ಯಾರು ಎಂತವರು ವಿ?ಾದ ವ್ಯಕ್ತಪಡಿಸುತ್ತಾರೆ ಎಂಬುದರ ಮೇಲೆ ಆತನ ಬದುಕು, ಆದರ್ಶ, ಸಾಧನೆಯು ಗಣನೆಗೆ ಒಳಪಡುತ್ತದೆ. ಹಾಗೆಯೇ ಗೌರಿಲಂಕೇಶ್ ಸಾವಿನ ನಂತರ ಯಾರೆಲ್ಲಾ ಭೋರ್ಗರೆದರೆಂಬುದನ್ನು ಪರಾಮರ್ಶಿಸಿದರೆ ಹಲವಾರು ಪ್ರಶ್ನೆಗಳು ಹುಟ್ಟುತ್ತದೆ.

ಇದನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ ಪ್ರತಿಯೊಬ್ಬನಿಗೂ ಇದೆ. ಮೊದಲಿಗೆ ಹತ್ಯೆಯಾದ ಗೌರಿ ಲಂಕೇಶ್ ಮೇಲೆ ರಾಜ್ಯಾದ್ಯಾಂತ ಐವತ್ತಕ್ಕೂ ಮೀರಿ ನಾನಾ ತರಹದ ಸಮಾಜ ಸ್ವಾಸ್ಥ್ಯ ಹಾಳುಗೆಡವಿದ, ಮಾನಹಾನಿಗೊಳಿಸಿದ ಮೊಕದ್ದಮೆಗಳಿವೆ. ಆಕೆ ಘೋಷಿಸಿಕೊಂಡ ಪತ್ರಿಕೋದ್ಯಮದಿಂದ ಸಮಾಜಕ್ಕೆ ನೀಡಿದ ಕೊಡುಗೆಗಳೆಂದರೆ ವಾಚಾಮಗೋಚರ ಬೈಗುಳಗಳು, ವಿಕೃತ ವರದಿಗಳು, ಅನಾಗರಿಕ ಬರಹಗಳು, ಲಕ್ಷಾಂತರ ಮಂದಿ ನಂಬಿಕೆ ಇರಿಸಿದ್ದ ಮಠಾಧೀಶರನ್ನು, ಸಮಾಜಮುಖಿ ಸಂಭಾವಿತರನ್ನು, ಪ್ರಾಮಾಣಿಕ ಪತ್ರಕರ್ತರನ್ನು ತನ್ನ ವೈಯಕ್ತಿಕ ಪೂರ್ವಗ್ರಹ ಪೀಡಿತದಿಂದ ಅಳೆದು ಅಶ್ಲೀವಾಗಿ ಪ್ರಕಟಿಸುತ್ತಿದ್ದುದೇ ಪತ್ರಿಕೋದ್ಯಮ (?)ವಾಗಿತ್ತು. ಇವುಗಳೆಲ್ಲವೂ ಕೇವಲ ಆಕೆಯ ಅಸಹನೆ ತ್ಯಾಜ್ಯಗಳಾಗಿ ಹೊರಹೊಮ್ಮುತ್ತಿದ್ದವು.

ಇದೆಲ್ಲಕ್ಕಿಂತ ಅಕ್ಷಮ್ಯವಾದದ್ದು ಈಕೆ ಭಾರತದ ಏಕತೆಗೆ ದಕ್ಕೆ ತರುವಂತ ಘೋಷಣೆ ಕೂಗಿದ ಕನ್ನಯ್ಯ, ಉಮರ್ ಖಾಲಿದ್‌ನಂತಹ ಸಾಮಾಜಿಕ ತಾಣಗಳಲ್ಲಿ ತನ್ನ ಮಕ್ಕಳೆಂದು ಘೋ?ಣೆ ಮಾಡಿಕೊಂಡು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಿದ ರೀತಿ ನಿಜಕ್ಕೂ ದೇಶಪ್ರೇಮಿಗಳಿಗೆ ವೀರಯೋಧರಿಗೆ ಮಾಡಿದ ಪರೋಕ್ಷ ಅವಮಾನ ಮತ್ತು ಮಾನಹಾನಿಯೇ ಆಗಿತ್ತು. ಇಂತಹ ದುಶ್ಚಟ ಹೊಂದಿದ್ದ, ದುಷ್ಕರ್ಮಿಗಳಿಂದ ಕೊಲೆಯಾದ ವ್ಯಕ್ತಿಯ ಶವಕ್ಕೆ ಗೌರವಾರ್ಪಣೆ ಮಾಡಲು ಅಂದು ಸಾಕ್ಷಾತ್ ಮುಖ್ಯಮಂತ್ರಿಗಳೇ ಎರಡೆರಡು ಬಾರಿ ಕೈಕಟ್ಟಿ ಬಂದು ನಿಂತು, ಪೋಲೀಸ್ ಗೌರವಗಳನ್ನು ಸಲ್ಲಿಸುತ್ತಾರೆೆ ಎಂದರೆ ನಿಜಕ್ಕೂ ಸಮಾಜದ್ರೋಹವೇ ಅಲ್ಲವೇ. ಒಂದು ಲೆಕ್ಕದಲ್ಲಿ ಇದು ರಾಜಕೀಯ ಪಕ್ಷವೊಂದರ ಹಿಂದಿರುವ ದರ್ದು, ತಂತ್ರ, ಕರ್ಮ, ಅಧಿಕಾರ, ಸ್ವಾರ್ಥ ವೆಂಬ ಅನಿವಾರ‌್ಯತೆ, ಹಾಳಾಗಿ ಹೋಗಲಿ ಎಂದುಕೊಳ್ಳಲು ಇದೇನು ಕಂಡವರ ಮನೆಯ ಪಿತೃಪಕ್ಷದ ಪಿಂಡದ ಕಾರ್ಯವೇ.

ಸಾಮಾನ್ಯ ನಾಗರಿಕ ಏಕಮುಖ ಸಂಚಾರದಲ್ಲಿ ವಾಹನ ಚಲಿಸಿದರೆ, ನೋಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿದರೆ ಸರಕಾರ ಆತನ ಮೇಲೆ ದಂಡಾರ್ಹ, ಶಿಕ್ಷಾರ್ಹ ಕ್ರಮ ತೆಗೆದುಕೊಳ್ಳಲಾಗುತ್ತದೆ. ವ್ಯಾಪಾರದ ಮಳಿಗೆಯಲ್ಲಿ ವಸ್ತುವಿನ ಮುಖಬೆಲೆಯ ಮೇಲೆ ಐದು ಪೈಸೆ ಹೆಚ್ಚು ಹಣ ತೆಗೆದುಕೊಂಡರೆ ಅದಕ್ಕೂ ನಿರ್ದಿಷ್ಟ ಕಾನೂನು ಕ್ರಮಗಳಿವೆ. ಇನ್ನು ಸರಕಾರಿ ವಿರುದ್ಧ ಯಾವುದೇ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾದರೂ ಆತನ ಸೇವೆಗೆ ಕುತ್ತು. ಹಾಗೆಯೇ ಕಛೇರಿಗಳಲ್ಲಿ ಬೆಳಿಗ್ಗೆ ತನ್ನ ಜೇಬಿನಲ್ಲಿದ್ದ ಬಡಿಗಾಸಿನ ಮೊತ್ತವನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿ ಸಂಜೆ ಹೊರಡುವಾಗ ಏನಾದರು ಹೆಚ್ಚಾಗಿದ್ದರೆ ಆತ ಮಾನಗೆಟ್ಟವನಾಗುತ್ತಾನೆ. ಆದರೆ ಕೋಟ್ಯಾಂತರ ಮತದಾರರು ಮತಭಿಕ್ಷೆ ನೀಡಿರುವುದು ಜನಪ್ರತಿನಿಧಿಗಳು ದೇಶದ ಸಂವಿಧಾನ, ಕಾನೂನು ನಿಯಮಗಳನ್ನು ಅದರ ಘನತೆಯನ್ನು ಕಾಪಾಡಲೆಂದು. ಆದರೆ ಇವರುಗಳು ಮಾಡಿದ ಘನಂದಾರಿ ಕೆಲಸವಾದರು ಎಂತದ್ದು. ರಾಷ್ಟ್ರಧ್ವಜ ಹೊದಿಕೆ, ಪೋಲೀಸ್ ಗೌರವಗಳಿಗೆ ಅರ್ಹರೆಂದರೆ ಆತ ದೇಶಭಕ್ತನಾಗಿರಬೇಕು, ಲಕ್ಷಾಂತರ ಪ್ರಜೆಗಳ ಸೇವೆಯನ್ನು ಮಾಡಿರಬೇಕು, ದೇಶದ ಘನತೆ, ಹೆಮ್ಮೆ, ಗೌರವವನ್ನು ಉಳಿಸಿ ಬೆಳೆಸಿರುವಂತವನಾಗಿರಬೇಕು, ಆತನಿಂದ ಸಮಾಜ ಪರಿವರ್ತನೆಯಾಗಿರಬೇಕು. ಸಂವಿಧಾನದ ಆಶಯವನ್ನು ಸಾರ್ಥಕಪಡಿಸಿದವನಾಗಿರಬೇಕು. ಅಥವಾ ಇವುಗಳಿಗಾಗಿ ವೀರಮರಣವನ್ನಾದರೂ ಹೊಂದಿರಬೇಕು. ಇವುಗಳಲ್ಲಿ ಯಾವ ಒಂದು ಮಾನದಂಡ ಕಂಡಿದೆ ಎಂದು ಸರಕಾರ ಸಾರ್ವಜನಿಕರಿಗೆ ತಿಳಿಸಲೇ ಇಲ್ಲ. ಮೊದಲು ತಾನು ಸರಿ ಇರಬೇಕು ನಂತರ ಇತರರನ್ನು ಸರಿಮಾಡಬೇಕು ಎನ್ನುತ್ತದೆ ಸಾಮಾನ್ಯ ನೀತಿ. ಆದರೆ ಸಮಾಜದ ಘನತೆಯನ್ನೇ ಹಾಳುಮಾಡಿ, ಲಕ್ಷಾಂತರ ಪ್ರಜೆಗಳ ಮನಸ್ಸಿಗೆ ಅಸಹನೆ ವಿತಂಡವಾದಗಳನ್ನು, ಸಮಾಜದ್ರೋಹಿ ಗಳನ್ನು ದೇಶದ್ರೋಹಿ ಗಳನ್ನು ಸಮರ್ಥಿಸಿ ಸಲಹುವ ಅನೈತಿಕತೆಗಳಿಗೆ ಸರಕಾರ ಈ ಮಟ್ಟದ ಗೌರವ ನೀಡಿದೆ ಎಂದರೆ ಸಮಾಜಕ್ಕೆ ಅಥವಾ ಇತರೆ ಆರೋಪಿಗಳಿಗೆ ಸಿಗುವ ಸಂದೇಶವಾದರು ಎಂತದ್ದು?. ನಾಚಿಗೇಡು! ಇಂತಹ ಅನೈತಿಕತೆ ತೋರುವ ಸರಕಾರಕ್ಕೆ ಒನ್‌ವೇ, ನೋ ಪಾರ್ಕಿಂಗ್ ಮಾಡುವ ನಾಗರಿಕರನ್ನು ದಂಡಿಸುವ ಯಾವ ನೈತಿಕ ಹಕ್ಕಿದೆ ಹೇಳಿ. ಸರ್ಕಾರ ಕಣ್ಣುಮುಚ್ಚಿಕೊಂಡು ಹಾಲನ್ನು ಕುಡಿಯಬಹುದು.

ಆದರೆ ಇಂತಹ ಸೋಕಾಲ್‌ಡ್ ಪತ್ರಕರ್ತರೆಂಬ ನಾಗವಲ್ಲಿಗಳ ಎಡವಟ್ಟುಗಳನ್ನು ಪ್ರಜ್ಞಾವಂತ ನಾಗರಿಕರು ಕಣ್ಣಾರೆ ಅನುಭವಿಸಿದ್ದಾರೆ. ಉತ್ತರಕ್ಕೆ ತಿರುಗಿದರೆ ಸಿನಿಮಾ ನಟನಟಿಯರು, ದಕ್ಷಿಣಕ್ಕೆ ತಿರುಗಿದರೆ ರಾಜಕಾರಣಿಗಳು, ಪೂರ್ವಕ್ಕೆ ತಿರುಗಿದರೆ ರೌಡಿಗಳು, ಪಶ್ವಿಮಕ್ಕೆ ತಿರುಗಿದರೆ ಮಠಮಂದಿರಗಳ ಮೇಲೆ ಅಪ್ಪಳಿಸುವ, ಈ ಯಾವ ದಿಕ್ಕೂ ಸಿಗದೇ ಹೋದರೆ ಬೇರೊಂದು ಪತ್ರಿಕೆಯ ಮೇಲೆ, ಲೇಖಕರ ಮೇಲೆ ಕುಪ್ಪಳಿಸುವ, ಭುವಿಯ ಮೇಲಿನ ಅತೀ ಬುದ್ಧಿವಂತ ತಾವೆಂದು ವರ್ತಿಸುವ ಇವರು ನಮ್ಮಿಂದಲೇ ಸಮಾಜ ನಮ್ಮಿಂದಲೇ ಸಂದೇಶ ಎಂಬ ಖಾಯಿಲೆಗೆ ಒಳಗಾಗಿರುತ್ತಾರೆ. ಇಂತಹ ಅನೇಕರು ಪತ್ರಿಕೋದ್ಯಮದ ಹೆಸರಿನಲ್ಲಿ ತಮ್ಮ ಲೇಖನಿಗೆ ಇಂಕಿನ ಬದಲಾಗಿ

ಮದ್ಯ, ವೀರ್ಯವನ್ನೂ ತುಂಬಿ ರಸವತ್ತಾಗಿ ಬರೆದು ಕೊಲೆ, ಕಾಮ, ಅನೈತಿಕಗಳ ವೈಭವೀಕರಿಸಿ ವಾರಕಳೆಯುವ ಖಯಾಲಿಯೇ ಪತ್ರಿಕೋದ್ಯಮವೇ?. ಇಂತಹವರನ್ನು ಪತ್ರಿಕೋದ್ಯಮದ ವೇಶ್ಯೆಗಳೆಂದರೆ ತಪ್ಪಾಗಲಾರದು.

ಪತ್ರಕರ್ತರೆಂದರೆ ಹೇಗಿರಬೇಕು ಹೇಗಿರಬಾರದು ಎಂದು ನಿರ್ಧರಿಸುವ, ಯಾವ ಪತ್ರಿಕೆ ದೇಶಕ್ಕೆ ಅನಿವಾರ‌್ಯ, ಯಾವ ಪತ್ರಕರ್ತ ಸಮಾಜದ ಕನ್ನಡಿ ಎಂದು ಗುರುತಿಸುವ, ತಿಳಿದುಕೊಳ್ಳುವ ವಿವೇಕವಂತ, ಪ್ರಜ್ಞಾವಂತ ಕನ್ನಡ ಓದುಗರಿದ್ದಾರೆ. ವೃದ್ಧನಾರಿ ಪತಿವ್ರತಾ ಎಂದು ಬಾಯಿ ಬಡಿದುಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಸಾಮಾಜಿಕತೆಯ ಕಗ್ಗೊಲೆ ಎಂದು ಬೊಬ್ಬೆಯಿಡುವ ಈ ಪ್ರಗತಿಪರರು, ಬುದ್ದಿಜೀವಿಗಳೆಂದರೆ ಸತ್ತ ಹೆಗ್ಗಣವನ್ನು ಕುಟುಕಿಕುಟುಕಿ ಸಮಾಜದಲ್ಲಿ ದುರ್ವಾಸನೆ ಹುಟ್ಟಿಸುವ ಸಮಯಸಾಧಕರೆಂಬುದು ಇಡೀ ದೇಶದ ಪ್ರಜ್ಞಾವಂತರಿಗೆ ಮನದಟ್ಟಾಗಿದೆ. ನೈತಿಕವಾಗಿ ಬೆತ್ತಲಾಗಿರುವ ಇವರ ಪ್ರತಿರೋದನಗಳಾಗಲಿ, ನರಿ, ನಾಯಿ, ಹೆಗ್ಗಣ, ಗೂಬೆ, ಕೊಳಕು ಮಂಡಲಗಳು ನೂರು ಸಾವಿರ ನಡೆದರೂ ಇವರುಗಳ ಅಸಲಿ ಯೋಗ್ಯತೆ ಏನೆಂಬುದು ಸಮಾಜದಲ್ಲಿ ಎಲ್ಲರಿಗೂ ಪಕ್ಕಾ ಆಗಿದೆ. ಮೊದಲು ಇವರುಗಳು ನಾನು ಭಾರತೀಯ ಎಂಬ ಘೋಷಣೆ ಮಾಡಿಕೊಂಡು, ಈ ನೆಲದ ಅನ್ನ, ನೀರು, ಗಾಳಿಯ ಋಣ ತೀರಿಸುವ ಮನಸ್ಸು ಅಂಡಿಗೂ ಬಾಯಿಗೂ ವ್ಯತ್ಯಾಸವಿರಿಸಿಕೊಳ್ಳದ ವಿತಂಡವಾದಿಗಳು ಎಡಚರು, ಬಲಗೈಗೂ ತಮಗೂ ಇರುವ ಅಜಗಜಾಂತರವನ್ನು ಹೀಗೆ ಆಗಾಗ ತೋರ್ಪಡಿಸುವ ವ್ಯರ್ಥ ಪ್ರಯತ್ನವನ್ನು ಬಿಡಲಿ. ಇಂದು ಸಮಾಜದಲ್ಲಿ ಸ್ವಾರ್ಥ ರಾಜಕಾರಣ, ಭ್ರಷ್ಟಾಚಾರ, ಜಾತೀಯತೆ, ಅನೈತಿಕತೆ, ಮೋಸ, ವಂಚನೆ, ಕಲಬೆರಕೆ ಹೀಗೆ ಹಲವಾರು ಸಮಸ್ಯೆಗಳಿವೆ. ಇವರುಗಳ ತಲೆಯಲ್ಲೇನಾದರು ಮೆದಳುಗಳಿದ್ದರೆ ಅವುಗಳ ವಿರುದ್ಧ ಹೋರಾಡಲಿ.

Tags

Related Articles

Leave a Reply

Your email address will not be published. Required fields are marked *

Language
Close