About Us Advertise with us Be a Reporter E-Paper

ಗೆಜೆಟಿಯರ್

ಅಂಗೈಯ್ಯಲ್ಲೆ ಗ್ರಂಥಾಲಯ ಪ್ರಾಜೆಕ್ಟ್ ಗುಟೆನ್‌ಬರ್ಗ್

ಸಂತೋಷ್ ಕುಮಾರ್ ಮೆಹಂದಳೆ

ಒಂದೆರಡು ಪುಸ್ತಕ ಕೊಂಡರೆ ಕನಿಷ್ಟ  ಐನೂರು ರೂಪಾಯಿಯಾಗುತ್ತದೆ. ಹಾಗಂತ ಕೊಳ್ಳದೇ ಇರಲೂ ಆಗುತ್ತಿಲ್ಲ. ಅದನ್ನು ಹೇಗೊ ಅಡ್ಜಸ್‌ಟ್ ಮಾಡಿಕೊಂಡರೂ ಪುಸ್ತಕಗಳನ್ನು ಕಾಯ್ದಿಡುವುದು ಹೇಗೆ..? ಅದಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಿದ್ದ ರಂತೂ ಸಂಕಟ, ಓದಲು ಬೇಕು ಆದರೆ ದುಬಾರಿ ದರ ಮತ್ತು ಅವುಗಳ ಸಂಗ್ರಹವಿದೆ ಯಲ್ಲ ಅದು ಯಾವನಿಗೂ  ಎನ್ನಿಸಿ ಬಿಡುತ್ತದೆ. ಬರು ಬರುತ್ತಾ ಸಂಗ್ರಹ ಹೆಚ್ಚಾದಂತೆ ಮನೆಯಲ್ಲಿ ಜಾಗಕ್ಕೆ ಕಿರಿಕಿರಿ ಯಾಗುತ್ತಿದ್ದಂತೆ ಸಂಕಟಪಡುತ್ತಲೇ ದಾನಕ್ಕೆ ನಿಲ್ಲುತ್ತೇವೆ. ಯಾರಿಗೋ ಕೊಡಲು ಅಥವಾ ಹಾಗೆ ಪುಕ್ಸಟ್ಟೆ ಕೊಡಲೂ ಮನಸ್ಸು ಚುರ್ ಎನ್ನುತ್ತದೆ. ಅದರಲ್ಲೂ ಪ್ರಕಾಶಕ ಮಹಾ ಶಯ ಕಂಜೂಸಿಗೆ ಬಿದ್ದು ಯಾವುದೋ ಗುಣಮಟ್ಟದ ಕಾಗದ ಉಪಯೋಗಿಸಿದ ಪುಸ್ತಕವಾಗಿ ದ್ದರೆ ಎರ್ಡ್ಮೂರು ವರ್ಷದಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಊದಿಕೊಳ್ಳುತ್ತದೆ. ಇದಕ್ಕೆಲ್ಲಾ ಪರಿಹಾರ ವಿಲ್ಲವಾ..? ಆಗ ಹುಟ್ಟಿದ್ದೆ ಡಿಜಿಟಲ್ ಲೈಬ್ರರಿ. ಆದರೆ ನಮ್ಮಲ್ಲಲ್ಲ.  ಇಪ್ಪತ್ತೈದು ಚಿಲ್ಲರೆ ವರ್ಷಗಳ ಹಿಂದೆ.

ಪ್ರಾಜೆಕ್‌ಟ್ ಗುಟೆನ್‌ಬರ್ಗ್

ನಮ್ಮಲ್ಲಿ ಈಗೀಗ ಫ್ರೀ ಆಗಿ ಓದುವ ಅಥವಾ ಡಿಜಿಟಲ್ ಬುಕ್‌ಸ್ ಕಾನ್ಸೆಪ್‌ಟ್, ಡಿಜಿಟಲ್ ಲೈಬ್ರರಿ ಎನ್ನುವುದೆಲ್ಲಾ ಬರುತ್ತಿದ್ದರೂ ಇದೆಲ್ಲಾ ಆರಂಭವಾಗಿ ಹತ್ತಿರ ಹತ್ತಿರ 40 ವರ್ಷಗಳೇ ಆಗುತ್ತಾ ಬಂದಿವೆ. 1971ರಲ್ಲಿ ಇಲಿನಾಯ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್‌ನ್ನು ಕಾಮನ್ ಉಪಯೋಗಕ್ಕೆ ಬಿಟ್ಟಾಗ ಅಲ್ಲಿ ಹಳೆಯ ಪುಸ್ತಕಗಳನ್ನು ಓದುವಿಕೆ ಲಭ್ಯ ಮಾಡುವ ಆಲೋ ಚನೆ ಹುಟ್ಟಿ, ಮುಕ್ತ ವಿತರಣೆಗಾಗಿ ಹಕ್ಕು ಸ್ವಾಮ್ಯ ಮುಗಿದ ಪುಸ್ತಕದ  ಪ್ರತಿ ಲಭ್ಯ ಮಾಡ ಲಾಯಿತು. ಅದು ಅಧಿಕೃತ ಡಿಜಿಟಲ್ ಲೈಬ್ರರಿ ಹುಟ್ಟು ಅದೇ ಮುಂದುವರೆದು ಜಾಗತಿಕವಾಗಿ ಎಲ್ಲಾ ರೀತಿಯ ಬುಕ್‌ಸ್ ಮತ್ತು ಬರಹ ಲಭ್ಯ ಮಾಡೋಣ ಎಂದಾಗ ಹುಟ್ಟಿದ್ದೇ ಪ್ರಾಜೆಕ್‌ಟ್ ಗುಟೆನ್‌ಬರ್ಗ್. ಅಲ್ಲಿಂದಿಚೆಗೆ ಇಲ್ಲಿವರೆಗೆ ಸುಮಾರು ಐವತ್ತು ಸಾವಿರ ಹಳೆಯ ಕೃತಿಗಳ ಪುಟ ಗಳನ್ನು ಪುಕ್ಕಟ್ಟೆಯಾಗಿ ಓದಲು ಅನುವು ಮಾಡಿ ಕೊಟ್ಟಿದ್ದು ಮೊದಲ ಬಾರಿಗೆ ಈ ಯೋಜನೆ ಮೂಲಕ. ಬಳಿಕ ಕಂಪ್ಯೂಟರ್ ತಂತ್ರಜ್ಞಾನದಿಂದ ಇವತ್ತು ಜಾಗತಿಕವಾಗಿ ಸುಮಾರು ಹತ್ತು  ಪುಸ್ತಕಗಳು ಸ್ಕಾನ್, ಕಾಪಿ, ರೀ ಕಾಪಿ, ಯುನಿಕೋಡ್, ಡಿಜಿಟಲ್, ಪಿಡಿಎಫ್ ಇತ್ಯಾದಿಗಳ ಹಲವು ರೂಪದಲ್ಲಿ ಲಭ್ಯವಾಗತೊಡಗಿ ಮನೆಯಲ್ಲಿ ಪುಸ್ತಕ ಇಡುವ ಮತ್ತು ದುಬಾರಿ ಸಂಸ್ಕೃತಿಗೆ ಕೊನೆ ಹಾಡಲು ಸಜ್ಜಾಗಿವೆ. ಆದರೆ ಕನ್ನಡದಲ್ಲಿ ಇನ್ನಷ್ಟೆ ಕ್ರಾಂತಿಯಾಗಬೇಕಿದೆ.

ಭಾರತದಲ್ಲಿ ಆರಂಭವಾಗಿರುವ  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಪ್ರಮುಖವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದರೆ, ಕರ್ನಾಟಕದಲ್ಲಿ ಸಾಹಿತ್ಯ ಅಕಾಡೆಮಿ ಹೆಚ್ಚಿನ ಪ್ರತಿಗಳನ್ನು ಪಿಡಿಎಫ್, ಯುನಿಕೋಡ್ ಇತ್ಯಾದಿಗಳಲ್ಲಿ ಕನ್ನಡ ಪುಸ್ತಕಗಳ ಲಭ್ಯತೆ ಮಾಡುತ್ತಿದೆ. ಇದರ ಜತೆಗೆ ವರ್ಗೀಕರಣ  ಕನ್ನಡ ಓದಲಾಗದೆ ಆದರೆ ಭಾಷೆ ಗೊತ್ತಿರುವವರಿಗೆ  ಟೆಕ್‌ಸ್ಟ್ ಟು ಸ್ಪೀಚ್  ಮಾದರಿಯಲ್ಲಿ ಕೇವಲ ದನಿಯ ರೂಪದಲ್ಲೂ ರೂಪಾಂತರಗೊಂಡು ಸುಮ್ಮನೆ ಪಯಣಿಸುವಾಗೆಲ್ಲಾ ಕಾದಂಬರಿಗಳನ್ನೆ ದನಿಯ ರೂಪದಲ್ಲಿ ಕೇಳುತ್ತಾ ಸಾಗುವ ಅವಕಾಶ ಭಾರತ ವಾಣಿ ಮತ್ತು ಈ-ಕನ್ನಡ ಗ್ರಂಥಾಲಯ ದಂತಹ ತಾಣದಲ್ಲಿ ಲಭ್ಯವಾಗತೊಡಗಿವೆ.

ಇದೆಲ್ಲವನ್ನೂ ಇನಷ್ಟು ಆಧುನಿಕರಣಗೊಳಿಸಿದ್ದು ಮತ್ತು ಈ-ಗ್ರಂಥಾಲಯಕ್ಕೆ ಅದ್ಭುತ ಸ್ಪರ್ಶ ಕೊಟ್ಟ ಶ್ರೇಯ ಗೂಗಲ್ಲಿಗೆ ಸಲ್ಲಬೇಕು. ಹಲವು ಸಾಧ್ಯತೆಗಳನ್ನು ಪರಿಚಯಿಸುವ ಅದು ಹ್ಯಾಂಡ್‌ಸ್  ಫ್ರೀ  ಆ್ಯಪ್‌ಗಳ ಮೂಲಕ ಮೊದಲಿಗೆ  ತಲೆ ಬರಹದ ಮೂಲಕ ಗುರುತಿಸುವ ಕಾರ್ಯಕ್ಕೆ ಕೈ ಹಾಕಿದರೆ, ಮುದ್ರಿತ ಅಕ್ಷರಗಳನ್ನು ಚಕಚಕನೆ ಡಿಜಿಟಲ್ ಅಕ್ಷರವ ನ್ನಾಗಿಸಿ ಗುರುತಿಸಲು ಓ.ಸಿ.ಆರ್. ತಂತ್ರಜ್ಞಾನ ಕೊಡಲಾ ಯಿತು. ಇದರ ಹಿಂದೆಯೇ ಐ.ಸಿ.ಆರ್  (ಇಂಟಲಿಜೆಂಟ್ ಕ್ಯಾರೆಕ್‌ಟ್ರ್ ರೆಕಿಗ್ನಿಶನ್  ಅಂದರೆ ಅಕಸ್ಮಾತ ಬರಹಗಳು ಚಿತ್ರದ ಜತೆಗೆ ಅಚ್ಚಾಗಿದ್ದರೆ, ಅಥವಾ ನಿರ್ದಿಷ್ಟ ಚಿತ್ರಗಳ ಚೌಕಟ್ಟಿ ನೊಳಗಿದ್ದರೆ ಅದನ್ನು ಗುರುತಿಸಿ ಸೂಕ್ತ ಜಾಗಕ್ಕೆ ಕಳುಹಿಸಿ ಪರಿವರ್ತಿಸುವ ಮೂಲಕ ಯಾವ ಅಕ್ಷರವೂ ಪರಿವರ್ತಿಸು ವಾಗ ಮಿಸ್ ಆಗದಂತೆ ನೋಡಿಕೊಳ್ಳುತ್ತದೆ)  ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದ ಗ್ರಂಥಾಲಯ ಸ್ವರೂಪಕ್ಕೆ ಪಕ್ಕಾ ಡಿಜಿಟಲ್ ಸ್ಪರ್ಶ ನೀಡಿದ್ದು ಐ.ಡಬ್ಲ್ಯೂ.ಆರ್ (ಇಂಟೆಲಿ ಜೆಂಟ್ ವರ್ಡ್ ರೆಕಿಗ್ನಿಶನ್  ಅಂದರೆ ಇದು ಅಕ್ಷರಗಳ ಬದ ಲಾಗಿ ನೇರವಾಗಿ ಪದಗಳನ್ನೆ ಗುರುತಿಸಿ ಪುಸ್ತಕಕ್ಕೆ ಪುಸ್ತಕವನ್ನೆ ಮರು ಜೋಡಿಸಿ ಬಿಡುತ್ತದೆ. ಇಲ್ಲಿ ಅಕ್ಷರಗಳ ಜತೆಗೆ ಪದಗಳ ಪರಿಚಯವೂ ಬೇಕು. ಅದು ಕನ್ನಡ ಬಳಕೆಯಿಂದ ಮಾತ್ರ ಸಾಧ್ಯ)

ಈಗ ಇದನ್ನೆಲ್ಲಾ ಓದಲಿಕ್ಕಾಗೆ ಬುಕ್‌ರೀಡರ್ ಬಂದಿದ್ದರೆ, ಬೇಕೆಂದಾಗ ಅಲ್ಲಲ್ಲೆ ಓದಿಕೊಳ್ಳಲು ನಿಮಗೆ  ಇಲ್ಲದಿದ್ದರೂ ಸಾಧ್ಯವಾಗಬಲ್ಲಂತಹ ಕ್ಯಾಚ್ ಮೆಮೊರಿಯ ಸೌಲಭ್ಯದ ಡಿಜಿ ಲಿಬ್‌ಗಳು ಲಭ್ಯವಿವೆ.  ಕೇವಲ ಒಂದು ಅಂಗೈಯಗಲದ ಚಿಕ್ಕ ಪಾಡ್‌ನಲ್ಲಿ ಎರಡು ಲಕ್ಷ ಪುಸ್ತಕಗಳ ಸಂಗ್ರಹ ಮಾಡಬಹುದಾಗಿದ್ದು, ಕಿಂಡೆಲ್‌ಗಳ ಭರಾಟೆಯನ್ನೂ ಇವು ಕಡಿಮೆ ಮಾಡಿ ಓದುಗರನ್ನು ಸಂಪೂರ್ಣ ಮುಕ್ತ ಪುಟ ನೋಡುವಿಕೆ ತೆರೆದಿಡಲಾಗಿದೆ. ಆದರೆ ಮೊದಮೊದಲಿಗೆ ಪಿ.ಡಿ.ಎಫ್. ಹೇಗೆಂದರೆ ಹಾಗೆ ಓಪನ್ ಆಗದೆ ತೊಂದರೆ ಕೊಡುತ್ತಿದ್ದುದಕ್ಕೆ ವರ್ಚುವಲ್ ಡಿಸ್‌ಪ್ಲೇ ಮಾದರಿಯ ಪುಟ ತೆರೆಯುವ ವಿನ್ಯಾಸಕ್ಕೆ ಕನ್ನಡದ ಪುಟಗಳು ಪಕ್ಕಾಗುತ್ತಿದ್ದಂತೆ ಕನ್ನಡ ಓದು  ಮತ್ತು ಆಯ್ದುಕೊಂಡು ಅದನ್ನು ತಮ್ಮ  ಸಂಗ್ರಹಕ್ಕಿಳಿಸಿಕೊಳ್ಳುವರ ಸಾಲು ಹೆಚ್ಚಾಯಿತು.

ಮೊದಮೊದಲು ಇದಕ್ಕೆಲ್ಲ ಕನಿಷ್ಟ ಬೆಲೆಯನ್ನಾದರೂ ಕೊಡ ಬೇಕಾಗಿ ಬರುತ್ತಿತ್ತಾದರೂ ಇತ್ತೀಚೆಗೆ ಅದರಲ್ಲೂ ಯುನಿ ಕೋಡ್‌ನ ಪರಿವರ್ತನೆಗೆ ಸುಲಭವಾದ ತಂತ್ರಜ್ಞಾನಗಳು ಕೈ ಗೆಟುಕಿದ ಮೇಲೆ ಎಲ್ಲಾ ರೀತಿಯ ಗ್ರಂಥ ಅಥವಾ ಪುಸ್ತಕಗಳು ಹೆಚ್ಚು ಕಡಿಮೆ ಫ್ರೀ ಯಾಗೇ ಲಭ್ಯವಾಗತೊಡಗಿವೆ. ಖ್ಯಾತ ಲೇಖಕ ನಿರಂಜನರ 55 ಪುಸ್ತಕಗಳು ಸಂಪೂರ್ಣ ಫ್ರೀ ಯಾಗಿ ಓದಲು ಲಭ್ಯವಿವೆ. ಜತೆಗೆ ಜಾಲತಾಣ ಅಥವಾ ಗೂಗಲ್‌ನಲ್ಲಿ ಸಿಕ್ಕುವುದೆಲ್ಲವೂ  ಸಿಕ್ಕಬೇಕೆನ್ನುವ ಮನೋ ಭಾವವೂ ಕಾರಣ ಇರಬಹುದು. ಹಾಗಾಗಿ ಡಿಜಿಟಲ್ ಪ್ರತಿ ಗಳಿಗೆ ಈಗಲೂ ಮಾರುಕಟ್ಟೆ ಬೆಲೆ ಇಲ್ಲವೇ ಇಲ್ಲ  ಜತೆಗೆ ಕಿಂಡಲ್ ವರ್ಷನ್ ಕೂಡ ಫ್ರೀ ಮಾಡುವ ಅನಿವಾರ್ಯತೆ ಯಿದೆ. ಪ್ರಸ್ತುತ ಕನ್ನಡದಲ್ಲಿ ಈ-ಬುಕ್ ಪ್ರಕಟಿಸುತ್ತಿರುವ ಪ್ರಕಾಶಕರ ಸಂಖ್ಯೆ ಆರ್ಥಿಕವಾಗಿ ಲಾಭಕರವಲ್ಲ ಎಂಬ ಕಾರಣಕ್ಕೆ ಕುಂಠಿತಗೊಳ್ಳುತ್ತಿದೆ. ಹಾಗೇ ನೋಡಿದರೆ ಮುದ್ರಣಕ್ಕಾಗುವ ಅರ್ಧಕ್ಕಿಂತ ಕಡಿಮೆ ಖರ್ಚಾಗುವುದರಿಂದ ಓದುಗರೂ, ಪ್ರಕಾಶಕ ಇಬ್ಬರೂ ಇದರಲ್ಲಿ ಲಾಭಕಾರಿಯಾಗಿ ಹೊಮ್ಮಬಹುದು. ಕೇವಲ ಶೇ.10 ಹಣದಲ್ಲಿ ಆತ್ಯುತ್ತಮ  ಓದಬಹು ದಾಗಿದ್ದು, ಸಂಗ್ರಹ, ಅದರ ಮೆಂಟೆನೆನ್ಸು ಇತ್ಯಾದಿಗಳ ಗೊಡವೆ ಇರುವುದಿಲ್ಲ. ಇನ್ನು ಪ್ರಕಾಶಕರಿಗೂ ಮುದ್ರಣದ ಜತೆಗೆ ಇದಕ್ಕಾಗಿ ಮಾಡಬೇಕಾದ ಖರ್ಚು ಏನೆಂದರೆ ಏನೂ ಇರಲ್ಲ. ಹಾಗಾಗಿ ಡಿಜಿಟಲ್ ಲೈಬ್ರರಿ ಕಾನ್ಸೆಪ್‌ಟ್ ನ್ನು ವಿದೇಶಿ ಮುದ್ರಣ ಮಾಧ್ಯಮದಲ್ಲಿ ಆದಂತೆ ಇಲ್ಲೂ ಸಣ್ಣದಾಗಿಯಾದರೂ ಸರಿ ಆರಂಭವೆನ್ನುವುದು ಮೊದಲು ಆಗಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close