About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಲೆಫ್ಟಿನೆಂಟ್ ಗವರ್ನರ್ v/s ಕೇಜ್ರಿವಾಲ್: ಪ್ರಕರಣ ಉನ್ನತ ಪೀಠಕ್ಕೆ

ದೆಹಲಿ: ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ನಡುವಿನ ತಿಕ್ಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ಜಡ್ಜ್ ಗಳ ತೀರ್ಪಿನಲ್ಲಿ ಭಿನ್ನತೆ ಇದ್ದ ಕಾರಣ ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯದ ಉನ್ನತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ಅಧಿಕಾರಿಗಳ ನಿಯೋಜನೆ, ವರ್ಗಾವಣೆ, ಎಸಿಬಿ ಮತ್ತು ತನಿಖಾ ಆಯೋಗಗಳ ನೇಮಕಾತಿ ಇವೇ ಮೊದಲಾದ ಬಹುಮುಖ್ಯ ವಿಷಯಗಳಲ್ಲಿ ಪರಮೋಚ್ಚ ಅಧಿಕಾರ ದೆಹಲಿ ಸರಕಾರಧ್ದೋ ಅಥವಾ ಲೆಫ್ಟಿನೆಂಟ್‌ ಗವರ್ನರ್‌ ಅವರದ್ದೋ ಎಂಬ ವಿಷಯದಲ್ಲಿ ನ್ಯಾಯಮೂರ್ತಿಗಳಾಗಿರುವ ಎ.ಕೆ.ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠ ವಿಭಿನ್ನ ತೀರ್ಪು ನೀಡಿದೆ. ಹಾಗಾಗಿ ಈ ವಿಷಯವನ್ನು ಇದೀಗ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿದೆ.

ಇಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಬ್ಬರು ನ್ಯಾಯಮೂರ್ತಿಗಳಲ್ಲಿ ಒಬ್ಬರು ನ್ಯಾಯಮೂರ್ತಿ “ದೆಹಲಿ ಸರಕಾರಕ್ಕೆ ಭೂಮಿ ಮತ್ತು ಪೊಲೀಸ್‌ ವಿಚಾರವನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯದಲ್ಲಿ ಸಂಪೂರ್ಣ ಅಧಿಕಾರವಿದೆ’ ಎಂದು ತೀರ್ಪು ನೀಡಿದರು.

ಜಸ್ಟಿಸ್‌  ಎ.ಕೆ.ಸಿಕ್ರಿ ಅವರು “ಜಂಟಿ ಕಾರ್ಯದರ್ಶಿ ಮತ್ತು ಈ ಮೇಲಿನ ವರ್ಗದ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರವು ಲೆಫ್ಟಿನೆಂಟ್‌ ಗವರ್ನರ್‌ ಕೈಯಲ್ಲಿರುತ್ತದೆ; ಉಳಿದೆಲ್ಲ ವರ್ಗಗಳ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರವು ದಿಲ್ಲಿ ಸರಕಾರದ ಕೈಯಲ್ಲಿರುತ್ತದೆ ‘ ಎಂದು ತೀರ್ಪು ನೀಡಿದರು.  ಇಬ್ಬರೂ ನ್ಯಾಯಮೂರ್ತಿಗಳು ಬಹುತೇಕ ಒಂದೇ ಅಭಿಪ್ರಾಯಕ್ಕೆ ಬಂದರಾದರೂ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು.

ಕಳೆದ ವರ್ಷ ಆಡಳಿತಾತ್ಮಕ ವಿಚಾರದಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಹಾಗೂ ಲೆಫ್ಟಿನೆಂಟ್​ ಅನಿಲ್​ ಬೈಜಲ್​ ನಡುವೆ ಉಂಟಾದ ಬಿಕ್ಕಟ್ಟಿನ ಕುರಿತು ದೆಹಲಿ ಹೈಕೋರ್ಟ್​ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್​ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close