ಶನಿ ದೋಷ ನಿವಾರಣೆಗೆ ಶನಿವಾರದ ಸರಳ ಪರಿಹಾರ
ಶನಿವಾರ ಶನಿದೇವರ ಪೂಜೆ ಮಾಡುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಕಪ್ಪು ಎಳ್ಳಿನ ಅರ್ಘ್ಯ, ಶಿವ ಪೂಜೆ ಹಾಗೂ ಹನುಮಂತನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಪೊರಕೆ, ಚಪ್ಪಲಿ, ಎಣ್ಣೆ ಬಾಟಲಿ ಮತ್ತು ಹಾಸಿಗೆಯ ಎದುರು ಕನ್ನಡಿ ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವು ನಿದ್ರಾಹೀನತೆ, ಮಾನಸಿಕ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.
Health Tips: ಹಾರ್ಮೋನುಗಳನ್ನು ಸಮತೋಲನದಲ್ಲಿ ಇರಿಸುವುದು ದೇಹಸ್ವಾಸ್ಥ್ಯಕ್ಕೆ ಅಗತ್ಯ. ಚೋದಕಗಳ ಸಮತೋಲನದಲ್ಲಿ ವ್ಯತ್ಯಾಸವಾದರೆ ಸರಿಪಡಿಸುವುದು ಹೇಗೆ? ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ವಿಷಯಗಳನ್ನು ಸರಿಪಡಿಸಿಕೊಳ್ಳುವುದಾದರೂ ಯಾವ ರೀತಿಯಲ್ಲಿ? ಯಾವುದೇ ಔಷಧಗಳನ್ನು ತೆಗೆದುಕೊಳ್ಳಬೇಕಾದರೆ ವೈದ್ಯರ ಸಲಹೆ ಬೇಕೆಬೇಕು. ಆದರೆ ಔಷಧಿಯ ಹೊರತಾಗಿ ಕೆಲವು ನೈಸರ್ಗಿಕ ಉಪಕ್ರಮಗಳ ಮೂಲಕ ಹಾರ್ಮೋನುಗಳ ಸಮತೋಲನಕ್ಕೆ ಪ್ರಯತ್ನಿಸಬಹುದೇ? ಇಲ್ಲಿದೆ ಮಾಹಿತಿ.
ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸಲು ಕೆಲವು ಸರಳ ವಾಸ್ತು ಕ್ರಮಗಳು ಸಹಾಯಕವಾಗುತ್ತವೆ. ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸುವುದು, ಉಪ್ಪು ಹಾಕಿದ ನೀರಿನಿಂದ ನೆಲ ಒರೆಸುವುದು, ಮನೆಯ ಬಾಗಿಲಿಗೆ ರಂಗೋಲಿ ಹಾಕುವುದು, ಸೂರ್ಯನ ಬೆಳಕು ಮತ್ತು ತಾಜಾ ಗಾಳಿಗೆ ಅವಕಾಶ ನೀಡುವುದು, ಗಿಡಗಳನ್ನು ಇಡುವುದು ಹಾಗೂ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.
ಚಾಣಕ್ಯ ನೀತಿಯ ಪ್ರಕಾರ ಜೀವನದಲ್ಲಿ ಗೌರವ ಹಾಗೂ ಯಶಸ್ಸು ಪಡೆಯಲು ಸರಿಯಾದ ವಾತಾವರಣವನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ. ಗೌರವ ಸಿಗದ ಸ್ಥಳ, ಶಿಕ್ಷಣಕ್ಕೆ ಬೆಲೆ ಇಲ್ಲದ ಸ್ಥಳ, ಉದ್ಯೋಗಾವಕಾಶಗಳಿಲ್ಲದ ಪ್ರದೇಶ, ಕೆಟ್ಟ ಜನರ ಸಹವಾಸ ಇರುವ ಸ್ಥಳ ಮತ್ತು ಸಂಸ್ಕಾರದ ಕೊರತೆ ಇರುವ ಕಡೆಗಳಲ್ಲಿ ವಾಸಿಸುವುದು ಅಥವಾ ಕಾಲಿಡುವುದು ತಪ್ಪು ಎಂದು ಚಾಣಕ್ಯರು ಹೇಳಿದ್ದಾರೆ. ಇಂತಹ ಸ್ಥಳಗಳಿಂದ ದೂರವಿರುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.
No Smoking Day: ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಅರಿವಿದ್ದೂ ವ್ಯಸನಿಗಳಾಗುವವರ ಸಂಖ್ಯೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಹಾಗಾಗಿಯೇ ಪ್ರತಿ ವರ್ಷದ ಮಾರ್ಚ್ 2ನೇ ಬುಧವಾರವನ್ನು ʻಧೂಮಪಾನ ರಹಿತ ದಿನʼ ಎಂದು ಗುರುತಿಸಲಾಗಿದೆ. ಹೌದು, ಧೂಮಪಾನ ಮತ್ತು ತಂಬಾಕು ಚಟಗಳ ವಿರುದ್ಧದ ಅಭಿಯಾನದ ಹಿನ್ನೆಲೆಯಲ್ಲಿ ಈ ದಿನ ಹುಟ್ಟಿಕೊಂಡಿದ್ದು, ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಆಚರಿಸುವ ಅನಿವಾರ್ಯತೆಯೂ ಎದುರಾಗಿದೆ.
Vastu Tips: ವಾಸ್ತುಶಾಸ್ತ್ರದ ಪ್ರಕಾರ ಬ್ರಾಹ್ಮಿ ಮುಹೂರ್ತ ಮತ್ತು ಸಂಧ್ಯಾಕಾಲದಲ್ಲಿ ಹಣದ ಲೇವಾದೇವಿ ಮಾಡುವುದು ಅಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಣ ನೀಡುವುದು ಅಥವಾ ಪಡೆಯುವುದರಿಂದ ಆರ್ಥಿಕ ಸಂಕಷ್ಟಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಸೂರ್ಯೋದಯದ ನಂತರದಿಂದ ಸೂರ್ಯಾಸ್ತಕ್ಕೂ ಮುಂಚಿನ ಸಮಯವನ್ನು ಹಣಕಾಸಿನ ವ್ಯವಹಾರಕ್ಕೆ ಸೂಕ್ತ ಸಮಯವೆಂದು ವಾಸ್ತುಶಾಸ್ತ್ರ ಸೂಚಿಸುತ್ತದೆ.
Health Tips: ಆಧುನಿಕ ಆಹಾರ ಪದ್ಧತಿಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರು ಮಾಡಿದೆ. ಏನೇ ತಿಂದರೂ ಕೆಲವರಿಗೆ ಹೊಟ್ಟೆ ಉಬ್ಬರಿಸಿಕೊಳ್ಳುವುದು, ಜಡತ್ವ, ಗ್ಯಾಸ್, ತೇಗು ಹೀಗೆ ಹಲವು ಸಮಸ್ಯೆ ಕಂಡುಬರುತ್ತದೆ. ಗ್ಯಾಸ್ಟ್ರಿಕ್‌ನಿಂದ ಯಾವೆಲ್ಲ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ? ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು? ಗ್ಯಾಸ್ಟ್ರಿಕ್ ನಿರ್ಲಕ್ಷ್ಯ ಮಾಡಿದ್ರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವುದು? ಮುಂತಾದ ಸಂದೇಹಗಳಿಗೆ ʼವಿಶ್ವವಾಣಿ ಹೆಲ್ತ್ʼ ಚಾನೆಲ್‌ನ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್ ಡಂಬಳ ಉತ್ತರ ನೀಡಿದ್ದಾರೆ.
Sandalwood Oil For Skin: ಶ್ರೀಗಂಧದ ನಾಡಿನಲ್ಲಿರುವ ನಮಗೆ ಗಂಧದ ಸದ್ಗುಣಗಳ ಬಗ್ಗೆ ಮಾತಾ ಡುವುದೇನಿದೆ, ಎಲ್ಲಾ ಗೊತ್ತು…ಎಂದು ಭಾವಿಸಿದರೆ ತಪ್ಪಾದೀತು. ಗಂಧದ ಕೊರಡೊಂದನ್ನು ತೇಯ್ದು, ದೇವರಿಗೆ ಲೇಪಿಸುವುದೊ, ಅಪರೂಪಕ್ಕೊಮ್ಮೆ ಮುಖಕ್ಕೆ ಲೇಪಿಸುವುದೋ ಬಿಟ್ಟರೆ ಹೆಚ್ಚಿನ ಬಳಕೆ ಯನ್ನೇನು ಮಾಡುವುದಿಲ್ಲ ನಾವು... ಹಳೆಯ ತಲೆಮಾರಿನವರಂತೆ ಗಂಧವನ್ನು ಔಷಧೀಯ ಬಳಕೆಗೂ ಉಪಯೋಗಿಸುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಗಂಧದ ಕೊರಡು ಈಗ ಹೆಚ್ಚಿನ ಮನೆಗಳಲ್ಲಿ ಇಲ್ಲವೂ ಇಲ್ಲ. ಹಾಗಾದರೆ ಗಂಧದ ಲಾಭಗಳನ್ನು ದೊರಕಿಸಿಕೊಳ್ಳುವುದು ಹೇಗೆ…
ಐಡಿಬಿಐ ಬ್ಯಾಂಕ್ 2026ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, 1,300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅರ್ಜಿ ಪ್ರಕ್ರಿಯೆ ಮಾರ್ಚ್ 8ರಿಂದ ಆರಂಭವಾಗಿ ಮಾರ್ಚ್ 19ರವರೆಗೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಸನಾತನ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಅರ್ಹರಿಗೆ ಸಂತೋಷದಿಂದ ಮತ್ತು ನಿಸ್ವಾರ್ಥ ಮನೋಭಾವದಿಂದ ದಾನ ಮಾಡಬೇಕು. ಆದಾಯದ ಒಂದು ಭಾಗವನ್ನು ದಾನಕ್ಕೆ ಮೀಸಲಿಡುವುದು, ಸ್ವತಃ ಕೈಯಿಂದ ದಾನ ನೀಡುವುದು ಮತ್ತು ಪ್ರತಿಫಲದ ನಿರೀಕ್ಷೆಯಿಲ್ಲದೆ ಸಹಾಯ ಮಾಡುವುದು ಅತ್ಯುತ್ತಮ ದಾನವೆಂದು ಶಾಸ್ತ್ರಗಳು ಹೇಳುತ್ತವೆ.
Home Remedy to remove pimple: ಆಧುನಿಕ ಆಹಾರ ಕ್ರಮ, ಹಾರ್ಮೋನ್ ಬದಲಾವಣೆ, ಕೆಲಸದ ಒತ್ತಡ ಹೀಗೆ ಹಲವಾರು ಕಾರಣಗಳು ಮೊಡವೆ ಮೂಡಲು ಪೂರಕ ವಾತಾವರಣ ಸೃಷ್ಟಿಸುತ್ತವೆ. ಇತ್ತೀಚಿಗೆ ಈ ಸಮಸ್ಯೆ ಯುವಜನತೆಗೆ ಹೆಚ್ಚಾಗಿ ಕಾಡಲು ಕಾರಣವೇನು? ಇದಕ್ಕೆ ಯಾವ ರೀತಿಯಲ್ಲಿ ಮನೆಯಲ್ಲೇ ಮದ್ದು ಮಾಡಬಹುದು ಎಂದು ಆಯುರ್ವೇದ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.