About Us Advertise with us Be a Reporter E-Paper

ಗುರು

ಜ್ಞಾನೇಚ್ಛಾದಿಗಳ ಬೆಳವಣಿಗೆಗೆ ಪರಿಮಿತಿಯುಂಟೆ!

- ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿಸ್ವಾಮಿಗಳವರು

ಲೌಕಿಕ ದೃಷ್ಟಿಯಿಂದ ಪ್ರಪಂಚಸ್ಥಿತಿಯನ್ನು ಪರೀಕ್ಷಿಸಿ ನೋಡಿದ್ದಾಯಿತು. ಜ್ಞಾನ , ಇಚ್ಛೆ, ಫಲ, ಭೋಗ- ಇವುಗಳು ಬೆಳೆಯುತ್ತಲೇ ಹೋಗುತ್ತಿವೆ. ಆದರೆ ವಿಜ್ಞಾನಶಾಸ್ತ್ರವು ಹೊಸ ಹೊಸ ಶೋಧನೆಗಳನ್ನು ಮಾಡುತ್ತಲೇ ಹೋಗುತ್ತಿವೆ. ಆದರೆ ವಿಜ್ಞಾನ ಶಾಸ್ತ್ರವು ಹೊಸ ಹೊಸ ಶೋಧನೆಗಳನ್ನು ಮಾಡುತ್ತಲೇ ಇದೆ. ಎಣ್ಣೆಯಿಲ್ಲದ ಅನಿಲಜ್ಯೋತಿ, ವಿದ್ಯುದ್ದೀಪ- ಇವುಗಳನ್ನು ಕಂಡುಹಿಡಿದು ಕತ್ತೆಯನ್ನು ಹಿಮ್ಮೆಟ್ಟಿಸಿದ್ದಾಗಿದೆ. ಕುದುರೆಯಿಲ್ಲದ ಓಡಿಸಿ ನೂರಾರು ಜನರಿಗೆ ಪ್ರಯಾಣ ಸೌಕರ್ಯವನ್ನು ಕೊಟ್ಟದ್ದಾಗಿದೆ. ಜನರು ಸೈಕಲ್, ಮೋಟಾರ್, ಬಸ್, ಟ್ರಾಮ್- ಮುಂತಾದ ಯಾನ ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ಮರುಭೂಮಿಗಳಿಗೂ ನೀರು ಹಾಯಿಸಿ ಕೃಷಿ ಕರ್ಮವನ್ನು ಮುಂದುವರಿಸಲಾಗಿದೆ. ಆಕಾಶದಲ್ಲಿ ವಾಯುವಿಮಾನಗಳನ್ನು ರಾಕೆಟ್‌ಗಳನ್ನೂ ಹಾರಬಿಡಲಾಗಿದೆ. ಹಿಂದೆ

ಅಪರಿಹರಣೀಯವೆಂದು ಬಗೆದಿದ್ದ ಮಹಾರೋಗಗಳಿಗೂ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿದೆ. ಹಿಂದಿನ ಕಾಲದ ಚಕ್ರವರ್ತಿಗಳಿಗೂ ದುರ್ಲಭವಾಗಿದ್ದ ಭೋಗೈಶ್ವರ್ಯಗಳು ಸಾಮಾನ್ಯ ಜನರಿಗೆ ಲಭಿಸುತ್ತಿವೆ. ವಿಜ್ಞಾನ ಶಾಸ್ತ್ರವು ಬೆಳೆದಂತೆಲ್ಲ ಮನುಷ್ಯನಿಗೆ ಇಡಿಯ ಜಗತ್ತೇ ವಶವಾದೀತೇನೋ, ಸ್ವರ್ಗವನ್ನು ನರಕವಾಗಿಯೂ ನರಕವನ್ನು ಮಾಡುವ ಯುಕ್ತಿಯೂ ಹೊಳೆದೀತೇನೊ- ಎನಿಸುತ್ತದೆ. ಮನುಷ್ಯನ ಸಕಲ ಆಶೆಗಳೂ ಏಕೆ ಒಂದಾನೊಂದು ಕಾಲಕ್ಕೆ ಪೂರ್ತಿಯಾಗಬಾರದು?- ಇದು ಲೌಕಿಕ ದೃಷ್ಟಿಯನ್ನು ವ್ಯವಸ್ಥೆಗೊಳಿಸಿರುವ ವಿಜ್ಞಾನಶಾಸ್ತ್ರದವರ ಪ್ರತೀಕ್ಷೆ.

ಜ್ಞಾನ ಬೆಳೆದಷ್ಟೂ ಅಜ್ಞಾನದ ಅರಿವು
ಆದರೆ ಸ್ವಲ್ಪ ಶಾಂತ ಮನಸ್ಸಿನಿಂದ ನೋಡೋಣ. ಈ ಅಭಿವೃದ್ಧಿಗೆ ಕೊನೆ ಎಂದಿಗೆ? ಜ್ಞಾನೇಚ್ಛಾದಿಗಳ ಬೆಳವಣಿಗೆಗೆ ಪರಿಮಿತಿಯುಂಟೆ! ಕತ್ತಲೆಯಲ್ಲಿ ದೀಪವನ್ನು ತಂದರೆ ಸ್ವಲ್ಪಭಾಗದ ಕತ್ತಲೆ ಹೋಗುವುದು ನಿಜ; ಆದರೆ ಕತ್ತಲೆಯಿರುವ ವಿಶಾಲ ಪ್ರದೇಶಕ್ಕೆ ಹೋಲಿಸಿದರೆ ಅದು ಎಷ್ಟು ಸ್ವಲ್ಪ! ಹೀಗೆಯೇ ಬೆಳೆದಷ್ಟೂ ಅಜ್ಞಾನದ ಕ್ಷೇತ್ರವು ಇನ್ನಷ್ಟು ವಿಸ್ತೀರ್ಣವಾಗುವುದು ಅನುಭವಕ್ಕೆ ಬರುತ್ತಲಿದೆ. ಇಚ್ಛೆಗಳ ಪರಿಪೂರ್ತಿಯು ಆದಂತೆಲ್ಲ ಅವುಗಳು ಇನ್ನಷ್ಟು ಉದ್ದೀಪಿತವಾಗುತ್ತವೆ. ಕ್ರಿಯಾಫಲಗಳು ಕೈಗೂಡಿದಂತೆಲ್ಲ, ಹೊಸ ಹೊಸ ಭೋಗ್ಯ ವಸ್ತುಗಳ ಮತ್ತು ಭೋಗಪ್ರಕಾರಗಳ ಚಿತ್ರವು, ಮನಸ್ಸಿನ ಮುಂದೆ ಚಿತ್ರಿಸಿದಂತೆ ಕಾನಿಸಿಕೊಳ್ಳುತ್ತದೆ. ‘ಪ್ರಯತ್ನ ಮಾಡಿದರೆ ಯಾವುದು ತಾನೆ ಅಸಾಧ್ಯ? ಈಗ ಸಿದ್ಧಿಸದೆ ಹೋಗಬಹುದಾದದ್ದು ಮುಂದೆ ಮಾಡುವ ಪ್ರಯತ್ನಕ್ಕೆ ಅದೇ ಇನ್ನಷ್ಟು ಉತ್ತೇಜಕವಾಗುತ್ತದೆ. ಇದರಿಂದ ಕ್ರಿಯಾಶೀಲತೆಯೂ ಹೆಚ್ಚುತ್ತದೆ. ಅಲ್ಲವೇ?’ ಎಂದು ವಿಜ್ಞಾನಶಾಸ್ತ್ರಜ್ಞನು ಕೇಳುತ್ತಿದ್ದಾನೆ. ಅವನ ಧೈರ್ಯವೂ, ಮೆಚ್ಚತಕ್ಕದ್ದೇ ಸರಿ. ಆದರೆ ‘ಜ್ಞೇಯವೂ ಕರ್ತವ್ಯವೂ ಅವಶಿಷ್ಟವಾಗಿಲ್ಲವೆಂಬ ಕಾಲವನ್ನು ಎಂದಿಗೂ ಯಾರಿಂದಲೂ ಕಲ್ಪಿಸುವದಕ್ಕಾಗುವದಿಲ್ಲವೆಂಬುದು ಮಾತ್ರ ನಿಶ್ಚಯ. ಜ್ಞೇಯರಾಶಿಗೂ ಕರ್ತವ್ಯಶೇಷಕ್ಕೂ ಮಿತಿಯನ್ನು ಕಲ್ಪಿಸುವುದಕ್ಕೆ ಯಾವ ವಿಜ್ಞಾನಶಾಸ್ತ್ರಜ್ಞನಿಂದಲೂ ಸಾಧ್ಯವಿಲ್ಲ- ಎನ್ನುತ್ತಾನೆ’ ವೇದಾಂತಿ.

ಹೃದಯದ ಕಾಮ ನೀಗಿದಾಗ ಬ್ರಹ್ಮದರ್ಶನ
ಹಾಗಾದರೆ ನಮ್ಮ ದೃಷ್ಟಿಯು ದೋಷಯುಕ್ತವೆಂದೇ ತಿಳಿ. ನೀವು ಹೇಳುವುದೇನು? ಮನುಷ್ಯನು ಹೇಡಿಯಾಗಿ ಕೈಮುದುರಿಕೊಂಡು ಕೂತುಕೊಳ್ಳಬೇಕೆನ್ನುವಿರೇನು? ನಿಮ್ಮ ವೇದಾಂತವು ಒಂದೇ ಒಂದು ಹೊಸ ಶೋಧವನ್ನು ಮಾಡಿದೆಯೇ? ಹಸಿದವನಿಗೆ ಅನ್ನ ನರಳುತ್ತಿರುವವರಿಗೆ ನೆರಳು, ಆಸೆಯಿಂದ ಏನಾದರೂ ಬೇಕೆನ್ನುವವನಿಗೆ ಒಂದಿಷ್ಟಾದರೂ ಅದನ್ನು ಪೂರ್ತಿಗೊಳಿಸುವ ಉಪಾಯ ಉಪಾಯ- ಇವೇನಾದರೂ ನಿಮ್ಮ ಆಸರೆಯಲ್ಲಿ ಸಿಕ್ಕೀತೆ? ಎಂದು ಲೌಕಿಕ ದೃಷ್ಟಿಯ ಶಾಸ್ತ್ರಜ್ಞನು ಕೇಳಬಹುದು. ಇದಕ್ಕೆ ವೇದಾಂತ ದೃಷ್ಟಿಯಿಂದ ಉತ್ತರವನ್ನು ಹೇಳುವ ಮೊದಲು ವೇದಾಂತವಾದದ ಪರವಾಗಿ ಸಂಭಾವಯುಕ್ತಿಯನ್ನು ಮೊದಲು ಮುಂದೊಡ್ಡುವುದು ಅವಶ್ಯ.

ಸದ್ಯಕ್ಕೆ ವಿಜ್ಞಾನಶಾಸ್ತ್ರದ ದೃಷ್ಟಿಯಿಂದ ಜ್ಞಾನಾಭಿವೃದ್ಧಿಯಾಗುವುದೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲವಾದರೂ ಆ ಜ್ಞಾನವು ಬೆಳೆದಂತೆಲ್ಲ ಮನುಷ್ಯನ ಇಚ್ಛೆಗಳೂ ಕರ್ತವ್ಯಗಳೂ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇವೆ ಎಂಬುದನ್ನು ಇಬ್ಬರೂ ಒಪ್ಪಿಕೊಳ್ಳಬೇಕಾಗಿದೆ. ‘ವಿಷಯಗಳ ಭೋಗದಿಂದ ಆಗುವ ಪರಲೋಕದಲ್ಲಾಗುವ ಅಪ್ರಾಕೃತವಾದ ಮಹಾಸುಖ- ಇವೆರಡಕ್ಕಿಂತಲೂ ತೃಷ್ಣಾಕ್ಷಯ ಸುಖವು ಎಷ್ಟೋ ಪಾಲು ಹೆಚ್ಚಿನದು’ ಎಂದು ವೇದಾಂತಿಗಳು ಹೇಳುತ್ತಾರೆ. ವೇದಾಂತ ಜನ್ಯ ಜ್ಞಾನವಾದ ಮೇಲೆ ಅದು ಅನುಭವಕ್ಕೆ ಬರುತ್ತದೆ. ಹೃದಯದ ಕಾಮಗಳೆಲ್ಲವೂ ಹೋಗಿರುವಾಗ ಮರ್ತ್ಯನು ಅಮೃತನಾಗಿರುತ್ತಾನೆ. ಇಲ್ಲಿಯೇ ಬ್ರಹ್ಮವನ್ನು ಪಡೆದುಕೊಂಡಿರುತ್ತಾನೆ. ತನ್ನ ಪರಮಾರ್ಥ ರೂಪಕ್ಕೂ ಬ್ರಹ್ಮಕ್ಕೂ ಯಾವ ವೈಲಕ್ಷಣ್ಯವೂ ಇಲ್ಲ ಎಂಬುದನ್ನು ಕಂಡುಕೊಂಡಿರುತ್ತಾನೆ-ಎಂದು ವೇದಾಂತವು ಸಾರುತ್ತಿದೆ. ಆ ಅನುಭವವು ಬಂದಾಗ ಯಾವ ಪ್ರತಿಕರ್ತವನ್ನೂ ಒಡ್ಡುವುದಕ್ಕೆ ಆಗುವುದೇ ಇಲ್ಲವೆಂಬುದು ಸ್ಪಷ್ಟ.
(ಜೀವಂತ ವೇದಾಂತ ಆಯ್ದ ಭಾಗ)

ಬುದ್ಧನು ದೇವರ ಬಗ್ಗೆ ಏನು ಹೇಳಿದ?
ಅವನು ದೇವರ ವಿಷಯವನ್ನೇ ಎತ್ತಲಿಲ್ಲ. ಬದುಕಿನ ಆಳ ಸತ್ಯಗಳನ್ನೇ ಕೆದಕುತ್ತಾ ಹೋದ. ಅನ್ವೇಷಿಸಿದ, ಬೋಧಿಸಿದ. ದೇವರ ಬಗ್ಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲವೆ0ದ.
ಒಮ್ಮೆ ಬುದ್ಧನನ್ನು ಯಾರೋ ಕೇಳಿದರು,
’ದೇವರಿದ್ದಾನೆಯೇ?’ ಎ0ದು.
’ದೇವರಿದ್ದಾನೆ0ದು ನಾನು ಹೇಳಿದೆನೇ?’ ಎ0ದು ಬುದ್ಧ ಮರುಪ್ರಶ್ನಿಸಿದ.
ಆಗ ಆ ವ್ಯಕ್ತಿ, ’ಹಾಗಾದರೆ ದೇವರಿಲ್ಲವೆ0ದಾಯ್ತು.’ ಎ0ದು ಹೇಳಿದ.
’ದೇವರಿಲ್ಲವೆ0ದು ಹೇಳಿದೆನೇ ನಾನು?’ ಎ0ದು ಬುದ್ಧ ಹೇಳಿದ.

ಪೊಳ್ಳು ವಾದ ವಿವಾದವನ್ನು ನಿಲ್ಲಿಸಿ ಜನರು ತಮ್ಮ ದುಃಖದಿ0ದ ಪಾರಾಗಲು ಏನಾದರೂ ಮಾಡಬೇಕೆ0ದು ಅವನ ಬಯಕೆ. ಆದ್ದರಿ0ದ ಅವನೆ0ದ;
’ಮನೆಗೆ ಬೆ0ಕಿ ಬಿದ್ದಾಗ ನೀವು ಬೆ0ಕಿ ಹೇಗೆ ಸ0ಭವಿಸಿತೆ0ದು ತಿಳಿಯಲು ಪ್ರಯತ್ನಿಸುತ್ತೀರೋ ಅಥವಾ ಮೊದಲು ಆ ಬೆ0ಕಿಯನ್ನು ಆರಿಸಲು ಪ್ರಯತ್ನಿಸುವಿರೋ? ಆದರೆ ನಮ್ಮ ಮೂರ್ಖತನದಿ0ದಾಗಿ ಮೊದಲು ಅದರ ಮೂಲವನ್ನು ಹುಡುಕಲು ಹೋಗುತ್ತೇವೆ. ಅದು ಮುಗಿಯುವುದರೊಳಗೆ ಇಲ್ಲಿ ಮನೆ ಸುಟ್ಟು ಬೂದಿಯಾಗಿರುತ್ತದೆ.’

Tags

Related Articles

Leave a Reply

Your email address will not be published. Required fields are marked *

Language
Close